Vijay Raaz : ಅಜಯ್ ದೇವಗನ್ ಗೆ ವಿಶ್ ಮಾಡ್ಲಿಲ್ಲ, ಹಿರಿಯ ನಟನನ್ನ ಸಿನಿಮಾದಿಂದ ಹೊರದಬ್ಬಿದ ನಿರ್ಮಾಪಕರು

Written by Soma Shekar

Published on:

---Join Our Channel---

Vijay Raaz : ಸಿನಿಮಾ ರಂಗ ಹೊರ ಜಗತ್ತಿಗೆ ಕಂಡಷ್ಟೇ ಸುಂದರವಲ್ಲ ಅನ್ನೋದಕ್ಕೆ ಅಗಾಗ ಹೊರ ಬರುವ ಕೆಲವೊಂದು ಸುದ್ದಿಗಳು ಸಾಕ್ಷಿಗಳಾಗುತ್ತವೆ. ಹೌದು, ಸಿನಿಮಾದಲ್ಲಿ ನಾಯಕನಾಗಿದ್ದ ಸ್ಟಾರ್ ನಟನಿಗೆ ನಮಸ್ಕಾರ ಹೇಳಲಿಲ್ಲ ಎನ್ನುವ ಕಾರಣಕ್ಕೆ ಒಬ್ಬ ನಟನನ್ನು ಸಿನಿಮಾದಿಂದಲೇ ತೆಗೆದುಹಾಕಿದ್ದ ಘಟನೆಯೊಂದು ಬಾಲಿವುಡ್ ನಲ್ಲಿ ನಡೆದಿದ್ದು, ಈಗ ಆ ವಿಷಯ ಹೊರ ಬಂದಿದ್ದು ಎಲ್ಲರಿಗೂ ಅಚ್ಚರಿಯ ಜೊತೆಗೆ ಶಾಕ್ ಅನ್ನು ಸಹಾ ನೀಡಿದೆ.

ಬಾಲಿವುಡ್ ನ ಜನಪ್ರಿಯ ನಟ ಅಜಯ್ ದೇವಗನ್ ನಾಯಕನಾಗಿರುವ ಸನ್ ಆಫ್ ಸರ್ದಾರ್ 2 (Son Of Sardar 2) ಸಿನಿಮಾ ಕೆಲಸಗಳು ಆರಂಭವಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಮತ್ತೊಬ್ಬ ಜನಪ್ರಿಯ ನಟ ವಿಜಯ್ ರಾಝ್ (Vijay Raaz) ಅವರು ನಟಿಸುತ್ತಿದ್ದರು. ಆದರೆ ಈಗ ಈ ನಟನನ್ನ ಸಿನಿಮಾದಿಂದಲೇ ಹೊರಗೆ ಕಳಿಸಲಾಗಿದೆ ಎನ್ನುವ ವಿಷಯ ಹೊಸ ಚರ್ಚೆಯೊಂದಕ್ಕೆ ಕಾರಣವಾಗಿದೆ.

ನಡೆದ ಘಟನೆಯ ಬಗ್ಗೆ ತಿಳಿಸಿರುವ ವಿಜಯ್ ರಾಝ್ ಅವರು, ತಾನು ವ್ಯಾನಿಟಿ ವ್ಯಾನ್ ನಿಂದ ಹೊರಗೆ ಬರುವಾಗ ಸುಮಾರು 25 ಮೀಟರ್ ದೂರದಲ್ಲಿ ನಾಯಕ ನಟ ಅಜಯ್ ದೇವಗನ್ ಅವರು ನಿಂತಿದ್ದರು. ಬಹುಶಃ ಅವರು ಬ್ಯುಸಿಯಾಗಿದ್ದಾರೆ ಎನ್ನುವ ಕಾರಣಕ್ಕೆ ನಾನು ಅವರನ್ನು ಮಾತನಾಡಿಸದೇ, ವಿಶ್ ಮಾಡದೇ ಅಲ್ಲಿಂದ ಮುಂದೆ ಹೋದೆ. ಅದಾದ ಸ್ವಲ್ಪ ಹೊತ್ತಿನ ನಂತರ ನಿರ್ಮಾಪಕರು ನನ್ನ ಬಳಿ ಬಂದು ಸಿನಿಮಾದಿಂದ ನನ್ನನ್ನು ತೆಗೆದು ಹಾಕುತ್ತಿರುವುದಾಗಿ ಹೇಳಿದರು.

ನಾನು ಚಿತ್ರತಂಡದ ಬೇರೆ ಯಾರನ್ನೂ ಭೇಟಿ ಮಾಡಿರಲಿಲ್ಲ. ಅಜಯ್ ದೇವಗನ್ (Ajay Devgan) ಅವರನ್ನು ಮಾತನಾಡಿಸದೇ ಬಂದ ಕೆಲವು ನಿಮಿಷಗಳ ನಂತರ ನನ್ನನ್ನ ಸಿನಿಮಾದಿಂದ ತೆಗೆದು ಹಾಕಿದ್ದರೆ. ಅವರೆಲ್ಲಾ ಬಹಳ ಪ್ರಭಾವೀ ವ್ಯಕ್ಯಿಗಳೆಂದು ಅಜಯ್ ರಾಝ್ ಅವರು ಹೇಳಿದ್ದಾರೆ. ಆದರೆ ನಿರ್ಮಾಪಕರು ಮಾತ್ರ ವಿಜಯ್ ರಾಝ್ ಅವರ ಬೇಡಿಕೆಗಳನ್ನು ಪೂರೈಸಲಾಗದೇ ಅವರ ವರ್ತನೆಗೆ ಬೇಸತ್ತು ಸಿನಿಮಾದಿಂದ ತೆಗೆದು ಹಾಕಿದ್ದೇವೆಂದು ಹೇಳಿದ್ದಾರೆ.

Sreeleela : ಟಾಲಿವುಡ್ ನ ಆ ಸ್ಟಾರ್ ಸಿನಿಮಾಕ್ಕೆ NO ಹೇಳಿ ರಿಜೆಕ್ಟ್ ಮಾಡಿದ ಶ್ರೀಲೀಲಾ; ಶುರುವಾಯ್ತು ಬಿಸಿ ಬಿಸಿ ಚರ್ಚೆ

Leave a Comment