Darshan: ಅಪ್ಪನ ಬೈದವರಿಗೆ ಥ್ಯಾಂಕ್ಸ್ ಹೇಳುತ್ತಾ ಭಾವುಕ ಪೋಸ್ಟ್ ಶೇರ್ ಮಾಡಿದ ದರ್ಶನ್ ಪುತ್ರ ವಿನೀಶ್

Written by Soma Shekar

Updated on:

---Join Our Channel---

Darshan: ಸ್ಯಾಂಡಲ್ವುಡ್ ನಟ ದರ್ಶನ್ (Darshan) ಕೊ ಲೆ ಆರೋಪದ ಅಡಿಯಲ್ಲಿ ಬಂಧನವಾದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಅವರನ್ನು ಟೀಕಿಸುತ್ತಾ ದೊಡ್ಡ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾಗಳು ಮತ್ತು ಮಾದ್ಯಮಗಳ ಸುದ್ದಿಗಳಲ್ಲಿ ರೇಣುಕಾಸ್ವಾಮಿ ಕೊ ಲೆ ಯ ಬಗ್ಗೆಯೇ ಸುದ್ದಿಗಳು ಹರಿದಾಡುತ್ತಿದೆ. ಇವೆಲ್ಲವುಗಳ ಬೆನ್ನಲ್ಲೇ ಅರೆಸ್ಟ್ ಆದ ಅಪ್ಪನ ಬಗ್ಗೆ ನಟ ದರ್ಶನ್ ಪುತ್ರ ವಿನೀಶ್ (Vinish) ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.

ಕೆಟ್ಟದಾಗಿ ಕಾಮೆಂಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು. ನನ್ನ ತಂದೆ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದ ನೀವು 15 ವರ್ಷದ ಮಗನನ್ನೇ ಪರಿಗಣಿಸಲಿಲ್ಲ. ನನ್ನ ಭಾವನೆಗಳಿಗೆ ಬೆಲೆ ಕೊಡದ ನೀವು ಈ ಕಷ್ಟದ ಸಮಯದಲ್ಲಿ ನನ್ನ ತಂದೆ ತಾಯಿಗೆ ಬೆಂಬಲದ ಅಗತ್ಯ ಇರುವಾಗ ನೀವು ನನ್ನನ್ನ ಶಪಿಸುವುದರಿಂದ ಯಾವುದೂ ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಈಗ ಈ ಪೋಸ್ಟ್ ಬಗ್ಗೆಯೂ ಪರ ವಿರೋಧ ಮಾತುಗಳು ಕೇಳಿ ಬರುತ್ತಿದೆ. ಇನ್ನು ನಟ ದರ್ಶನ್ ಅವರನ್ನು ಆರು ದಿನಗಳ ಪೋಲಿಸ್ ಕಸ್ಟಡಿಗೆ ನೀಡಲಾಗಿದ್ದು, ಪ್ರಸ್ತುತ ಅವರು ಹೊರಗೆ ಬರುವ ಯಾವುದೇ ಸೂಚನೆಗಳು ಸಹಾ ಕಾಣುತ್ತಿಲ್ಲ. ಮತ್ತೊಂದಡೆ ಪವಿತ್ರಾ ಗೌಡ ಅವರ ಮಗಳು ಸಹಾ ಠಾಣೆಗೆ ಬೇಟಿ ನೀಡಿ ಅಮ್ಮನನ್ನು ಭೇಟಿ ಮಾಡಿ ಬಂದಿದ್ದಾರೆ.

ದರ್ಶನ್ ಅವರ ಅರೆಸ್ಟ್ ಬೆನ್ನಲ್ಲೇ ಅವರ ಪತ್ನಿ ತಮ್ಮ ಇನ್ಸ್ಟಾಗ್ರಾಂ ಡಿಪಿಯಿಂದ ಫೋಟೋ ರಿಮೂವ್ ಮಾಡಿದ್ದು ಮಾತ್ರವಲ್ಲದೇ ದರ್ಶನ್ ಸೇರಿದಂತೆ ತಾವು ಫಾಲೋ ಮಾಡುತ್ತಿದ್ದವರನ್ನು ಅನ್ ಫಾಲೋ ಸಹಾ ಮಾಡಿಕೊಂಡಿದ್ದಾರೆ. ಸುದ್ದಿಯಾಗುತ್ತಿರುವ ಪ್ರಕರಣದ ವಿಚಾರವಾಗಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಹಾಗೂ ಮೌನಕ್ಕೆ ಶರಣಾಗಿದ್ದಾರೆ.‌

Professor Wins Casino

Leave a Comment