Sheelu Abraham: ಮಲಯಾಳಂನ ಜನಪ್ರಿಯ ನಟಿ ಶೀಲು ಅಬ್ರಹಾಂ (Sheelu Abraham) ಅವರ ವಿವಾಹೇತರ ಸಂಬಂಧಗಳ ಕುರಿತಾಗಿ ನೀಡಿರುವ ಹೇಳಿಕೆಗಳು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ ಮತ್ತು ಹೊಸ ಚರ್ಚೆಗೆ ಇದು ಕಾರಣವಾಗಿದ್ದು ಅನೇಕರು ನಟಿಯ ಮಾತಿಗೆ ತೀವ್ರವಾದ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಹಾಗಾದರೆ ನಟಿ ಹೇಳಿದ್ದೇನು ? ಇಲ್ಲಿದೆ ವಿವರ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನವನ್ನು ನೀಡಿದ ನಟಿಯು ವೈವಾಹಿಕ ಜೀವನದಲ್ಲಿನ ದೋಷಗಳು ಇಂತಹ ವಿವಾಹೇತರ ಸಂಬಂಧಗಳಿಗೆ (Extra Marital Affairs) ಕಾರಣವಾಗಬಹುದು. ಆಗ ಅದನ್ನೂ ನಾವು ದೂಷಿಸಲು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ.
ಅ ತ್ಯಾ ಚಾರ ತಪ್ಪು ಆದರೆ ಇಷ್ಟ ಪಟ್ಟು ಹೋಗುವುದರಲ್ಲಿ ತಪ್ಪಿಲ್ಲ. ಇಷ್ಟಪಟ್ಟು ಹತ್ತು ಸಲ ಹೋಗಿ ಅನಂತರ ಬಲಾತ್ಕಾರ ಆಯಿತು ಅಂತ ಹೇಳೋದು ತಪ್ಪು. ಚಲನ ಚಿತ್ರೋದ್ಯಮದಲ್ಲಿ ಸಂಬಂಧಗಳ ಬಗ್ಗೆ ಸಾರ್ವಜನಿಕರಿಗೆ ನೇರವಾಗಿ ತಿಳಿದಿಲ್ಲವಾದರೂ ಆಗಾಗ ಹೊರ ಬರುವ ವದಂತಿಗಳು ಮತ್ತು ವರದಿಗಳಿಂದ ಎಲ್ಲರಿಗೂ ತಿಳಿದು ಬರುತ್ತದೆ.
ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯ ಇರುವವರು ಇದ್ದಕ್ಕಿದ್ದ ಹಾಗೆ ಕಾನೂನು ಮೊಕದ್ದಮೆ ಹೂಡುತ್ತಾರೆ ಎಂದಿದ್ದಾರೆ ನಟಿ. ನಟಿ ಶೀಲೂ ಅವರ ಈ ಮಾತುಗಳೀಗ ವೈರಲ್ ಆಗಿದ್ದು, ಇದರ ಬಗ್ಗೆ ಪರ ವಿರೋಧ ಮಾತುಗಳು ಕೇಳಿ ಬರುತ್ತಿದೆ. ಬಹಳಷ್ಟು ಜನ ನಟಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟೀಕಿಸುತ್ತಿದ್ದಾರೆ.
Karthik Mahesh: ಹೊಸ ಸಿನಿಮಾದಲ್ಲಿ ವಿಲನ್ ಆದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್