Shravani Subramanya: ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಶ್ರೀವಲ್ಲಿ ಶ್ರಾವಣಿ ಮನೆಯಲ್ಲಿ ಕೆಲಸವನ್ನ ಗಿಟ್ಟಿಸಿಕೊಂಡಾಗಿದೆ. ಆದರೆ ತನಗೆ ಕೆಲಸವನ್ನು ಕೊಟ್ಟಿರೋದರ ಹಿಂದೆ ವಿಜಯಾಂಬಿಕೆ ದೊಡ್ಡ ಕುತಂತ್ರವನ್ನೇ ಮಾಡ್ತಿದ್ದಾಳೆ ಅನ್ನೋದರ ಸಣ್ಣ ಸುಳಿವು ಸಹಾ ಶ್ರೀವಲ್ಲಿಗೆ (Srivalli) ಇಲ್ಲ. ಶ್ರಾವಣಿ ಶ್ರೀವಲ್ಲಿಯನ್ನ ತನ್ನ ಚಿಕ್ಕಮ್ಮ ಮತ್ತು ಪಿಂಕಿಗೆ ಪರಿಚಯ ಮಾಡಿದ್ದಾಳೆ. ಪಿಂಕಿ ಅಂತು ಡ್ಯಾನ್ಸ್ ಟೀಚರ್ ನ ನೋಡಿ ಖುಷಿಯಾಗಿದ್ದು ಮಾತ್ರ ಅಲ್ಲ, ಈ ಟೀಚರ್ ನನಗೆ ತುಂಬಾ ಇಷ್ಟ ಆದ್ರು ಅಂತ ಹೇಳಿದ್ದಾಳೆ.
ಮತ್ತೊಂದು ಕಡೆ ಇಂದ್ರಮ್ಮ ವರಲಕ್ಷ್ಮಿ ಹಾಗೂ ವರದನ ವಿಚಾರ ತಿಳಿದು ಬೆಂಕಿ ತುಳಿದಂತೆ ಕೆಂಡಾಮಂಡಲವಾಗಿದ್ದು, ಸುಬ್ಬು ಅವರ ಮನೆಯವರ ಮೇಲೆ ಹರಿಹಾಯ್ದಿದ್ದಾಳೆ. ತಕ್ಷಣ ಮನೆ ಖಾಲಿ ಮಾಡಿ ಅಂತ ಮನೆಯ ಪಾತ್ರೆ ಸಾಮಾನುಗಳನ್ನು ಹೊರಗಡೆ ಎಸೆದಿದ್ದಾಳೆ. ಮನೇ ಹತ್ರ ಏನ್ ನಡೀತಿದೆ ಅನ್ನೋದು ಸುಬ್ಬುಗೆ ಗೊತ್ತಿಲ್ಲ. ಆದರೆ ಅವರ ಅಕ್ಕ ಪದೇ ಪದೇ ಕಾಲ್ ಮಾಡಿದ್ದನ್ನು ನೋಡಿ ಸುಬ್ಬು ಮನೆ ಕಡೆ ಹೊರಡೊದಕ್ಕೆ ಸಜ್ಜಾಗ್ತಾನೆ.

ಅದೇ ವೇಳೆ ಶ್ರೀವಲ್ಲಿ ಕೂಡಾ ಅವನ ಜೊತೆ ಬೈಕ್ ನಲ್ಲಿ ಮನೆಗೆ ಬರ್ತಾಳೆ. ಮಗ ಹಾಗೂ ವರಲಕ್ಷ್ಮಿ ವಿಚಾರಕ್ಕೆ ಸಿಟ್ಟಿನಿಂದ ಕೂಗಾಡ್ತಿದ್ದ ಇಂದ್ರಮ್ಮ ಶ್ರೀವಲ್ಲಿ ಮತ್ತು ಸುಬ್ಬು ಜೊತೆಯಾಗಿ ಬಂದಿದ್ದನ್ನ ನೋಡಿ ಇನ್ನಷ್ಟು ರೊಚ್ಚಿಗೆದ್ದಿದ್ದಾಳೆ. ಯಾರು ಎಷ್ಟೇ ಕೇಳಿಕೊಂಡ್ರೂ, ಬೇಡಿಕೊಂಡ್ರೂ ಸುಬ್ಬು ಮನೆಯವರ್ಯಾರು ಆ ಮನೇಲಿ ಇರಬಾರದು ಅಂತ ಮನೆಗೆ ಬೀಗ ಹಾಕಿದ್ದಾಳೆ. ಅಮ್ಮ ಮಾಡ್ತಿರೋ ಕೆಲಸವನ್ನು ನೋಡಿ ಶ್ರೀ ವಲ್ಲಿ ಸಿಟ್ಟಾಗಿದ್ದಾಳೆ.
ಇಂದ್ರಮ್ಮ ಯಾರದೇ ಮಾತನ್ನು ಕೇಳಲ್ಲ ಅನ್ನೋದನ್ನ ನೋಡಿದ ಶ್ರೀವಲ್ಲಿ, ಸುಬ್ಬು ಅವರ ಮನೆ ಬೀಗ ಕೊಡು ಇಲ್ಲಾ ಅಂದ್ರೆ ಪ್ರಾಣ ಕಳ್ಕೊಳ್ತೀನಿ ಅಂತ ತನ್ನ ಅಮ್ಮನಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ನಂತರ ಕೈಯನ್ನ ಕೊಯ್ದುಕೊಂಡಿದ್ದಾಳೆ. ತಕ್ಷಣ ಇಂದ್ರಮ್ಮ, ವರದ ಮತ್ತು ಸುಬ್ಬು ಶ್ರೀವಲ್ಲಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಸಣ್ಣ ಗಾಯ ಆಗಿರೋ ಕಾರಣ ಹೆಚ್ಚು ತೊಂದರೆ ಏನಿಲ್ಲ ಅಂತ ಅವಳನ್ನ ಡಿಸ್ಚಾರ್ಜ್ ಮಾಡಿದ್ದಾರೆ.

ಸುಬ್ಬು (Subbu) ಮನೆಯವರ ಮೇಲೆ ಕೆಂಡದಂತ ಕೋಪದಿಂದಲೇ ಮನೆಗೆ ವಾಪಸ್ ಬರೋ ಇಂದ್ರಮ್ಮ ಅದೇ ಕೋಪದಲ್ಲಿ ಮನೆ ಬೀಗವನ್ನ ಎಸೆದು, ಇನ್ನು ಮುಂದೆ ನಿಮ್ಮ ಮಕ್ಕಳು ನಮ್ಮನೆ ಮಕ್ಕಳ ವಿಷಯಕ್ಕೆ ಬರಬಾರದು ಅಂತ ಖಡಕ್ಕಾಗಿ ಸುಬ್ಬ ಮನೆಯವ್ರಿಗೆ ಎಚ್ಚರಿಕೆಯಿಂದ ಕೊಟ್ಟಿದ್ದಾಳೆ. ನನ್ ಮಗಳ ಪ್ರಾಣಕ್ಕೋಸ್ಕರ ನಿಮ್ಮನ್ನು ಸುಮ್ನೆ ಬಿಡ್ತಾ ಇದ್ದೀನಿ ಅಂತ ಬಹಳ ಕೋಪದಿಂದ ಹೇಳಿ ಹೋಗಿದ್ದಾಳೆ.
ಇನ್ನೊಂದು ಕಡೆ ವಿಜಯಾಂಬಿಕೆ ತನ್ನ ಮಗ ಮದನ್ ಗೆ ತಾನು ಶ್ರೀವಲ್ಲಿಯನ್ನ ಕೆಲಸಕ್ಕೆ ಇಟ್ಕೊಂಡಿದ್ದು ಯಾಕೆ ಅನ್ನೋದನ್ನ ವಿವರಿಸಿ ಹೇಳಿದ್ದಾಳೆ. ಶ್ರೀವಲ್ಲಿ ಮೂಲಕ ಶ್ರಾವಣಿ ಮತ್ತು ವೀರೇಂದ್ರನ್ನ ದೂರ ಮಾಡೋ ಪ್ಲಾನ್ ಅದು ಅಂತ ಮಗನಿಗೆ ವಿವರಿಸಿ ಹೇಳಿದ್ದಾಳೆ. ಮದನ್ ತನ್ನ ಅಮ್ಮನ ಎಲ್ಲಾ ಮಾತುಗಳನ್ನು ಕೇಳಿ ತುಂಬಾ ಖುಷಿಪಟ್ಟಿದ್ದಾನೆ.
Rashmika Mandanna: ಅಲ್ಲು ಅರ್ಜುನ್ VS ವಿಕ್ಕಿ ಕೌಶಲ್, ಸಂಧಿಗ್ಧದಲ್ಲಿ ರಶ್ಮಿಕಾ; ನಟಿಯ ಬೆಂಬಲ ಯಾರಿಗೆ ?