Yash Toxic: ಕೆಜಿಎಫ್ (KGF Movie) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಖ್ಯಾತಿಯನ್ನು ಪಡೆದುಕೊಂಡಿರುವ ಸ್ಟಾರ್ ನಟ ಯಶ್ ಅವರು ಕೆಜಿಎಫ್ ನಂತರ ಇದೀಗ ಟಾಕ್ಸಿಕ್ (Yash Toxic) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾಕ್ಕಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿ, ಖಡಕ್ ಮತ್ತು ಸೂಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಯಶ್ ಅವರ ಲುಕ್ ವೈರಲ್ ಆಗಿ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಎಲ್ಲೆಲ್ಲೂ ಯಶ್ ಅವರ ಫೋಟೋಗಳು ವೈರಲ್ ಆಗಿವೆ.
ಟಾಕ್ಸಿಕ್ ಕುರಿತಾಗಿ ಒಂದಷ್ಟು ಹೊಸ ಹೊಸ ಅಪ್ಡೇಟ್ ಗಳು ಹೊರ ಬರುವಾಗಲೇ ಇದೀಗ ಟಾಕ್ಸಿಕ್ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ ಎನ್ನುವ ಸುದ್ದಿಯೊಂದು ಸಹಾ ಹರಿದಾಡಿದೆ. ಹೌದು, ಯಶ್ ಅವರು ನಾಯಕನಾಗಿರುವ, ಗೀತು ಮೋಹನ್ ದಾಸ್ (Gitu Mohan Das) ಅವರ ನಿರ್ದೇಶನದ ಟಾಕ್ಸಿಕ್ ಚಿತ್ರದ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣ ಸಿನಿಮಾಕ್ಕಾಗಿ ನಿರ್ಮಾಣ ಮಾಡಿರುವ ದೊಡ್ಡ ಸೆಟ್ ಎನ್ನಲಾಗಿದೆ.
ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಟಾಕ್ಸಿಕ್ ಸಿನಿಮಾಕ್ಕಾಗಿ ಒಂದು ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ದೂರಿಗೆ ಸ್ಪಷ್ಟ ಕಾರಣ ಏನು ಅನ್ನೋದಾದ್ರೆ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ಅನ್ನು ಹಾಕಲಾಗಿದೆ ಎಂಬುದಾಗಿ ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲ ಹೈಕೋರ್ಟ್ ಟಾಕ್ಸಿಕ್ ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ ಮ್ತತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ಅನ್ನು ನೀಡಿದೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಾಯಕನಾಗಿದ್ದು, ಪ್ರಮುಖ ಪಾತ್ರಗಳಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಇವರಲ್ಲದೇ ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಕೂಡಾ ಇದ್ದಾರೆ ಎನ್ನಲಾಗಿದೆ.
Kannada Serial TRP: ನಂಬರ್ ಒನ್ ಸ್ಥಾನದಲ್ಲಿ ಎರಡು ಸೀರಿಯಲ್ ಗಳು; ಸೀರಿಯಲ್ ಗಳ ನಡ್ವೆ ಹೆಚ್ಚಿದ ಪೈಪೋಟಿ