Govt Scheme: ಜಸ್ಟ್ ನೀವು ಈ ಒಂದು ಕೆಲಸ ಮಾಡಿದರೆ ಕೇಂದ್ರ ಸರ್ಕಾರದಿಂದ ಸಿಗುತ್ತೆ 75 ಸಾವಿರ ರೂ.‌

Written by Soma Shekar

Published on:

---Join Our Channel---

Govt Scheme: ದೇಶವಾಸಿಗಳಿಗಾಗಿ ಕೇಂದ್ರ ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು (Govt Scheme) ಜಾರಿಗೆ ತಂದಿದೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಸರ್ಕಾರದ ಹಲವು ಯೋಜನೆಗಳ ಕುರಿತಾಗಿ ಜನರಿಗೆ ಮಾಹಿತಿ ಆನ್ಲೈನ್ ನಲ್ಲಿ ಲಭ್ಯವಿದ್ದರೂ ಬಹಳಷ್ಟು ಜನರಿಗೆ ಅವರ ವಿವರಗಳು ತಿಳಿದಿಲ್ಲ ಎನ್ನುವುದು ಸತ್ಯ. ಅಂತಹ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ (Pradhan Mantri Surya Ghar Free Electricity Scheme)

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಮೂಲಕ ವಿದ್ಯುತ್ ಬಿಲ್ ಅನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನರ ಮನೆಗಳಿಗೆ ಸೋಲಾರ್ ಪ್ಯಾನಲ್ (Solar Panel) ಅಳವಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತಿದೆ. ಇದು ಫಲಾನುಭವಿಗಳಿಗೆ ವಿದ್ಯುತ್ ಬಿಲ್‌ ನಿಂದ ಪರಿಹಾರವನ್ನು ನೀಡುತ್ತದೆ.

ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲು  ಸಹಾಯಧನವನ್ನು ನೀಡುತ್ತಿದೆ. ಸರ್ಕಾರವು   ಒಂದು ಕೋಟಿ ಮನೆಗಳಲ್ಲಿ ಸೌರಫಲಕ ಅಳವಡಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ, ನೀವು ರೂ 75,000 ವರೆಗೆ ಸಬ್ಸಿಡಿಯನ್ನು ಸಹಾ ಪಡೆಯಬಹುದಾಗಿದೆ.

ಈ ಯೋಜನೆಯ ಲಾಭ ಪಡೆಯಲು ನೀವು  pmsuryaghar.gov.in ನ ಅಧಿಕೃತ ವೆಬ್‌ ಸೈಟ್‌ ಗೆ ಲಾಗಿನ್ ಮಾಡಬೇಕಾಗುತ್ತದೆ. ಇದರಲ್ಲಿ ನೋಂದಣಿಯ ಕುರಿತಾದ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.  ಇದರ ನಂತರ, ಸೋಲಾರ್ ಪ್ಯಾನಲ್ ಅನ್ನು ನಿಮ್ಮ ಮನೆಯಲ್ಲಿ ಅಳವಡಿಸಿದ ನಂತರ, ಕೇಂದ್ರ ಸರ್ಕಾರದಿಂದ ನಿಮ್ಮ ಖಾತೆಗೆ ಸಬ್ಸಿಡಿ ಕಳುಹಿಸಲಾಗುವುದು.

Karti Suriya: ತಮಿಳಿನಲ್ಲಿ ಸಹೋದರರ ಕಾದಾಟ; ನಟ ಸೂರ್ಯಗೆ ವಿಲನ್ ಆಗಿ ಬಿಟ್ರಾ ಅವರ ತಮ್ಮ ಕಾರ್ತಿ

Leave a Comment