Milana Nagaraj : ಅದ್ದೂರಿಯಾಗಿ ನಡೆದ ಮಿಲನಾ ನಾಗರಾಜ್ ಸೀಮಂತ ಫೋಟೋಗಳು, ಹರಿದು ಬಂತು ಶುಭ ಹಾರೈಕೆಗಳು

Written by Soma Shekar

Published on:

---Join Our Channel---

Milana Nagaraj: ಸ್ಯಾಂಡಲ್ವುಡ್ ನ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ‌ ನಾಗರಾಜ್ (Milana Nagaraj) ದಂಪತಿ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದು, ಮಿಲನ ನಾಗಾರಾಜ್ ಅವರ ಸೀಮಂತ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಸಂಭ್ರಮದಿಂದ ನಡೆದಿದ್ದು, ಫೋಟೋಗಳು ವೈರಲ್ ಆಗಿವೆ.

ಬೆಂಗಳೂರಿನಲ್ಲೇ ಮಿಲನ ನಾಗರಾಜ್ ಅವರ ಸೀಮಂತ ಶಾಸ್ತ್ರ ನಡೆದಿದ್ದು, ಸೀಮಂತದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದು, ನೆಟ್ಟಿಗರು ಸಹಾ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರದ್ದು ಪ್ರೇಮ ವಿವಾಹವಾಗಿದ್ದು, ಈಗ ತಮ್ಮ ಜೀವನಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ಈ ಜೋಡಿಯ ಜೀವನಕ್ಕೆ ಹೊಸ ಅತಿಥಿ ಆಗಮನ ಆಗಲಿದೆ.

ಮಿಲನ ಅವರ ಸೀಮಂತ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಹಲವು ಸೆಲೆಬ್ರಿಟಿಗಳು ಹಾಜರಾಗಿ, ಶುಭ ಹಾರೈಸಿದ್ದಾರೆ. ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ ಅವರು ಸಹಾ ಮಿಲನಾ ಅವರ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಟಿ ಮಿಲನಾ ನಾಗಾರಾಜ್ ಅವರು ತಮ್ಮ ಸೀಮಂತ ಸಮಾರಂಭದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳ ಎಲ್ಲರ ವಿಶೇಷ ಗಮನವನ್ನು ಸೆಳೆಯುತ್ತಿದೆ.

Aman Sehrawat : ಇದ್ದಿದ್ದು 10 ಗಂಟೆ ಸಮಯ, 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್ ರೋಚಕ ಸಾಧನೆ

Leave a Comment