ಈ ವಾರದ ಸಾಧಕನ ಸುಳಿವು ಕೊಟ್ಟ ವಾಹಿನಿ: ವೀಕೆಂಡ್ ಟೆಂಟ್ ಗೆ ಈ ವಾರ ಬರೋ ಅತಿಥಿ ಯಾರು ಗೆಸ್ ಮಾಡಿ!

0 2

Weekend With Ramesh: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ನ ಸೀಸನ್ ಐದು ಭರ್ಜರಿ ಯಶಸ್ಸಿನೊಂದಿಗೆ ಮುಂದೆ ಸಾಗಿದೆ. ಕಳೆದ ವಾರ ವಾರಾಂತ್ಯದ ಎಪಿಸೋಡ್ ಗಳ ನಿರೀಕ್ಷೆಯಲ್ಲಿ ಇದ್ದವರಿಗೆ ನಿರಾಸೆ ಯಾಗಿತ್ತು. ‌ಏಕೆಂದರೆ ಕಳೆದ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಿರಲಿಲ್ಲ. ಇದಲ್ಲದೇ ಕಳೆದ ವಾರ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾಧಕರ ಕುರ್ಚಿಯಲ್ಲಿ ಕೂರಲು ಬರ್ತಿದ್ದಾರೆ ಎನ್ನುವ ಸುದ್ದಿಯಾಯಿತು.

ಎಲ್ಲಾ ಸುದ್ದಿಗಳಲ್ಲಿ ಸಹಾ ಡಿ ಕೆ ಶಿವಕುಮಾರ್ (D K Shiva Kumar) ಅವರು ಬರೋದು ಖಚಿತ, ಮುಂದಿನ ವಾರಾಂತ್ಯದ ಎಪಿಸೋಡ್ ಗಳಲ್ಲಿ ಅವರು ಸಾಧಕರ ಕುರ್ಚಿ ಏರಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಅವೆಲ್ಲವುಗಳ ಬೆನ್ನಲ್ಲೇ ವಾಹಿನಿ ಈ ವಾರಾಂತ್ಯಕ್ಕೆ ಬರಲಿರುವ ಸಾಧಕ ಯಾರೆನ್ನುವ ಸುಳಿವನ್ನು ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡ (Zee Kannada) ವಾಹಿನಿಯು ಫೋಟೋ ಶೇರ್ ಮಾಡಿ ಗೆಸ್ ಮಾಡಿ ಎಂದಿದೆ. ಇದನ್ನೂ ಓದಿ: ರಕ್ಷಿತ್-ರಶ್ಮಿಕಾ ಬ್ರೇಕಪ್ ಗೆ ಅಸಲಿ ಕಾರಣ ಏನ್ ಗೊತ್ತಾ? ಬಹಿರಂಗಪಡಿಸಿದ ತಾಯಿ!

ವಾಹಿನಿ ಹಂಚಿಕೊಂಡ ಫೋಟೋ ನೋಡಿದ ಕೂಡಲೇ ನೆಟ್ಟಿಗರು ಫೋಟೋದಲ್ಲಿ ಇರುವುದು ಯಾರು ಎನ್ನುವುದನ್ನು ಗುರುತಿಸಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ಮಾಡಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಂದು ಸರಿಯಾದ ಉತ್ತರಗಳನ್ನು ನೀಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರ ಅಭಿಮಾನಿಗಳು ಕಾಮೆಂಟ್ ಗಳಲ್ಲಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.

ರಾಜಕಾರಣಿ ಆಗಿರುವ ಕಾರಣದಿಂದಾಗಿ ಸಹಜವಾಗಿಯೇ ಅವರನ್ನು ಮೆಚ್ಚದವರು ಕಾಮೆಂಟ್ ಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿರುವುದು ಕೂಡಾ ಕಂಡು ಬಂದಿದೆ. ಒಟ್ಟಾರೆ ವಾಹಿನಿ ಈ ವಾರಾಂತ್ಯಕ್ಕೆ ಡಿ ಕೆ ಶಿವಕುಮಾರ್ ಅವರು ವೀಕೆಂಡ್ ಟೆಂಟ್ ಗೆ ಬರುವುದನ್ನು, ಸಾಧಕರ ಕುರ್ಚಿಯಲ್ಲಿ ಕೂರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದೆ ಎಂದೇ ಹೇಳಬಹುದಾಗಿದೆ.

Leave A Reply

Your email address will not be published.