Tanisha Kuppanda: ಸೋಶಿಯಲ್ ಮೀಡಿಯಾಗಳಲ್ಲಿ (Social Media) ಅದನ್ನು ಬಳಸುವ ಮಂದಿಗೆ ಯಾವುದಾದರೊಂದು ವಿಷಯವನ್ನು ಮಾತನಾಡಲು, ಪ್ರಶ್ನೆ ಮಾಡಲು ಹಾಗೂ ಬೇರೆಯವರನ್ನು ಟ್ರೋಲ್ ಮಾಡಲು ಯಾವುದೇ ಕಡಿವಾಣ ಅನ್ನೋದು ಖಂಡಿತ ಇಲ್ಲ. ಅನೇಕ ಸಂದರ್ಭಗಳಲ್ಲಿ ನಟಿಯರು ಪೋಸ್ಟ್ ಮಾಡುವ ಫೋಟೋಗಳಿಗೆ ತೀರಾ ಕೆಳಮಟ್ಟದಲ್ಲಿ ಅನೇಕರು ಕಾಮೆಂಟ್ ಗಳನ್ನು ಮಾಡುವುದನ್ನು ನಾವು ನೋಡಬಹುದಾಗಿದೆ. ಆದರೆ ಸೆಲೆಬ್ರಿಟಿಗಳು ಇಂತಹ ವಿಷಯಗಳ ಕಡೆಗೆ ಅಷ್ಟಾಗಿ ಗಮನವನ್ನು ನೀಡುವುದಿಲ್ಲ.
ನಟಿ ತನೀಷಾ ಕುಪ್ಪಂಡ (Tanisha Kuppanda) ಅವರು ಹೀಗೆ ಬರುವ ನೆಗೆಟಿವ್ ಕಾಮೆಂಟ್ ಗಳ ಕುರಿತಾಗಿ ಮಾತನಾಡಿದ್ದಾರೆ. ಜನಪ್ರಿಯ ಯೂಟ್ಯೂಬ್ ಚಾನೆಲ್ ಆಗಿರುವ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ. ಸಾಕಷ್ಟು ಜನ ನಾನು ಪೆಂಟಗನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದೆ ಎಂದುಕೊಂಡಿದ್ದಾರೆ. ಮೊನ್ನೆ ಮೊನ್ನೆ ಬಂದು ರೆಸ್ಡೋರೆಂಟ್ ಓಪನ್ ಮಾಡಿದ್ಲು, ಕಾರು ತಗೊಂಡ್ಲು, ಜ್ಯುವೆಲ್ಲರಿ ಶಾಪ್ ಓಪನ್ ಮಾಡಿದ್ಲು ಅಂತೆಲ್ಲಾ ಏಕವಚನದಲ್ಲಿ ಮಾತಾಡೋದು ಕೋಪ ತರಿಸುತ್ತೆ.
ನೀವು ನಮ್ಮನ್ನ ಸಾಕಿಲ್ಲ, ಸಾಕಲ್ಲ ಯಾಕೆ ಗುರು ಹೀಗೆಲ್ಲಾ ಮಾತನಾಡ್ತೀರಾ? ಏನೇನೋ ಕಾಮೆಂಟ್ ಯಾಕೆ ಮಾಡ್ಬೇಕು. ಹೇಳೋದನ್ನ ಸರಿಯಾಗಿ ಹೇಳಿ, ಅದು ಬಿಟ್ಟು ಹೋಗೆ ಬಾರೆ ಅಂತೆಲ್ಲಾ ಅಂದ್ರೆ ನಿಮ್ಮ ಮೇಲಿನ ಮರ್ಯಾದೆ ಹೋಗುತ್ತೆ ಎಂದಿದ್ದಾರೆ ತನೀಷಾ. ಎಷ್ಟೋ ಜನಕ್ಕೆ ನಾನು ರಿಪ್ಲೈ ಮಾಡಿರ್ತೀನಿ, ನಿಮ್ಮ ಅಮ್ಮನನ್ನ ಹೋಗಿ ಕೇಳು ಅಂತ ಅನ್ನೋ ಮಾತನ್ನು ಸಹಾ ತನೀಷಾ ಈ ವೇಳೆ ಹೇಳಿಕೊಂಡಿದ್ದಾರೆ.
ಕೆಲವರು ನಿಮ್ಮ ಹೊಕ್ಕಳ ಫೋಟೋ ಕಳಿಸಿ ಅಂತ ಕೇಳ್ತಾರೆ. ಆಗ ಹೋಗು ಗುರೂ ನಿನ್ನ ಅಮ್ಮನನ್ನು ಕೇಳು. ಅವ್ರು ಮನೆಯಲ್ಲೇ ಇರ್ತಾರಲ್ಲ. ನಿನ್ನ ಜೊತೆ ಇರ್ತಾರೆ ಕೇಳು ಫೋಟೋ ಕಳಿಸ್ತಾರೆ. ಇಲ್ಲ ನೇರವಾಗಿ ನೋಡು ಅಂತ ಹೇಳ್ತೀನಿ. ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣು ಎಂದು ತನೀಷಾ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ತನೀಷಾ ಅವರು ಹೇಳಿರುವ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮೆಚ್ಚುಗೆಗಳು ಹರಿದು ಬರುತ್ತಿದೆ.