Nagara Panchami : ಆರಂಭವಾಗಲಿರುವ ಎಲ್ಲಾ ಹಬ್ಬಗಳಿಗೆ ಮುನ್ನುಡಿ ಎನ್ನುವ ಹಾಗೆ ನಾಗಪಂಚಮಿ (Nagara Panchami) ಹಬ್ಬ ಬಂದಿದೆ.ಇದಾದ ನಂತರ ಸಾಲು ಸಾಲಾಗಿ ಹಬ್ಬಗಳ ಸಂಭ್ರಮ ಮನೆ ಮಾಡುವುದು. ನಾಗರ ಪಂಚಮಿ ಹೆಣ್ಣು ಮಕ್ಕಳಿಗೆ ಬಹಳ ವಿಶೇಷವಾದ ಹಬ್ಬ ಎಂದರೆ ಸುಳ್ಳಲ್ಲ. ನಾಗನ ಮೂರ್ತಿಯ ಪೂಜೆ, ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುವುದು.
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತಿದ್ದು, ಈ ದಿನ ನಾಗರ ಪಂಚಮಿ ಪೂಜಾ ಮುಹೂರ್ತದ ಸಮಯ ಹೀಗಿದೆ. ಪಂಚಮಿ ತಿಥಿ ಆರಂಭ 9 ಆಗಸ್ಟ್ 2024, 12:36 AM , ಪೂಜಾ ಮುಹೂರ್ತ: ಆಗಸ್ಟ್ 9 ರ ಬೆಳಗ್ಗೆ 06:07 ರಿಂದ 8:38ರವರೆಗೆ, ಪಂಚಮಿ ತಿಥಿಯ ಮುಕ್ತಾಯದ ಸಮಯ: ಅಗಸ್ಟ್ 10 ಮುಂಜಾನೆ 03:14ಕ್ಕೆ ಆಗಿದೆ.
ಇದು ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು ಈ ಸಂದರ್ಭದಲ್ಲಿ ಹಾವುಗಳಿಂದ ಯಾವುದೇ ತೊಂದರೆ ಆಗದಿರಲೆಂದು ನಾಗರ ಪಂಚಮಿಯಂದು ಹಬ್ಬವನ್ನು ಆಚರಿಸಿ ಪ್ರಾರ್ಥನೆ ಮಾಡಲಾಗುವುದು. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಪ್ರದಾಯದ ಅನುಸಾರವಾಗಿ ಆಚರಿಸುತ್ತಾರೆ.
ಅನೇಕ ಜನರು ನಾಗರ ಪಂಚಮಿಯಂದು ಉಪವಾಸವನ್ನು ಮಾಡುತ್ತಾರೆ. ಈ ವಿಶೇಷ ದಿನದಂದು ಉಪವಾಸವನ್ನು ಆಚರಿಸುವುದು ಮತ್ತು ವ್ರತ ಕಥೆಯನ್ನು ಪಠಿಸುವುದು ಮತ್ತು ಆಲಿಸುವುದು ಕೂಡಾ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವುದು ನಂಬಿಕೆಯಾಗಿದೆ.
Prabhas: ಸ್ವಾತಂತ್ರ್ಯ ಹೋರಾಟಗಾರ ಆಗಲಿರೋ ಪ್ರಭಾಸ್, ಹೊಸ ಸುದ್ದಿ ಕೇಳಿ ಬೆಚ್ಚಿದ ಸಿನಿಮಾ ರಂಗ, ಹೊಸ ಸಂಚಲನ