Ayodhya: ಭಾರಿ ಭದ್ರತೆಯ ಅಯೋಧ್ಯೆಯ ರಾಮಪಥ, ಕಂಬ ಸಹಿತ ಲಕ್ಷಗಳ ಬೆಲೆಯ ಲೈಟ್ ಗಳನ್ನ ಎಗರಿಸಿದ ಕಳ್ಳರು

Written by Soma Shekar

Published on:

---Join Our Channel---

Ayodhya : ರಾಮನಗರಿ ಎಂದೇ ಖ್ಯಾತಿಯನ್ನು ಪಡೆದಿರುವ ಅಯೋಧ್ಯೆಯಲ್ಲಿ (Ayodhya) ತೀವ್ರ ಬಿಗಿ ಭದ್ರತೆ ಇರುವ ವಿಚಾರ ತಿಳಿದೇ ಇದೆ. ಆದರೆ ಇಂತಹ ಬಿಗಿ ಭದ್ರತೆಯ ನಡುವೆಯೂ ಈಗ ಅಲ್ಲಿನ ಪೊಲೀಸರಿಗೆ ಹೊಸ ತಲೆನೋವೊಂದು ಶುರುವಾಗಿದೆ. ಹೌದು, ಅಯೋಧ್ಯೆಯ ಭಕ್ತಿಪಥ (Bhakti Path) ಹಾಗೂ ರಾಮಪಥದಲ್ಲಿ (Ram Path) ಅಳವಡಿಸಲಾಗಿರುವ ಲಕ್ಷಾಂತರ ರೂ.‌ಬೆಲೆ ಬಾಳುವು ಬಿದಿರು ಹಾಗೂ ಪ್ರಾಜೆಕ್ಟರ್ ಲೈಟ್‌ಗಳು ಇದ್ದಕ್ಕಿದ್ದಂತೆ ಕಾಣೆಯಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಫ್ಐಆರ್ ದಾಖಲಾಗಿದ್ದು, ಇಲ್ಲಿ 3,800 ಬಿದಿರುಗಳು ಹಾಗೂ 36 ಪ್ರಾಜೆಕ್ಟರ್‌ ಲೈಟ್‌ಗಳನ್ನು ಕಳ್ಳರು ಉಡಾಯಿಸಿಕೊಂಡು ಹೋಗಿದ್ದು, ಇವುಗಳ ಬೆಲೆಯು ಬರೋಬ್ಬರಿ 50 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಯೋಧ್ಯೆ ಸುಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರವಾಗಿದ್ದು, ಬಿಗಿ ಭದ್ರತೆಯಿರುವ ಈ ತಾಣದಲ್ಲಿ ಇಂತಹ ಕಳ್ಳತನ ಅಚ್ಚರಿಗೆ ಕಾರಣವಾಗಿದೆ.

ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇದೇ ಆಗಸ್ಟ್ 9 ರಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಅಯೋಧ್ಯೆಯ ಅಬಿವೃದ್ಧಿ ಪ್ರಾಧಿಕಾರದಿಂದ ರಾಮಪಥ ಹಾಗೂ ಭಕ್ತಿಪಥದಲ್ಲಿ ಲೈಟಿಂಗ್ಸ್ ಗಳನ್ನು ಮಾಡುವುದಕ್ಕೆ ಗುತ್ತಿಗೆಯನ್ನು ಪಡೆದಿರುವ ಯಶ್ ಎಂಟರ್‌ ಪ್ರೈಸಸ್‌ ಹಾಗೂ ಕೃಷ್ಣ ಅಟೋಮೊಬೈಲ್ಸ್‌ ಸಂಸ್ಥೆಗಳು ಪೊಲೀಸರಿಗೆ ದೂರನ್ನು ನೀಡಿವೆ.

ಎಫ್‌ಐಆರ್‌ ನಲ್ಲಿ, ಈ ಸಂಸ್ಥೆಗೆ ಮೇ ತಿಂಗಳಲ್ಲೇ ಈ ಕಳ್ಳತನ ಪ್ರಕರಣ ಗಮನಕ್ಕೆ ಬಂದಿರುವುದಾಗಿ ಈಗ ಆಗಸ್ಟ್ 9 ರಂದು ಈ ವಿಚಾರವಾಗಿ ದೂರು ದಾಖಲಿಸಿರುವುದಾಗಿ ತಿಳಿಸಲಾಗಿದೆ. ರಾಮಪಥದಲ್ಲಿ ಒಟ್ಟು 6400 ದೀಪಗಳನ್ನು ಅಳವಡಿಸಲಾಗಿತ್ತು. ಮಾರ್ಚ್ ನಲ್ಲಿ ಪರಿಶೀಲನೆ ಮಾಡಿದಾಗ ಎಲ್ಲಾ ಲೈಟ್ ಗಳು ಇದ್ದವು ಎನ್ನಲಾಗಿದೆ. ಆದರೆ ಮೇ ನಲ್ಲಿ ನಡೆದ ಪರಿಶೀಲನೆಯಲ್ಲಿ ಲೈಟ್ ಗಳು ಮಿಸ್ ಆಗಿರುವುದು ಗೊತ್ತಾಗಿದೆ.‌

Actress Sithara: ಮನಸ್ಸಿನಲ್ಲಿ ಅವನ ನೆನಪಿದೆ: ವಯಸ್ಸು 51 ಆದ್ರೂ ಸಿತಾರಾ ಮದುವೆಯಾಗದ ಸಿತಾರ ಮನಸ್ಸಿನಲ್ಲಿ ಇರುವುದು ಯಾರು?

Leave a Comment