Bigg Boss: ಬಿಗ್ ಬಾಸ್ (Bigg Boss) ಶೋ ಎಂದರೆ ಅದು ಟಿವಿಯಲ್ಲೇ ಆಗಿರಲಿ ಅಥವಾ ಓಟಿಟಿಯಲ್ಲೇ ಆಗಿರಲಿ ಅದಕ್ಕಿರುವ ಜನಪ್ರಿಯತೆ ಮತ್ತು ಕ್ರೇಜ್ ಮಾತ್ರ ಅಷ್ಟಿಷ್ಟಲ್ಲ. ಭಾಷೆ ಯಾವುದೇ ಆದರೂ ಬಿಗ್ ಬಾಸ್ ಗೆ ಆಯಾ ಭಾಷೆಯಲ್ಲಿ ಅಪಾರವಾದ ಪ್ರೇಕ್ಷಕರ ಬಳಗವೇ ಇದೆ. ಬಿಗ್ ಬಾಸ್ ನ ಪ್ರತಿ ಸೀಸನ್ ಬಂದಾಗಲೂ ಒಂದಷ್ಟು ಜನ ಇಂತಹ ಶೋ ಯಾಕೆ? ಈ ಶೋ ಬೇಡ ಎಂದೆಲ್ಲಾ ಅನಿಸಿಕೆ, ಅಭಿಪ್ರಾಯ, ಅಸಮಾಧಾನ ಹೊರಹಾಕುತ್ತಾರೆ. ಆದರೆ ಬಿಗ್ ಬಾಸ್ ನ ಪ್ರತಿ ಸೀಸನ್ ಸಹಾ ಭರ್ಜರಿ ಯಶಸ್ಸು ಪಡೆದುಕೊಂಡು ಬೀಗುತ್ತಲೇ ಇದೆ. ಒಂದು ವರ್ಗದ ಪ್ರೇಕ್ಷಕರು ಈ ಶೋ ನ ನಿರೀಕ್ಷೆಯಲ್ಲಿರುತ್ತಾರೆ ಅನ್ನೋದು ಸಹಾ ಸತ್ಯ.
ತೆಲುಗಿನಲ್ಲಿ ಬಿಗ್ ಬಾಸ್ ಶೋ 2017 ರಲ್ಲಿ ಆರಂಭವಾಯಿತು. ಮೊದಲ ಸೀಸನ್ ಅನ್ನು ಜೂ. ಎನ್ ಟಿ ಆರ್ ನಿರೂಪಣೆ ಮಾಡಿದರು. ಎರಡನೇ ಸೀಸನ್ ಅನ್ನು ನಡ ನಾನಿ ನಿರೂಪಣೆ ಮಾಡಿದರು. ಇದಾದ ನಂತರ ಮೂರನೇ ಸೀಸನ್ ನಿಂದ ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆ ಮಾಡುತ್ತಿದ್ದು, ಏಳು ಸೀಸನ್ ಗಳನ್ನು ಮುಗಿಸಿದೆ ತೆಲುಗು ಬಿಗ್ ಬಾಸ್. ಹೀಗೆ ಮೂರನೇ ಸೀಸನ್ ನಿಂದ ನಿರೂಪಣೆ ಆರಂಭಿಸಿದ ನಾಗಾರ್ಜುನ (Nagarjuna) ಅವರೇ ನಿರೂಪಕನಾಗಿ ಮುಂದುವರೆಯುತ್ತಿದ್ದಾರೆ.
ಆದರೆ ತೆಲುಗಿನಲ್ಲಿ ಬಿಗ್ ಬಾಸ್ ನ ಆರು ಸೀಸನ್ ಗಳು ಅಷ್ಟಾಗಿ ಸಕ್ಸಸ್ ರೇಟ್ ಅನ್ನು ಪಡೆದುಕೊಂಡಿರಲಿಲ್ಲ. ಆದರೆ ಏಳನೇ ಸೀಸನ್ ಅನ್ನು ಹೊಸದಾಗಿ ರೂಪಿಸಲಾಯಿತು. ಅಂದುಕೊಂಡ ಹಾಗೆ ಏಳನೇ ಸೀಸನ್ ಹಿಂದಿನ ಎಲ್ಲಾ ಸೀಸನ್ ಗಳಿಗಿಂತಲೂ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿತು. ಅಲ್ಲದೇ ಶೋ ಮುಗಿದ ಮೇಲೆ ಒಂದಷ್ಟು ವಿ ವಾ ದಗಳಿಗೂ ಸಹಾ ಕಾರಣವಾಯಿತು.
ಬಿಗ್ ಬಾಸ್ ತೆಲುಗು ಸೀಸನ್ ಏಳರಲ್ಲಿ ಕಾಮನ್ ಮ್ಯಾನ್ ಆಗಿ ಬಂದಿದ್ದ ರೈತ ಪಲ್ಲವಿ ಪ್ರಶಾಂತ್ (Pallavi Prashanth) ಗೆಲುವು ಪಡೆದಿದ್ದು ಅಚ್ಚರಿಯನ್ನು ಮೂಡಿಸಿತ್ತು. ಹೀಗೆ ಏಳನೇ ಸೀಸನ್ ಪಡೆದ ಭರ್ಜರಿ ಗೆಲುವಿನ ನಂತರ ಇದೀಗ ಸೀಸನ್ ಎಂಟಕ್ಕೆ ಸಿದ್ಧತೆಗಳು ಆರಂಭವಾಗಿದೆ ಎನ್ನುವುದು ಹೊಸ ಸುದ್ದಿಯಾಗಿದೆ. ಅಲ್ಲದೇ ಈ ಬಾರಿ ಜೂನ್ ಗೆ ಮೊದಲೇ ಸೀಸನ್ ಎಂಟನ್ನು ಆರಂಭಿಸಲು ಪ್ಲಾನ್ ಮಾಡಲಾಗಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.
ಈ ಸೀಸನ್ ಅನ್ನು ಕೂಡಾ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದು, ಅವಧಿಗಿಂತ ಮೊದಲೇ ಬಿಗ್ ಬಾಸ್ (Bigg Boss Telugu) ಪ್ರೇಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದ್ದು, ಈ ಸುದ್ದಿಯನ್ನು ಕೇಳಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಲ್ಲದೇ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋ ವಿಚಾರವಾಗಿ ಸಹಾ ಒಂದಷ್ಟು ಚರ್ಚೆಗಳು ಶುರುವಾಗಿದೆ.