Samsung Galaxy Z Fold 6 : ಎಲೆಕ್ಟ್ರಾನಿಕ್ಸ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್ಸಂಗ್ ಇತ್ತೀಚೆಗೆ Galaxy Z Fold 6 ಎಂಬ ಹೊಸ ಫೋನ್ ಅನ್ನು ಮಾರುಕಟ್ಟೆಯಲ್ಲಿರ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಸಾಕಷ್ಟು ಸುಧಾರಿತ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡಿದೆ. ಆದರೆ ಈ ಫೋನ್ ನ ಬೆಲೆ ನೋಡಿದಾಗ, ಇದೇ ಬೆಲೆಯಲ್ಲಿ ನೀವೊಂದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬಹುದು.
Samsung Galaxy Z Fold6 ಸ್ಮಾರ್ಟ್ಫೋನ್ ನಲ್ಲಿ 12GB RAM, 1TB ಸ್ಟೋರೇಜ್ ರೂಪಾಂತರವಾಗಿದ್ದು, ಇದರ ಬೆಲೆ ಅಕ್ಷರಶಃ ರೂ. 2,00,999 ಎಂಬುದು ಗಮನಾರ್ಹವಾಗಿದೆ. ಪ್ರಸ್ತುತ, ನೀವು ಈ ಫೋನ್ ಅನ್ನು ಕೊಳ್ಳಲು ಬಯಸಿದರೆ, ವಿವಿಧ ಬ್ಯಾಂಕ್ ಗಳಿಗೆ ಸೇರಿದ ಕಾರ್ಡ್ಗಳೊಂದಿಗೆ ಖರೀದಿಸಬಹುದು ಹಾಗೂ ಇದರಿಂದ ನಿಮಗೆ ರೂ.15 ಸಾವಿರದವರೆಗೆ ರಿಯಾಯಿತಿ ಸಹಾ ಸಿಗಲಿದೆ.
2 ಲಕ್ಷ ರೂ. ಬೆಲೆ ಬಾಳುವ ಈ ಫೋನ್ ನಲ್ಲಿನ ಏನೆಲ್ಲಾ ಫೀಚರ್ ಗಳಿವೆ (Features) ಅನ್ನೋದಾದ್ರೆ, ಇದು ಮಡಚಬಹುದಾದ ಫೋನ್ ಆಗಿದೆ. ಇದು Snapdragon 8 Gen 3 ನಂತಹ ಶಕ್ತಿಯುತ ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂ ನೊಂದಿಗೆ ಇದು ಕಾರ್ಯ ನಿರ್ವಹಿಸುತ್ತದೆ ಮತ್ತು ಇದರಲ್ಲಿ 2 ಲಿಥಿಯಂ ಬ್ಯಾಟರಿಗಳನ್ನು ನೀಡಲಾಗಿದೆ.
ಸ್ಕ್ರೀನ್ ಬಗ್ಗೆ ಹೇಳುವುದಾದರೆ, ಇದು ಮಡಚಬಹುದಾದ ಡೈನಾಮಿಕ್ LTPO AMOLED ಡಿಸ್ ಪ್ಲೇ ಯನ್ನು ಹೊಂದಿದ್ದು, ಈ ಫೋನ್ 7.6 ಇಂಚಿನ ಸ್ಕ್ರೀನ್ ಹೊಂದಿದೆ. ಇದು 6.3 ಇಂಚುಗಳ ಕವರ್ ಡಿಸ್ಪ್ಲೇ ಯನ್ನು ಸಹಾ ಹೊಂದಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂ ನಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಇದು 50 ಮೆಗಾಪಿಕ್ಸೆಲ್ಗಳು, 10 ಮೆಗಾಪಿಕ್ಸೆಲ್ಗಳು ಮತ್ತು 12 ಮೆಗಾಪಿಕ್ಸೆಲ್ ಗಳೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೋ ಕರೆಗಳಿಗೆ ಇದರಲ್ಲಿ 10-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಭದ್ರತೆಯ ದೃಷ್ಟಿಯಿಂದ, ಸೌಂಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.