Actor Yash : ಟಾಕ್ಸಿಕ್ ಗೂ ಮೊದಲೇ ಸಲ್ಮಾನ್ ಖಾನ್ ಬ್ಯಾನರ್ ನಲ್ಲಿ ರಾಖಿ ಭಾಯ್; ಥ್ರಿಲ್ ಆದ ಯಶ್ ಫ್ಯಾನ್ಸ್

Written by Soma Shekar

Published on:

---Join Our Channel---

Actor Yash: ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸದ್ಯಕ್ಕೆ ನಟನ ‘ಟಾಕ್ಸಿಕ್’ (Toxic Film) ಸಿನಿಮಾಗಾಗಿ ನೂರು ನಿರೀಕ್ಷೆಗಳನ್ನ ಇಟ್ಟುಕೊಂಡು ಕಾಯುತ್ತಿರುವಾಗಲೇ ಹೊಸದೊಂದು ಅಪ್ಡೇಟ್ ಅಭಿಮಾನಿಗಳಿಗೆ ಭರ್ಜರಿ ಖುಷಿಯನ್ನು ನೀಡಿದೆ. ಹೌದು, ಯಶ್ ಅವರು ಟಾಕ್ಸಿಕ್ ಗೂ ಮುನ್ನ ಸಲ್ಮಾನ್ ಖಾನ್ (Salman Khan) ಬ್ಯಾನರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಯಶ್ (Actor Yash) ಅವರ ಅಭಿಮಾನಿಗಳಿಗೆ ಖಂಡಿತ ಒಂದು ದೊಡ್ಡ ಸರ್ಪ್ರೈಸ್ ಸಿಕ್ಕಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಆ್ಯಂಗ್ರಿ ಯಂಗ್ ಮ್ಯಾನ್’ (Angry Young Man) ಬಾಲಿವುಡ್ ಟ್ರೈಲರ್‌ನಲ್ಲಿ ಸ್ಟಾರ್ ನಟ ಯಶ್ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಫ್ಯಾನ್ಸ್ ಗೆ ಅಚ್ಚರಿಯ ಜೊತೆಗೆ ಶಾಕ್ ಸಹಾ ಆಗಿದೆ. ಆ್ಯಂಗ್ರಿ ಯಂಗ್ ಮ್ಯಾನ್ ಒಂದು ಡಾಕ್ಯುಮೆಂಟರಿ ಆಗಿದೆ.

ಸಲ್ಮಾನ್ ಖಾನ್ ಇದನ್ನು ನಿರ್ಮಾಣ ಮಾಡಿದ್ದು, ಇದು ಅವರ ತಂದೆ, ಬರಹಗಾರ ಸಲೀಂ ಖಾನ್ ಮತ್ತು ಜಾವೇದ್ ಕುರಿತು ಡಾಕ್ಯುಮೆಂಟರಿ ಆಗಿದ್ದು, ಅದರ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಡಾಕ್ಯುಮೆಂಟರಿ ಕುರಿತಾಗಿ ಸಲ್ಮಾನ್ ಖಾನ್, ಹೃತಿಕ್ ರೋಷನ್, ಜಯಾ ಬಚ್ಚನ್, ಬಿಗ್ ಬಿ ಅಮಿತಾಬ್ ಸೇರಿದಂತೆ ಹಲವು ಸ್ಟಾರ್ ಗಳು ಸಲೀಂ ಮತ್ತು ಜಾವೇದ್ ಅವರ ಸಾಧನೆ ಕುರಿತಾಗಿ ಮಾತನಾಡಿದ್ದಾರೆ.

ದಕ್ಷಿಣ ಸಿನಿಮಾ ರಂಗದಿಂದ ಈ ಟ್ರೈಲರ್ ನಲ್ಲಿ ಕಾಣಿಸಿಕೊಳ್ಳುವುದು ಯಶ್ (Actor Yash) ಅವರು ಮಾತ್ರ ಎನ್ನುವುದು ಸಹಾ ವಿಶೇಷವಾಗಿದೆ. ಈ ಡಾಕ್ಯುಮೆಂಟರಿ ಇದೇ ಆಗಸ್ಟ್ 20 ರಂದು ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಡಾಕ್ಯುಮೆಂಟರಿ ಕುರಿತಾಗಿ ಯಶ್ ಅವರು ಆಡಿರುವ ಮಾತುಗಳು ಅವರ ಅಭಿಮಾನಿಗಳ ಗಮನ ಸೆಳೆದಿದೆ.

ಯಶ್ ಅವರು ಮಾತನಾಡುತ್ತಾ, ಇವತ್ತು ಜನ ಯಾಕೆ ಆ ಡೈಲಾಗ್ ಹೇಳುತ್ತಾರೆ. ಅದನ್ನು ನೆನಪಿಡುತ್ತಾರೆ ಗೊತ್ತಾ? ಯಾಕೆಂದರೆ ಅವುಗಳು ಡೈಲಾಗ್‌ ಗಳಾಗಿರಲಿಲ್ಲ. ಅದು ಫಿಲಾಸಫಿ ಆಗಿತ್ತು ಎಂದಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅವರ ಬ್ಯಾನರ್‌ ನಲ್ಲಿ ರಾಕಿ ಬಾಯ್ ಅವರು ಕಾಣಿಸಿಕೊಂಡು ಅಚ್ಚರಿಯನ್ನು ಮೂಡಿಸಿದ್ದಾರೆ.

Venu Swamy: ವೇಣು ಸ್ವಾಮಿಗೆ ಶುರುವಾಯ್ತು ಸಂಕಷ್ಟ, ಸಮನ್ಸ್ ಜಾರಿ ಮಾಡಿದ ಮಹಿಳಾ ಕಮೀಷನ್

Leave a Comment