Annayya Serial: ಪುಟ್ಟಕ್ಕನ ಮಕ್ಕಳು ಮುಗೀತಾ?? ನಂ. 1 ಸೀರಿಯಲ್ ಸಮಯಕ್ಕೆ ಇನ್ಮುಂದೆ ಅಣ್ಣಯ್ಯ ಬರ್ತಿದ್ದಾನೆ

Written by Soma Shekar

Published on:

---Join Our Channel---

Annayya Serial: ಜೀ ಕನ್ನಡ (Zee Kannada) ಸದ್ಯಕ್ಕಂತೂ ಸೀರಿಯಲ್ ಗಳ ವಿಚಾರದಲ್ಲಿ ಬೇರೆಲ್ಲಾ ವಾಹಿನಿಗಳಿಗಿಂತ ಜನಪ್ರಿಯತೆ ಪಡೆದುಕೊಂಡಿದೆ. ಜೀ ವಾಹಿನಿಯ ಸೀರಿಯಲ್ ಗಳು ಪ್ರೇಕ್ಷಕರಿಂದ ಅದ್ಭುತ ಆದರವನ್ನು ಪಡೆದುಕೊಂಡಿವೆ. ಅಲ್ಲದೇ ವಾಹಿನಿ ಹೊಸ ಸೀರಿಯಲ್ ಗಳ ಮೂಲಕ ಇನ್ನಷ್ಟು ಮನರಂಜನೆಯನ್ನು ನೀಡಲು ಮುಂದಾಗಿದೆ. ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮಗಂಟು ನಂತರ ಈಗ ಅಣ್ಣಯ್ಯ ಕಿರುತೆರೆಗೆ ಬರಲು ಸಜ್ಜಾಗಿದ್ದು, ಪ್ರೊಮೋ ಗಳ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ.‌

ಅಣ್ಣಯ್ಯ ಸೀರಿಯಲ್ ನ (Annayya Serial) ಪ್ರೊಮೊ ನೋಡಿದ ಮೇಲೆ ಸೀರಿಯಲ್ ಯಾವಾಗ ಪ್ರಸಾರ ಆಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಈಗ ಉತ್ತರ ಸಿಕ್ಕಾಗಿದೆ. ವಾಹಿನಿ ಅಣ್ಣಯ್ಯ ಸೀರಿಯಲ್ ಪ್ರಸಾರದ ದಿನಾಂಕವನ್ನು ಘೋಷಣೆ ಮಾಡಿದೆ. ನಾಲ್ವರು ತಂಗಿಯರ ಅಣ್ಣ ಶಿವನ ಕಥೆ ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ. ಅಲ್ಲದೇ ಗಟ್ಟಿಮೇಳ ರೌಡಿ ಬೇಬಿ ಖ್ಯಾತಿಯ ನಟಿ ನಿಶಾ ರವಿಕೃಷ್ಣನ್ ಅಣ್ಣಯ್ಯ ಮೂಲಕ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

ವಾಹಿನಿ ಹಂಚಿಕೊಂಡಿರುವ ಪ್ರೊಮೋ ದಲ್ಲಿ ಇದೇ ಆಗಸ್ಟ್ 12 ರಿಂದ ಅಣ್ಣಯ್ಯ ಸೀರಿಯಲ್ ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ ಎನ್ನುವುದಾಗಿ ಘೋಷಣೆ ಮಾಡಿದೆ. ಸೀರಿಯಲ್ ಆರಂಭದ ದಿನಾಂಕದ ಜೊತೆಯಲ್ಲೇ ಪ್ರೇಕ್ಷಕರಿಗೆ ಹೊಸದೊಂದು ಅನುಮಾನ ಸಹಾ ಮೂಡಿದೆ. ಏಕೆಂದರೆ ಪ್ರತಿ ದಿನ ಈ ಸಮಯಕ್ಕೆ ಕಿರುತೆರೆಯ ನಂಬರ್ ಒನ್ ಸ್ಥಾನ ಪಡೆದಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಸಾರ ಆಗ್ತಿದೆ.

ಸಾಮಾನ್ಯವಾಗಿ ಹೊಸ ಸೀರಿಯಲ್ ಒಂದು ಬರಬೇಕಾದರೆ ಹಳೆಯ ಸೀರಿಯಲ್ ಒಂದು ಮುಗಿಯಬೇಕಾಗುತ್ತದೆ. ಆದರೆ‌ ಈಗ ಅಣ್ಣಯ್ಯ ಸೀರಿಯಲ್ ಗಾಗಿ ಪುಟ್ಟಕ್ಕನ ಮಕ್ಕಳು ಮುಕ್ತಾಯವಾಗುತ್ತಾ?? ಅನ್ನೋ ಅನುಮಾನ ಅನೇಕರಿಗೆ ಮೂಡಿದೆ. ವಾಹಿನಿ ಈ ವಿಚಾರವಾಗಿ ಇನ್ನೂ ಏನು ಹೇಳಿಲ್ಲ ಹಾಗೂ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಪ್ರಸಾರದ ಸಮಯ ಬದಲಾಗುತ್ತಾ ಅನ್ನೋದನ್ನ ಇನ್ನೂ ತಿಳಿಸಿಲ್ಲ.

ಹಾಗಾದ್ರೆ ಪುಟ್ಟಕ್ಕನ ಮಕ್ಕಳು ಮುಗಿಯುತ್ತಾ?
ಪುಟ್ಟಕ್ಕನ ಮಕ್ಕಳು ಪ್ರಸ್ತುತ ನಂಬರ್ ಒನ್ ಸೀರಿಯಲ್, ಉತ್ತಮ ಟಿ ಆರ್ ಪಿ ಪಡೆಯುತ್ತಿರುವ ಸೀರಿಯಲ್. ಆದ್ದರಿಂದ ಈ ಸೀರಿಯಲ್ ಅನ್ನು ಮುಕ್ತಾಯ ಮಾಡುವುದು ಸಾಧ್ಯ ಇಲ್ಲ ಅಂತ ಬಹಳ ಸುಲಭವಾಗಿಯೇ ಹೇಳಬಹುದು. ಆದರೆ ಪ್ರಸಾರದ ಸಮಯ ಖಂಡಿತ ಬದಲಾಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ.

ಯಾವ ಸಮಯಕ್ಕೆ ಬರಲಿದೆ ಪುಟ್ಟಕ್ಕನ ಮಕ್ಕಳು? ಪ್ರಸ್ತುತ ಜೀ ವಾಹಿನಿಯ ಮತ್ತೊಂದು ಜನಪ್ರಿಯ ಸೀರಿಯಲ್ ಲಕ್ಷ್ಮೀ ನಿವಾಸ ಪ್ರತಿದಿನ ಒಂದು ಗಂಟೆಯ ಸಮಯ ಪ್ರಸಾರವಾಗುತ್ತಿದೆ.. ರಾತ್ರಿ 8 ರಿಂದ 9 ಗಂಟೆಯವರೆಗೆ. ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು 8 ರಿಂದ 8:30 ಕ್ಕೆ ಪ್ರಸಾರ ಆಗಬಹುದು ಹಾಗೂ ಲಕ್ಷ್ಮೀ ನಿವಾಸದ ಅವಧಿಯನ್ನು ಅರ್ಧ ಗಂಟೆಗೆ ಇಳಿಸಬಹುದು ಎನ್ನುವ ನಿರೀಕ್ಷೆಗಳಿವೆ.

Radhika Merchant: ವಿದೇಶದ ನೆಲದಲ್ಲೂ ಭಾರತೀಯ ಸಂಸ್ಕೃತಿ ಮರೆಯದ ಅಂಬಾನಿ ಸೊಸೆ; ಹರಿದು ಬಂತು ಮೆಚ್ಚುಗೆ

Leave a Comment