Dr.Bro: ಹೊಸ ಕಂಪನಿ ಶುರು ಮಾಡಿದ ಡಾ.ಬ್ರೋ; ಇನ್ಮೇಲೆ ಟ್ರಾವೆಲ್ ವೀಡಿಯೋ ಮಾಡಲ್ವಾ? ನೆಟ್ಟಿಗರ ಪ್ರಶ್ನೆ

Written by Soma Shekar

Published on:

---Join Our Channel---

Dr. Bro : ಡಾಕ್ಟರ್ ಬ್ರೋ (Dr. Bro) ಈ ಹೆಸರಿಗೆ ಪರಿಚಯದ ಅಗತ್ಯವೇ ಇಲ್ಲ ಎನ್ನುವಷ್ಟು ಜನಪ್ರಿಯತೆ ಹಾಗೂ ಹೆಸರನ್ನು ಪಡೆದುಕೊಂಡಿದ್ದಾರೆ ಗಗನ್ ಶ್ರೀನಿವಾಸ್. ಡಾಕ್ಟರ್ ಬ್ರೋ ಹೆಸರಿನ ಸುಪ್ರಸಿದ್ಧ ಯುಟ್ಯೂಬ್ ಚಾನೆಲ್ (Youtube Channel) ಅನ್ನು ಹೊಂದಿರುವ ಇವರು ಈಗಾಗಲೇ ಕನ್ನಡಿಗರಿಗೆ ವಿಶ್ವದ ಹಲವು ರಾಷ್ಟ್ರಗಳನ್ನ ವೀಡಿಯೋಗಳ ಮೂಲಕ ತಮ್ಮದೇ ಆದ ಸ್ಟೈಲ್ ನಲ್ಲಿ ವಿವರಿಸಿ ಪರಿಚಯಿಸಿದ್ದಾರೆ.

ವಿಶ್ವವನ್ನು ಸುತ್ತುತ್ತಾ, ಅಲ್ಲಿನ ವಿಶೇಷತೆಗಳನ್ನು ವಿವರಿಸುತ್ತಾ ಜನರ ಮನಸ್ಸನ್ನು ಗೆದ್ದಿದ್ದ ಗಗನ್ ಅವರೀಗ ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತುವ ಅವಕಾಶವೊಂದನ್ನು ಮಾಡಿಕೊಡಲು ಮುಂದಾಗಿದ್ದಾರೆ. ಹೌದು, ಬೆಂಗಳೂರಿನಲ್ಲಿ ಡಾ. ಬ್ರೋ ಅವರ ಹೊಸ ಕಚೇರಿ ಶುಭಾರಂಭ ಕಂಡಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ.

ವಿಜಯನಗರದಲ್ಲಿ ಡಾಕ್ಟರ್ ಬ್ರೋ, ಗೋ ಪ್ರವಾಸ (Go pravasa) ಹೆಸರಿನ ಕಚೇರಿ ತೆರೆದಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಡಾ. ಬ್ರೋ ಅವರ ಕಚೇರಿ ಉದ್ಘಾಟನೆಯಾಗಿದೆ. ಗಗಮ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಚೇರಿ ಮುಂದೆ ನಿಂತಿರುವಂತಹ ಒಂದು ಫೋಟೋವನ್ನ ಶೇರ್ ಮಾಡಿದ್ದಾರೆ.

ಫೋಟೋ ಜೊತೆಗೆ ಅವರು, 78ನೇ ಸ್ವಾತಂತ್ರ್ಯ ದಿನದಂದು 🇮🇳 ಗೋ ಪ್ರವಾಸದ ಹೊಸ ಆಫೀಸ್ ಅನ್ನು ವಿಜಯನಗರದಲ್ಲಿ ತೆರೆಯಲಾಗಿದೆ. ಪ್ರಯಾಣದ ಉತ್ಸಾಹಿ ಜನರ ಭಾಗವಾಗಲು ನನಗೆ ಸಂತೋಷವಾಗ್ತಿದೆ ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಗೆ ಬಹಳಷ್ಟು ಜನ ಲೈಕ್ ನೀಡಿದ್ದು,‌ ಅನೇಕರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಅನೇಕರು ಟ್ರಾವೆಲ್ ಮಾಡೋದನ್ನ ನಿಲ್ಲಿಸಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

SeethaRama: ಡಾಕ್ಟರ್ ಹೆಸರು ಕೇಳಿ ಬೆಚ್ಚಿ ಬಿದ್ದ ಸೀತಾ, ಹರಿದ ರಕ್ತ; ಸಿಹಿಯ ಗುಟ್ಟು ರಟ್ಟಾಗೋ ಸಮಯ ಬಂದಾಯ್ತು

Leave a Comment