Sreeleela: ಶ್ರೀಲೀಲಾ ರಾಯಲ್ ಎಂಟ್ರಿಗೆ ಫ್ಯಾನ್ಸ್ ಫಿದಾ; ರಶ್ಮಿಕಾ ಕೈ ಬಿಟ್ಟ ಸಿನಿಮಾಕ್ಕೆ ಈಗ ಶ್ರೀಲೀಲಾ ನಾಯಕಿ

Written by Soma Shekar

Published on:

---Join Our Channel---

Sreeleela: ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್ ಎರಡೂ ಕಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಿರೀಕ್ಷಿತ ಮಟ್ಟದ ಯಶಸ್ಸು ಸಿಗದೇ ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಸಿನಿಮಾಗಳ ಆಫರ್ ಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ ನಟಿ ಶ್ರೀಲೀಲಾ (Sreeleela). ಈಗ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಬೇಕಾಗಿದ್ದ ಸಿನಿಮಾ ಒಂದರಲ್ಲಿ ಶ್ರೀ ಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಕೈಬಿಟ್ಟಂತಹ ಸಿನಿಮಾಕ್ಕೆ ನಾಯಕಿಯಾಗಿ ಈಗ ಶ್ರೀಲೀಲಾ ಎಂಟ್ರಿಯನ್ನ ಕೊಟ್ಟಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. ನಟಿ ಶ್ರೀಲೀಲಾ ಅವರ ಹುಟ್ಟು ಹಬ್ಬದ ಸಂಭ್ರಮದ ಬೆನ್ನಲ್ಲೇ ವಿಶೇಷ ಟೀಸರ್ ರಿಲೀಸ್ ಮಾಡುವ ಮೂಲಕ ಶ್ರೀ ಲೀಲಾ ರಾಬಿನ್ ಹುಡ್ (Robinhood) ಸಿನಿಮಾದ ನಾಯಕಿ ಎಂದು ಚಿತ್ರತಂಡವು ಅಧಿಕೃತವಾಗಿ ಘೋಷಣೆಯನ್ನು ಮಾಡಿದೆ.

ಈ ಸಿನಿಮಾದಲ್ಲಿ ನಟ ನಿತಿನ್ (Nithin) ನಾಯಕನಾಗಿದ್ದು ಶ್ರೀಲೀಲಾ ಎರಡನೇ ಬಾರಿಗೆ ನಿತಿನ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಂಪು ಬಣ್ಣದ ಉಡುಗೆ ತೊಟ್ಟು ಬಹಳ ಸ್ಟೈಲಿಶ್ ಲುಕ್ ನೊಂದಿಗೆ ವಿಮಾನದಿಂದ ಇಳಿದು ಬರುತ್ತಿರುವ ಟೀಸರ್ ಒಂದನ್ನ ಚಿತ್ರತಂಡ ಬಿಡುಗಡೆ ಮಾಡಿ ನಟಿಗೆ ಶುಭಾಶಯಗಳು ಕೋರಿದೆ. ಟೀಸರ್ ನಲ್ಲಿ ತಮ್ಮ ಅಚ್ಚುಮೆಚ್ಚಿನ ನಟಿಯ ರಾಯಲ್ ಎಂಟ್ರಿ ಅನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶ್ರೀಲೀಲಾ ನಿತಿನ್ ಜೊತೆಗೆ ಈ ಹಿಂದೆ ನಟಿಸಿದ್ದ ಸಿನಿಮಾ ಸಾಧಾರಣ ಗೆಲುವನ್ನು ಕಂಡಿತ್ತು. ಈಗ ಎರಡನೇ ಬಾರಿಗೆ ನಿತಿನ್ ಗೆ ನಾಯಕಿಯಾಗಿದ್ದು ಈ ಸಿನಿಮಾ ಗೆಲುವು ಸಾಧಿಸುತ್ತದೆ ಎನ್ನುವ ನಿರೀಕ್ಷೆ ಇದೆ. ಈ ಹಿಂದೆ ಚಿತ್ರ ತಂಡವು ರಾಬಿನ್ ಹುಡ್ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಘೋಷಣೆಯನ್ನು ಮಾಡಿತ್ತು. ಆದರೆ ರಶ್ಮಿಕ ಮಂದಣ್ಣ ಅವರ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ನಟಿಸಿ ನಿಮ್ಮ ದಿಂದ ಹೊರಗಡೆ ಬಂದಿದ್ದರು.

Leave a Comment