Nisha Ravikrishnan: ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ರು ಗಟ್ಟಿಮೇಳದ ರೌಡಿ ಬೇಬಿ ಖ್ಯಾತಿಯ ನಿಶಾ ರವಿಕೃಷ್ಣನ್

Written by Soma Shekar

Updated on:

---Join Our Channel---

Nisha Ravikrishnan: ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ಸೀರಿಯಲ್ ಗಳಲ್ಲಿ ಗಟ್ಟಿಮೇಳ (Gattimela) ಸಹಾ ಒಂದು. ಒಂದಷ್ಟು ಸಮಯದ ಕಾಲ ಟಿ ಆರ್ ಪಿ ಯಲ್ಲಿ ಮೊದಲ ಸ್ಥಾನವನ್ನು ಪಡೆದು ಯಶಸ್ಸಿನ ಓಟ ನಡೆಸಿದ್ದ ಗಟ್ಟಿಮೇಳು ಈಗಾಗಲೇ ಮುಗಿದು ಕೆಲವು ತಿಂಗಳುಗಳೇ ಆಗಿದೆ‌. ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸಿದ ಕಲಾವಿದರು ಸಹಾ ತಮ್ಮ ಪಾತ್ರಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಈ ಸೀರಿಯಲ್ ನಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರದ ಮೂಲಕ ನಾಯಕಿಯಾಗಿ ಮಿಂಚಿದವರು ನಟಿ ನಿಶಾ ರವಿಕೃಷ್ಣನ್ (Nisha Ravikrishnan). ಕನ್ನಡದಲ್ಲಿ ಸೀರಿಯಲ್ ಮಾಡುತ್ತಲೇ ತೆಲುಗು ಕಿರುತೆರೆಗೆ ಎಂಟ್ರಿ ನೀಡಿದ್ದ ಈ ನಟಿ ಪ್ರಸ್ತುತ ತೆಲುಗು ಸೀರಿಯಲ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಗಟ್ಟಿಮೇಳದ ನಂತರ ನಿಶಾ ಮತ್ತೆ ಕನ್ನಡದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂದು ಕಾದಿದ್ದ ಅವರ ಅಭಿಮಾನಿಗಳಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಕಾಂತಾರ (Kantara) ಸಿನಿಮಾ ಖ್ಯಾತಿಯ ಪ್ರಮೋದ್ ಶೆಟ್ಟಿ (Pramod Shetty) ಮತ್ತು ಅವರ ಪತ್ನಿ ಸುಪ್ರೀತಾ ಅವರು ಹೊಸ ಸೀರಿಯಲ್ ಒಂದರ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಕಿರುತೆರೆಯಲ್ಲಿ ಈ ಸೀರಿಯಲ್ ನ ಒಂದು ಸಣ್ಣ ಪ್ರೊಮೋ ಬಿಡುಗಡೆ ಆಗಿ ಗಮನ ಸೆಳೆದಿದೆ. ಅಣ್ಣಯ್ಯ (Annayya) ಹೆಸರಿನ ಈ ಸೀರಿಯಲ್ ಶೀಘ್ರದಲ್ಲೇ ಲಾಂಚ್ ಆಗಲಿದ್ದು, ಅದರಲ್ಲಿ ನಿಶಾ ರವಿಕೃಷ್ಣನ್ ಅವರು ನಾಯಕಿಯಾಗಿ ಫೈನಲ್ ಆಗಿದ್ದಾರೆ ಎನ್ನಲಾಗಿದೆ.

ಈ ಸೀರಿಯಲ್ ನಲ್ಲಿ ಕೊಡಗಿನ ಹುಡುಗ ವಿಕಾಶ್ ಉತ್ತಯ್ಯ ನಾಯಕನಾಗಿದ್ದು, ನಿಶಾ ಅವರು ನಾಯಕಿ ಎನ್ನುವ ಅಧಿಕೃತ ಮಾಹಿತಿ ಹೊರಬರಬೇಕಾಗಿದೆ. ಈ ಸುದ್ದಿ ಕೇಳಿ ನಿಶಾ ಅವರ ಅಭಿಮಾನಿಗಳು ಖುಷಿಯಾಗುವ ಜೊತೆಗೆ ಈ ಸೀರಿಯಲ್ ನಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಿಳಿಯುವ ಕುತೂಹಲದಲ್ಲಿ ಸಹಾ ಇದ್ದಾರೆ. ನಿಶಾ ಅವರ ಕಮ್ ಬ್ಯಾಕ್ ಗೆ ಅವರ ಅಭಿಮಾನಿಗಳು ಕಾಯ್ತಿದ್ದಾರೆ.

Play Jango Casino review

Leave a Comment