Actor Yash : ಕೆಜಿಎಫ್ ಸರಣಿ (KGF Series) ಸಿನಿಮಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಆಗಿ ಹೆಸರನ್ನು ಪಡೆದುಕೊಂಡಿರುವ ಕನ್ನಡ ನಟ ಯಶ್ (Actor Yash) ಅವರು ಆ ಸಿನಿಮಾದ ನಂತರ ಬಹಳ ಸಮಯದವರೆಗೂ ಯಾವುದೇ ಹೊಸ ಸಿನಿಮಾ ಘೋಷಣೆಯನ್ನು ಮಾಡಿರಲಿಲ್ಲ. ಆದರೆ ಬಹು ದಿನಗಳ ನಂತರ ಮತ್ತೊಂದು ಭಾರಿ ಬಜೆಟ್ ಸಿನಿಮಾ ಆಗಿರುವ ಟಾಕ್ಸಿಕ್ ನಲ್ಲಿ (Toxic) ನಾಯಕನಾಗಿದ್ದು ಪ್ರಸ್ತುತ ತಮ್ಮ ಈ ಹೊಸ ಸಿನಿಮಾದ ಕೆಲಸಗಳಲ್ಲಿ ನಟ ಸಕ್ರಿಯರಾಗಿದ್ದಾರೆ.
ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ನಟನೆ, ಅವರ ಸ್ಟೈಲ್ ಮತ್ತು ಅವರ ಲುಕ್ ಇಡೀ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿತ್ತು. ಈ ಸಿನಿಮಾದ ನಂತರ ದೇಶದ ಉದ್ದಗಲಕ್ಕೂ ಸಹಾ ಸಿನಿ ಪ್ರೇಮಿಗಳು ನಟನ ಅಭಿಮಾನಿಗಳಾಗಿದ್ದಾರೆ. ಸಹಜವಾಗಿಯೇ ಕೆಜಿಎಫ್ ಸಿನಿಮಾದ ಯಶಸ್ಸಿನ ನಂತರ ಸ್ಟಾರ್ ನಿರ್ದೇಶಕರು ಯಶ್ ಜೊತೆ ಸಿನಿಮಾ ಮಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಕೆಜಿಎಫ್ ನಂತರ ನಟ ಯಶ್ ಯಾವ ನಿರ್ಮಾಣ ಸಂಸ್ಥೆಯಲ್ಲಿ, ಯಾವ ನಿರ್ದೇಶಕನ ಸಾರಥ್ಯದಲ್ಲಿ ಹೊಸ ಸಿನಿಮಾವನ್ನು ಮಾಡಲಿದ್ದಾರೆ ಎಂದು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ನಿರೀಕ್ಷೆಯಿಂದ ಕಾಯುತ್ತಿದ್ದರು. ಆ ನಿರೀಕ್ಷೆಗೆ ಉತ್ತರ ಎನ್ನುವಂತೆ ಗೀತು ಮೋಹನ್ ದಾಸ್ (Geetu Mohan Das) ಅವರ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರು ನಾಯಕ ಎನ್ನುವ ಸುದ್ದಿ ಬಂದಾಗ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈಗ ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರು ಯಶ್ ಜೊತೆಗೆ ಸಿನಿಮಾ ಮಾಡಬೇಕೆನ್ನುವ ತಮ್ಮ ಆಸಕ್ತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ನಾಟ್ಟಾ ಮೈ, ಮುತ್ತು ಮತ್ತು ಪಡೆಯಪ್ಪದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೆಎಸ್ ರವಿಕುಮಾರ್ (K S Ravikumar) ಅವರು ಯಶ್ ಜೊತೆಯಲ್ಲಿ ಕೆಲಸ ಮಾಡಲು ತಮಗಿರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಇವರು ಕೋಟಿಗೊಬ್ಬ 2 ಸಿನಿಮಾ ವನ್ನ ನಿರ್ದೇಶನ ಮಾಡಿದ್ದಾರೆ. ಈಗ ತೆಲುಗು ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ನನಗೆ ಯಶ್ ಜೊತೆ ಕೆಲಸ ಮಾಡುವ ಆಸಕ್ತಿ ಇದೆ. ನನ್ನ ಹತ್ತಿರ ಅವರಿಗೆ ಸೂಕ್ತವಾಗುವ ಕಥೆಯೊಂದಿದೆ. ಯಶ್ ಅವರು ಇಂದು ಬಹಳ ದೊಡ್ಡ ನಟ. ಈ ಕಥೆ ಕೂಡ ಬಹಳ ಭಿನ್ನವಾಗಿದೆ.
ನಾನು ರಜನಿಕಾಂತ್ ಅವರ ಜೊತೆಯಲ್ಲಿ ಮಾಡಬೇಕಿದ್ದ ರಾಣಾ ಸಿನಿಮಾ ನಿಂತು ಹೋಯ್ತು. ಆದರೆ ಆ ಸಿನಿಮಾವನ್ನ ಮಾಡೋದು ನನ್ನ ಕನಸಾಗಿದೆ. ತೆಲುಗಿನಲ್ಲಿ ನನಗೆ ರಾಮ್ ಚರಣ್ ಅಚ್ಚುಮೆಚ್ಚಿನ ನಟ ಎನ್ನುವ ಮಾತನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಕೆ ಎಸ್ ರವಿಕುಮಾರ್ ಅವರ ಮಾತು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.