Chaitra Vasudevan: ಬಿಗ್ ಬಾಸ್ ಬೆಡಗಿ ಚೈತ್ರ ವಾಸದೇವನ್ ನಿರೂಪಣೆಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Written by Soma Shekar

Published on:

---Join Our Channel---

Chaitra Vasudevan: ಚೈತ್ರಾ ವಾಸುದೇವನ್ (Chaitra Vasudevan) ಕನ್ನಡದ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರಾಗಿದ್ದಾರೆ. ಚೈತ್ರ ವಾಸುದೇವನ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಬಿಗ್ ಬಾಸ್ (Bigg Boss) ನಂತರ ಚೈತ್ರಾ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಬಿಗ್ ಬಾಸ್ ಗೆ ಬರುವ ಮುನ್ನ ಅವರು ಕೆಲವೊಂದು ಸೀರಿಯಲ್ ಜಾತ್ರೆ, ಕಮರ್ಷಿಯಲ್ ಈವೆಂಟ್ ಗಳನ್ನು ನಿರೂಪಣೆ ಮಾಡುವ ಮೂಲಕ ಚಿರಪರಿಚಿತರಾಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಅವರು ಎರಡು ವಾರಗಳ ಕಾಲ ಇದ್ದು ಎಲಿಮಿನೇಟ್ ಆಗಿದ್ದರು. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಬ್ಯುಸಿಯಾದರು. ಚೈತ್ರಾ ಅವರು ಸೈಮಾ ಅವಾರ್ಡ್ಸ್, ಐಫಾ ಅವಾರ್ಡ್ಸ್ ಮತ್ತು ಐಪಿಎಲ್ ಗಳಲ್ಲಿ ನಿರೂಪಣೆ ಮಾಡುವ ಮೂಲಕ ಇನ್ನಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಚೈತ್ರಾ ವಾಸುದೇವನ್ ಅವರು ರ್ಯಾಪಿಡ್ ರಶ್ಮಿ (Rapid Rashmi) ಅವರ ಜೊತೆಗೆ ಮಾತನಾಡುತ್ತಾ ತಾವು ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವ ವಿಚಾರವನ್ನು ಮಾತನಾಡಿದ್ದಾರೆ. ಚೈತ್ರ ಅವರು ವಿವಿಧ ರೀತಿಯ ಈವೆಂಟ್ ಗಳನ್ನು ನಿರೂಪಣೆ ಮಾಡುವುದರಿಂದ ಸಂಭಾವನೆ ಸಹಾ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಿದ್ದಾರೆ.

ಚೈತ್ರ ವಾಸುದೇವನ್ ಅವರು ಸಾಮಾನ್ಯವಾಗಿ ಒಂದು ಇವೆಂಟ್ ನಿರೂಪಣೆ ಮಾಡೋದಕ್ಕೆ ಒಂದು ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ ಇದು ಪ್ರತಿ ಬಾರಿಯೂ ಅಷ್ಟೇ ಆಗಿರುತ್ತದೆ ಎನ್ನಲಾಗದು, ಅದು ಹೆಚ್ಚೂ ಆಗಬಹುದು ಹಾಗೂ ಕಡಿಮೆಯೂ ಆಗಬಹುದು ಎಂದು ಚೈತ್ರ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ.

Abhishek Bachchan: ಡಿವೋರ್ಸ್ ಯಾರಿಗೂ ಸುಲಭ ಅಲ್ಲ: ವದಂತಿಗಳೇ ನಿಜವಾಯ್ತಾ? ಅಭಿಷೇಕ್ ಬಚ್ಚನ್ ಮಾಡಿದ್ದೇನು?

Leave a Comment