Kannada Serial TRP: ಮತ್ತೊಂದು ವೀಕೆಂಡ್ ಬಂದಿದೆ. ಅಂದರೆ ಕಿರುತೆರೆಯ ಪ್ರೇಕ್ಷಕರಿಗೆ ತಮ್ಮ ಅಚ್ಚು ಮೆಚ್ಚಿನ ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನವನ್ನು ಪಡೆದಿದ್ಯೋ , ಇಲ್ಲವೋ ಅನ್ನೋದನ್ನ ತಿಳಿಯೋ ಸಮಯ. ಕನ್ನಡ ಕಿರುತೆರೆಯಲ್ಲಿ ಸದ್ಯಕ್ಕಂತೂ ಒಂದಷ್ಟು ಸೀರಿಯಲ್ ಗಳ (Kannada Serial TRP) ನಡುವೆ ಟಾಪ್ ಸ್ಥಾನಕ್ಕೆ ಲಗ್ಗೆಯಿಡಲು ದೊಡ್ಡ ಸ್ಪರ್ಧೆಯೇ ನಡೆಯುತ್ತಿದೆಯೇನೋ ಎನ್ನುವಂತಹ ಪೈಪೋಟಿ ಕಂಡು ಬರುತ್ತಿದೆ. ಕಿರುತೆರೆಯ ಮಾತು ಬಂದ ಕೂಡಲೇ ಅಲ್ಲಿ ಮನರಂಜನೆಯ ಸಿಂಹಪಾಲು ಸೀರಿಯಲ್ ಗಳದ್ದೇ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ನೋಡೋಣ ಬನ್ನಿ.
ಪುಟ್ಟಕ್ಕನ ಮಕ್ಕಳು (Puttakkana Makkalu) ಈ ವಾರ ಸಹಾ ತನ್ನ ಗೆಲುವಿನ ಪಯಣವನ್ನು ಮುಂದುವರೆಸಿದೆ. ಕಳೆದ ಕೆಲವು ದಿನಗಳಿಂದಲೂ ನಡೆಯುತ್ತಿರುವ ಪುಟ್ಟಕ್ಕನ ಮಗಳು ಸಹನಾ ದಾಂಪತ್ಯದ ಕಲಹದ ಎಪಿಸೋಡ್ ಗಳು ಟಿ ಆರ್ ಪಿ ಯನ್ನ ಹೆಚ್ಚಿಸಿದೆ. ಆದ ಕಾರಣ ಕಳೆದ ವಾರದಂತೆ ಈ ವಾರವೂ ಸಹಾ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲನೇ ಸ್ಥಾನದಲ್ಲೇ ಮುಂದುವರೆದಿದ್ದು ಮುಂದಿನ ವಾರ ಇದೇ ಸ್ಥಾನದಲ್ಲಿ ಉಳಿಯುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಆರಂಭವಾದ ಕೆಲವೇ ವಾರಗಳಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ, ಬಹು ತಾರಾಗಣ ವನ್ನು ಹೊಂದಿರುವ ಧಾರಾವಾಹಿ ಲಕ್ಷ್ಮೀ ನಿವಾಸ (Lakshmi Nivasa) ಈ ವಾರ ಎರಡನೆಯ ಸ್ಥಾನದಲ್ಲಿದೆ.ಕಳೆದ ವಾರ ಕೂಡಾ ಲಕ್ಷ್ಮೀ ನಿವಾಸ ಎರಡನೇ ಸ್ಥಾನದಲ್ಲೇ ಇತ್ತು. ಈ ವಾರ ಅದೇ ಮುಂದುವರೆದಿದೆ. ಎರಡು ವಾರಗಳ ಹಿಂದೆ ಲಕ್ಷ್ಮೀ ನಿವಾಸ ಪುಟ್ಟಕ್ಕನ ಮಕ್ಕಳಿಗೆ ಟಕ್ಕರ್ ಕೊಟ್ಟು ನಂಬರ್ ಒನ್ ಸ್ಥಾನಕ್ಕೆ ಬಂದಿತ್ತು.
ಸೀತಾ ರಾಮ (SeethaRama) ಸೀರಿಯಲ್ ಈ ವಾರ ಮೂರನೇ ಸ್ಥಾನದಲ್ಲಿ ಮಿಂಚಿದೆ. ಕಥೆಯಲ್ಲಿ ಸೀತಾ ಮತ್ತು ರಾಮನ ಮದುವೆ ಮಾತುಕತೆಗಳು ನಡೆಯುತ್ತಿವೆ. ಸೂರ್ಯಪ್ರಕಾಶ್ ಮದುವೆಗೆ ಒಪ್ಪಿ ಆಗಿದೆ. ಇದರ ನಡುವೆಯೇ ಸೀತಾ ತನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಮಾಡುವಾಗಲೇ ಮತ್ತೊಂದು ಕಡೆ ಭಾರ್ಗವಿ ಮದುವೆ ನಿಲ್ಲಿಸುವುದು ಹೇಗೆಂತ ಆಲೋಚನೆ ಮಾಡ್ತಿದ್ದಾಳೆ.
ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ (RAMACHARI) ಸೀರಿಯಲ್ ಇದೆ. ರಾಮಾಚಾರಿ ಸೀರಿಯಲ್ ನ ಟಿ ಆರ್ ಪಿಯಲ್ಲಿ ಏರಿಳಿತಗಳು ಕಂಡು ಬರುತ್ತಿದ್ದು, ವಾರದಿಂದ ವಾರಕ್ಕೆ ರಾಮಾಚಾರಿ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸ್ಥಾನ ಪಲ್ಲಟ ಕಾಣುತ್ತಿದೆ. ರಾಮಾಚಾರಿ ಜೊತೆಗೆ ಅವಳಿ ಸಹೋದರ ಕಿಟ್ಟಿ ಕೂಡಾ ಈಗ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾನೆ.
ಗೌತಮ್ ದೀವಾನ್ ಮತ್ತು ಭೂಮಿಕ ನಡುವಿನ ಒಂದು ವಿಶೇಷವಾದ ಪ್ರೀತಿಯ ಕಥೆಯಾಗಿರುವ ಅಮೃತಧಾರೆ (Amruthadhaare) ಈ ವಾರ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಮುಂದಿನ ವಾರಗಳಲ್ಲಿ ಮತ್ತೆ ಅದು ಐದರೊಳಗೆ ಸ್ಥಾನವನ್ನು ಪಡೆದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಬಹುದಾಗಿದೆ.