Platform ticket: ದೂರದ ಪ್ರಯಾಣಕ್ಕಾಗಿ ಸಾಮಾನ್ಯವಾಗಿ ಎಲ್ಲರೂ ರೈಲಿನಲ್ಲಿ ಪ್ರಯಾಣ ನಡೆಸುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ನಡೆಸುವುದರಿಂದ ದಂಡ ಪಾವತಿಸುವುದರ ಜೊತೆಗೆ ಹೆಚ್ಚಿನ ಶಿಕ್ಷೆಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಸಾಮಾನ್ಯವಾಗಿ ದೂರದ ಪ್ರಯಾಣಕ್ಕಾಗಿ ಜನರು ಮುಂಚಿತವಾಗಿಯೇ ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸುತ್ತಾರೆ.
ಕೆಲವೊಮ್ಮೆ ಅಚಾನಕ್ಕಾಗಿ ಪ್ರಯಾಣ ನಡೆಸಬೇಕು ಎನ್ನುವ ವೇಳೆ ಕೆಲವರು ತತ್ಕಾಲ್ ನಲ್ಲಿ ಟಿಕೆಟ್ ಗಳನ್ನು ಪಡೆಯುತ್ತಾರೆ. ಇನ್ನು ಇಂದು ನಾವು ನಿಮಗೆ ನೀವು ಪ್ಲಾಟ್ ಫಾರ್ಮ್ ಟಿಕೆಟ್ ಪಡೆದು ಸಹ ಪ್ರಯಾಣ ನಡೆಸಬಹುದು ಎಂದು ಹೇಳಿದರೆ ನಂಬುತ್ತೀರಾ? ಹೌದು, ನೀವು ಪ್ಲಾಟ್ ಪಾರ್ಮ್ ಟಿಕೆಟ್ ಪಡೆದು ಸಹ ಪ್ರಯಾಣ ನಡೆಸಬಹುದು. ಈ ಬಗ್ಗೆ ರೈಲ್ವೆ ನಿಯಮಗಳು ಏನು ಹೇಳುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ….
ರೈಲ್ವೆ ನಿಯಮಗಳ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಪ್ಲಾಟ್ ಪಾರ್ಮ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣ ನಡೆಸಬಹುದು. ಇನ್ನು ರೈಲು ಹತ್ತಿದ ತಕ್ಷಣ ಅವರು ರೈಲ್ವೆ TTE ಬಳಿ ಹೋಗಿ, ವಿಷಯ ತಿಳಿಸಿ, ತಾವು ಪ್ರಯಾಣ ನಡೆಸುವ ಸ್ಥಳಕ್ಕೆ ಟಿಕೆಟ್ ಅನ್ನು ಪಡೆಯಬೇಕಾಗುತ್ತದೆ. ಇನ್ನು TTE ನಿಮಗೆ 250 ದಂಡ ವಿಧಿಸಿ, ಜೊತೆಗೆ ಪ್ರಯಾಣದ ದರವನ್ನು ವಿಧಿಸುತ್ತಾರೆ. ನೀವು ಈ ಮೊತ್ತವನ್ನು ಪಾವತಿಸಿ, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣ ನಡೆಸಬಹುದು.
ಪ್ಲಾಟ್ ಫಾರ್ಮ್ ಟಿಕೆಟ್ ಪಡೆದರೆ ನೀವು ರೈಲು ಹತ್ತಿದ ನಂತರ ನೀವು ಯಾವ ಸ್ಟೇಷನ್ ನಿಂದ ಟಿಕೆಟ್ ಪಡೆದಿರುತ್ತೀರೋ ಅದನ್ನು ನಿರ್ಗಮನದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಹಾಗೂ ನೀವು ಯಾವ ಕ್ಲಾಸ್ ನಲ್ಲಿ ಪ್ರಯಾಣ ನಡೆಸಲು ಬಯಸುತ್ತೀರೋ ಅದರ ದರವನ್ನು ನೀವು ಪಾವತಿಸಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಬಳಿ ಪ್ಲಾಟ್ ಫಾರ್ಮ್ ಟಿಕೆಟ್ ಇದ್ದು, ನೀವು ಅಚಾನಕ್ಕಾಗಿ ಪ್ರಯಾಣ ನಡೆಸುವ ಸಮಯ ಬಂದರೆ ನೀವು ಯಾವುದೇ ಯೋಚನೆ ಮಾಡದೆ ರೈಲನ್ನು ಹತ್ತಿ, TTE ಬಳಿ ನೀವು ಟಿಕೆಟ್ ಪಡೆದು ಪ್ರಯಾಣ ನಡೆಸಬಹುದಾಗಿದೆ.