Puttakkana Makkalu: ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಟಿ ಆರ್ ಪಿ ವಿಚಾರದಲ್ಲಿ ಬೇರೆಲ್ಲಾ ಸೀರಿಯಲ್ ಗಳಿಗಿಂತ ಮುಂದಿದೆ, ಅದೇ ಕಾರಣಕ್ಕೆ ಸಾಕಷ್ಟು ಸಮಯದಿಂದಲೂ ನಂಬರ್ ಒನ್ ಸ್ಥಾನದಲ್ಲೇ ಇದ್ದು, ಮನರಂಜನೆಯ ವಿಚಾರದಲ್ಲಂತೂ ಪ್ರೇಕ್ಷಕರಿಗೆ ಭರ್ಜರಿ ರಸದೂಟವನ್ನೇ ಬಡಿಸುವಂತೆ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿದ್ದು, ಸೀರಿಯಲ್ ನ ಪ್ರತಿ ಪಾತ್ರವು ಪ್ರೇಕ್ಷಕರ ಅಚ್ಚುಮೆಚ್ಚಿನ ಪಾತ್ರಗಳಾಗಿ ಖುಷಿಯನ್ನು ನೀಡುತ್ತಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಕಥೆಯಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಸೈಲೆಂಟ್ ಆಗಿದ್ದ ಸಹನಾ (Sahana) ಈಗ ಅತ್ತೆ ಮತ್ತು ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಆದರೆ ಪುಟ್ಟಕ್ಕ (Puttakka) ಮಾತ್ರ ಮಗಳ ಜೀವನ ಹಾಳಾಗಬಾರದು ಅಂತ ಏನೇನೋ ಪ್ರಯತ್ನವನ್ನು ಮಾಡುವಾಗಲೇ ಸ್ನೇಹ ಸಹನಾ ಅತ್ತೆ ಮೇಲೆ ದೂರನ್ನ ಕೊಟ್ಟಿದ್ದಾಳೆ. ತನ್ನ ತಾಯಿ ಜೈಲಲ್ಲಿ ಇರೋದನ್ನ ನೋಡಿ ಸಹನಾ ಗಂಡ ಮುರಳಿ ಮೇಷ್ಟ್ರು ಸಹನಾ ಗೆ ಆವಾಜ್ ಹಾಕಿ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಇದೆಲ್ಲಾ ಆದ ಮೇಲೆ ಸ್ನೇಹ ಜೊತೆಗೆ ಸ್ಟೇಷನ್ ಗೆ ಹೋದ ಸಹನಾ, ತನ್ನ ತಂಗಿ ದೂರು ಕೊಟ್ಟಿರೋದು ತಪ್ಪು, ಯಾಕಂದ್ರೆ ಅವಳು ದೂರನ್ನ ಕೌಸಲ್ಯ ಅವ್ರ ಮೇಲೆ ಮಾತ್ರ ಕೊಟ್ಟಿದ್ದಾಳೆ, ಜೊತೆಗೆ ಅವರ ಅಳಿಯ ಸುಕುಮಾರನ ಮೇಲೂ ಕೊಡಬೇಕಾಗಿತ್ತು ಅಂತ ಹೇಳೋ ಮೂಲಕ ಕೌಶಲ್ಯ ಗೆ ಶಾಕ್ ನೀಡಿದ್ದಾಳೆ.
ಯಾವಾಗ್ಲೂ ಮೌನವಾಗಿ ಇರ್ತಿದ್ದ ಸಹನ ತನಗೆ ಹಿಂಸೆ ನೀಡಿ, ತನ್ನ ವಿರುದ್ಧ, ತನ್ನ ನಡತೆ ವಿರುದ್ಧ ಮಾತಾಡಿದ ಅತ್ತೆಗೆ ಬುದ್ಧಿ ಕಲಿಸೋಕೆ ಮುಂದಾಗಿರೋದನ್ನ ನೋಡಿ ಪ್ರೇಕ್ಷಕರು ಮೆಚ್ಚುಗೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳನ್ನು ಮಾಡಿ ಸೂಪರ್ ಸಹನಾ ಎಂದು ಹೇಳುತ್ತಿದ್ದಾರೆ. ಸಹನಾ ಪಾತ್ರ ಇನ್ಮುಂದೆ ಹೀಗೆ ಇರಲಿ ಅಂತ ಕೂಡಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.