Singer Suchitra : ಗಾಯಕಿ ಸುಚಿತ್ರಾ (Singer Suchitra) ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದು ಮಾತ್ರ ತಾವು ನೀಡಿದ ಶಾಕಿಂಗ್ ಹೇಳಿಕೆಗಳಿಂದ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಳೆದ ಒಂದಷ್ಟು ವರ್ಷಗಳಿಂದಲೂ ಇವರು ತಾವು ನೀಡವ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಹೇಳಿದ ವಿಚಾರಗಳಂತೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಚರ್ಚೆಗಳಿಗೆ ಕಾರಣವಾಗಿತ್ತು.
ತಮ್ಮ ಮಾಜಿ ಪತಿಯ ಕುರಿತಾಗಿಯೂ ಆಘಾತಕಾರಿ ಕಾಮೆಂಟ್ಗಳನ್ನು ಮಾಡಿದ್ದ ಸುಚಿತ್ರಾ ಈಗ ಆ ವಿಚಾರವಾಗಿ ಕ್ಷಮೆಯನ್ನ ಕೋರಿದ್ದಾರೆ. ಸುಚಿತ್ರಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ (Karthik Kumar) ಸೇರಿದಂತೆ ನಟ ಧನುಷ್ (Dhanush) ಮತ್ತು ಬಾಲಿವುಡ್ ನಟ ಶಾರೂಖ್ ಖಾನ್ (Shah Rukh Khan) ಅವರನ್ನು ಸಹಾ ಸಲಿಂಗ ಕಾಮಿ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದರು.
ಈ ಸುದ್ದಿ ಹೊರಗೆ ಬಂದ ಮೇಲೆ ಸುಚಿತ್ರಾ ಅವರ ಮಾಜಿ ಪತಿ ನಟ ಕಾರ್ತಿಕ್ ಕುಮಾರ್ ಮಾನನಷ್ಟ ಮೊಕದ್ದಮೆಯನ್ನು ಹೂಡುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಚಿತ್ರಾ ತಮ್ಮ ಮಾತಿನ ವರಸೆಯನ್ನು ಬದಲಿಸಿ, ಕ್ಷಮೆ ಯಾಚಿಸಿದ್ದು ವೀಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರನ್ನು ಗೇ ಎಂದು ಕರೆದಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ.
ಅವರ ವೃತ್ತಿ ಜೀವನ ಹಾಳು ಮಾಡೋ ಉದ್ದೇಶ ನನಗಿಲ್ಲವಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದು, ಕಾರ್ತಿಕ್ ಕೊಟ್ಟಿರುವ ದೂರನಿಂಸ ಆಗಾಗ ಪೊಲೀಸರಿಂದ ಕರೆಗಳು ಬರುತ್ತಿವೆ. ಆದ್ದರಿಂದ ನಾನು ತನ್ನ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆಂದು ಸುಚಿತ್ರಾ ವೀಡಿಯೋದಲ್ಲಿ ಹೇಳಿದ್ದಾರೆ.
ಅಲ್ಲದೇ ಕಾರ್ತಿಕ್ ಒಳ್ಳೆಯ ವ್ಯಕ್ತಿ ಎಂದೂ ಈ ವಿವಾದಕ್ಕೆ ಪೂರ್ಣ ವಿರಾಮ ಹಾಕಲು ಬಯಸಿರುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅನಂತರ ವೀಡಿಯೋವನ್ನು ಡಿಲೀಟ್ ಸಹಾ ಮಾಡಿದ್ದಾರೆ. ಮಾಜಿ ಪತಿಗೆ ಮೇಲ್ ಮಾಡಿ ಕ್ಷಮೆಯನ್ನು ಕೇಳುವುದಾಗಿ ಅವರು ಹೇಳಿದ್ದಾರೆ.
Chanakya Niti : ಇಂತಹ ಜನ ಸದಾ ನೋವಿನಲ್ಲೇ ಇರ್ತಾರೆ, ಆಚಾರ್ಯ ಚಾಣಾಕ್ಯರ ಮಾತು ಒಪ್ಪಲೇಬೇಕು