North Korea: ಉತ್ತರ ಕೊರಿಯಾ (North Korea) ಅನ್ನೋ ಹೆಸರನ್ನ ಕೇಳಿದ ಕೂಡ್ಲೇ ನೆನಪಾಗೋದು ಅಲ್ಲಿನ ನಿರಂಕುಶ ಅಧಿಕಾರಿ ಕಿಮ್ ಜಾಂಗ್ ಉನ್ (Kim Jong Un). ಅಲ್ಲಿನ ಆಡಳಿತ, ಕಾನೂನು, ನಿಯಮಗಳು ಹಾಗೂ ವಿಚಿತ್ರ ಎನಿಸುವ ಕಟ್ಟುಪಾಡುಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ವಿಷಯಗಳು ಸುದ್ದಿಯಾಗಿದೆ. ಕೆಲವೊಮ್ಮೆ ಇಲ್ಲಿನ ನಿಯಮಗಳಿಂದ ಬೇಸತ್ತ ಕೆಲವರು ಸ್ವಂತ ದೇಶದಿಂದಲೇ ಓಡಿ ಹೋಗುವ ಪ್ರಯತ್ನ ಮಾಡಿ, ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳು ಸಹಾ ಇದೆ.
ಈಗ ಉತ್ತರ ಕೊರಿಯಾದ ಕುರಿತಾಗಿ ಹೊಸದೊಂದು ವಿಚಾರ ವೈರಲ್ ಆಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದೆ. ಉತ್ತರ ಕೊರಿಯಾದಲ್ಲಿ ಯುವತಿಯರ ಜೀವನ ಎಷ್ಟು ಭೀಕರವಾಗಿದೆ ಎನ್ನುವುದನ್ನು ಅದೇ ದೇಶಕ್ಕೆ ಸೇರಿದ ಎವೋಮಿ ಪಾರ್ಕ್ ಎನ್ನುವ ಹೆಸರಿನ ಯುವತಿ ಬಹಿರಂಗ ಪಡಿಸಿದ್ದಾಳೆ.
ಉತ್ತರ ಕೊರಿಯಾದ ನಿರಂಕುಶ ಆಡಳಿತಗಾರ ಕಿಮ್ ಜಾನ್ ಉಂಗ್ ಪ್ರತಿವರ್ಷ 25 ಜನ ಕನ್ಯತ್ವ (Virgin) ಕಳೆದುಕೊಳ್ಳದ ಯುವತಿಯರನ್ನ ನೇಮಕ ಮಾಡಿಕೊಳ್ತಾರೆ. ಹಾಗೆ ಆಯ್ಕೆ ಮಾಡಿಕೊಂಡ ಯುವತಿಯರನ್ನು ಮೂರು ಗುಂಪುಗಳಾಗಿ ವಿಭಜನೆ ಮಾಡಲಾಗುತ್ತೆ ಎನ್ನುವ ವಿಚಾರವನ್ನು ಎವೋಮಿ ತಿಳಿಸಿದ್ದಾರೆ.
ಹೀಗೆ ಯುವತಿಯರನ್ನು ಗುಂಪುಗಳಾಗಿ ವಿಭಜಿಸಿದ ನಂತರ ಒಂದು ಗುಂಪು ಕಿಮ್ ಗೆ ಮಸಾಜ್ ಮಾಡುತ್ತದೆ, ಮತ್ತೊಂದು ಗುಂಪು ಅವರ ಮುಂದೆ ಹಾಡಿ, ಡ್ಯಾನ್ಸ್ ಮಾಡಿ ಅವರಿಗೆ ಮನರಂಜನೆ ನೀಡುತ್ತದೆ. ಮೂರನೇ ಗುಂಪು ಕಿಮ್ ಮತ್ತು ಆತನ ನಿಕಟವರ್ತಿಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತದೆ ಎನ್ನುವ ಶಾಕಿಂಗ್ ವಿಷಯ ತಿಳಿಸಿದ್ದಾಳೆ ಎವೋಮಿ.