Evol Movie : ಸೆನ್ಸಾರ್ ಬ್ಯಾನ್ ಮಾಡಿದ ಬೋಲ್ಡ್ ಕಂಟೆಂಟ್ ಸಿನಿಮಾ ಈಗ OTT ಯಲ್ಲಿ ಬಿಡುಗಡೆ, ಯಾವುದು ಈ ಸಿನಿಮಾ

Written by Soma Shekar

Published on:

---Join Our Channel---

Evol Movie: ಓಟಿಟಿ ಪ್ಲಾಟ್ ಫಾರಂ (OTT) ಬಂದ ಮೇಲೆ ಯಾವೆಲ್ಲಾ ದೃಶ್ಯಗಳಿಗೆ ಬೆಳ್ಳಿ ತೆರೆಯ ಮೇಲೆ ನಿಷೇಧವಿತ್ತೋ ಅಂತಹ ಎಲ್ಲಾ ದೃಶ್ಯಗಳು ಯಾವುದೇ ಅಡೆ ತಡೆಯಿಲ್ಲದೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಹೌದು, ಹಿಂಸೆ, ಥ್ರಿಲ್ಲರ್, ರೋಮ್ಯಾನ್ಸ್ ಮಾತ್ರವೇ ಅಲ್ಲದೇ ಹಸಿ ಬಿಸಿ ದೃಶ್ಯಗಳು ಕೂಡಾ ಓಟಿಟಿಯಲ್ಲಿ ಯಾವುದೇ ಅಡಚಣೆ ಅನ್ನೋದು ಇಲ್ಲದೇ ಪ್ರಸಾರವಾಗುತ್ತದೆ.

ಈಗ ಆಹಾ ಓಟಿಟಿ ಪ್ಲಾಟ್ ಫಾರಂನಲ್ಲಿ ಅಂತದ್ದೇ ಒಂದು ಬೋಲ್ಡ್ ಕಂಟೆಂಟ್ ಇರುವ ಸಿನಿಮಾ ಬಿಡುಗಡೆಯಾಗ್ತಿದೆ. ಲವ್ ಗೆ ವಿರುದ್ಧವಾದ ಪದ ಜೋಡಣೆ ಇರುವ ಎವೋಲ್ (Evol Movie) ಸಿನಿ ಪ್ರಿಯರ ಮನಸ್ಸನ್ನು ಗೆಲ್ಲುವುದಕ್ಕಾಗಿ ಓಟಿಟಿ ಯಲ್ಲಿ ಸ್ಟ್ರೀಮಿಂಗ್ ಆಗಲು ಸಿದ್ಧತೆಗಳನ್ನು ನಡೆಸಿದೆ.‌ ಇದು ಪ್ರೀತಿಗೆ ವಿರುದ್ಧವಾದ ಪರಿಕಲ್ಪನೆ ಹೊಂದಿರುವ ಕಥೆಯಾಗಿದೆ.

ಪ್ರೀತಿ ಅನ್ನೋದು ಕಾಮಕ್ಕೆ ತಿರುಗಿದರೆ ಏನಾಗುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಸಿದ್ಧವಾದ ಮೇಲೆ ಥಿಯೇಟರ್ ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗದಂತೆ ಸೆನ್ಸಾರ್ ಮಂಡಳಿ ನಿಷೇಧವನ್ನು ಹಾಕಿತ್ತು. ಆದರೆ ಈಗ ಈ ಸಿನಿಮಾ ಓಟಿಟಿ ಮೂಲಕ ಸ್ಟ್ರೀಮಿಂಗ್ ಆಗುವುದನ್ನು ಕೇಳಿ ಅನೇಕರು ಥ್ರಿಲ್ ಆಗಿದ್ದಾರೆ.

ರಾಮ್ ವೆಲಗಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಜೋಡಿಗಳ ನಡುವಿನ ಕಥೆಯನ್ನು ಬೋಲ್ಡ್ ಆಗಿ ತೋರಿಸಲಾಗಿದೆ. ಆಗಸ್ಟ್ 15 ಅಂದರೆ ಇಂದೇ ಎವೋಲ್ ಸ್ಟ್ರೀಮಿಂಗ್ ಆಗುತ್ತಿದ್ದು, ಆಹಾ ಓಟಿಟಿ ಪ್ಲಾಟ್ ಫಾರಂ ಈ ಮೂಲಕ ಬೋಲ್ಡ್ ಕಂಟೆಂಟ್ ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಹಾಗೆ ಕಾಣುತ್ತಿದೆ.

Sonakshi Sinha: ತಾಳ್ಮೆ ಕಳ್ಕೊಂಡ ಶತೃಘ್ನ ಸಿನ್ಹಾ, ಮಗಳು ಸೋನಾಕ್ಷಿ ಮದುವೆ ಬಗ್ಗೆ ಮನಸ್ಸಲ್ಲಿದ್ದ ಸಿಟ್ಟು ಹೊರ ಬಂತು

Leave a Comment