Rashmi Gautam: ಪ್ರಜ್ವಲ್ ರೇವಣ್ಣ (Prajawal Revanna Pen drive) ಅವ್ರ ಪೆನ್ ಡ್ರೈವ್ ಪ್ರಕರಣ ರಾಜ್ಯ ಮಾತ್ರವೇ ಅಲ್ಲ ಇಡೀ ದೇಶದಲ್ಲಿ ಸದ್ದು ಮತ್ತು ಸುದ್ದಿಯನ್ನು ಮಾಡಿದೆ. ಈ ವಿಚಾರ ಹೊರ ಬಂದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಅಸಹನೆ, ಅಸಮಾಧಾನ ಮತ್ತು ಆಕ್ರೋಶವನ್ನು ಹೊರ ಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಅವ್ರನ್ನ ನಿಂದನೆ ಮಾಡಿದ್ದಾರೆ, ಟೀಕಿಸಿದ್ದಾರೆ ಹಾಗೂ ಸರಿಯಾದ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹ ವನ್ನ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ನಟಿ ಪೂನಂ ಕೌರ್ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು.
ಈಗ ಇದೇ ವಿಚಾರವಾಗಿ ತೆಲುಗಿನ ನಟಿ ಮತ್ತು ಸ್ಟಾರ್ ನಿರೂಪಕಿಯಾಗಿರುವ ರಷ್ಮಿ ಗೌತಮ್ (Rashmi Gautam) ಸಹಾ ತಮ್ಮ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ಮತ್ತು ಕಾಂಗ್ರೆಸ್ ನ ಕಾರ್ಯಕರ್ತೆ ಆಗಿರುವ ಪೂನಂ ಕೌರ್ (Poonam Kaur)ಅವರು ಅಧಿಕಾರದಲ್ಲಿರುವ ವ್ಯಕ್ತಿಗಳ ಮಕ್ಕಳು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಟೀಕೆ ಮಾಡಿದ್ದರು.
ಅಲ್ಲದೇ ಅವರು ಬಹಳ ಸುಲಭವಾಗಿ ಅದರಿಂದ ಬಚಾವಾಗುತ್ತಾರೆ ಎಂದು ಕೆಲವು ಉದಾಹರಣೆಗಳನ್ನು ಸಹಾ ನೀಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡಿದ್ದರು. ಅವನೊಬ್ಬ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ ಎಂದೂ, 2,800 ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬುದಾಗಿಯೂ ಆರೋಪವನ್ನು ಮಾಡಿದ್ದರು.
ಈಗ ಇದೇ ವಿಚಾರವಾಗಿ ನಟಿ, ನಿರೂಪಕಿ ರಶ್ಮಿ ಗೌತಮ್ ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಅನ್ನ ಶೇರ್ ಮಾಡಿಕೊಂಡಿದ್ದು, ಅದರಲ್ಲಿ “ಮಹಿಳೆ ಬಡವಳಾಗಿದ್ದು, ಹಸಿದಿರುವಾಗ ಬಾಯಿಗೆ ಅನ್ನ ಕೊಡಿ, ನಿನ್ನ ಅದನ್ನಲ್ಲ” ಎಂದು ಪ್ರಖ್ಯಾತ ಬ್ರಿಟನ್ ಲೇಖಕಿಯಾಗಿರುವ ರಾಷೆಲ್ ಮೊರಾನ್ ಅವರ ಒಂದು ಸಂದೇಶವನ್ನು ಶೇರ್ ಮಾಡಿಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿ, ಒಂದಷ್ಟು ಚರ್ಚೆಗೆ ಕಾರಣವಾಗಿದೆ.