Big Boss: ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಏಕೆ ವಿಶೇಷ ಸವಲತ್ತು? ಎಲ್ಲರಿಗಿಂತ ಇವರೇನು ಸ್ಪೆಷಲ್ಲಾ? ಯಾಕೀ ತಾರತಮ್ಯ

Written by Soma Shekar

Published on:

---Join Our Channel---

Big Boss Kannada : ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 (Big Boss Kannada) ಆರಂಭವಾದಾಗ ಒಂದು ಹೊಸ ಕಾನ್ಸೆಪ್ಟ್ ಅನ್ನ ಶೋ ನಲ್ಲಿ ಪರಿಚಯಿಸಲಾಯಿತು. ಅದೇನೆಂದರೆ ಜನರ ಓಟಿನ ಮೂಲಕ ಸ್ಪರ್ಧಿಗಳ ಆಯ್ಕೆ. 80% ಮತ್ತು ಅದಕ್ಕಿಂತ ಮೇಲೆ ಓಟು ಪಡೆದವರು ಸಮರ್ಥರಾಗಿ ಮತ್ತು ಅದಕ್ಕಿಂತ ಕಡಿಮೆ ಪಡೆದವರನ್ನು ಅಸಮರ್ಥರನ್ನಾಗಿ ಮತ್ತು 40% ಗಿಂತ ಕಡಿಮೆ ಬಂದವರನ್ನು ನೇರವಾಗಿ ವೇದಿಕೆಯಿಂದಲೇ ಹೊರಗೆ ಕಳಿಸಲಾಯಿತು.

ಈ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಪ್ರಶ್ನೆ ಏನೆಂದರೆ ಈ ನಿಯಮ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯನ್ನು ಪ್ರವೇಶಿಸುವ ಸ್ಪರ್ಧಿಗಳಿಗೆ ಅನ್ವಯ ಆಗುವುದಿಲ್ಲವೇ ಎನ್ನುವುದಾಗಿದೆ. ಏಕೆಂದರೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ನೀಡಿದ ಅವಿನಾಶ್ ಶೆಟ್ಟಿ (Avinash Shetty) ಮತ್ತು ಪವಿ ಪೂವಪ್ಪ (Pavi Poovappa) ಇಬ್ಬರೂ ನೇರವಾಗಿ ಮನೆಯನ್ನ ಪ್ರವೇಶ ಮಾಡಿದ್ದಾಗಿದೆ.

ಓಟು ಕಡಿಮೆ ಬಂತು ಎನ್ನುವ ಕಾರಣಕ್ಕೆ ಆರಂಭದಲ್ಲಿ ಇಬ್ಬರು ಅವಕಾಶ ಸಿಗದೇ ನಿರಾಶರಾಗಿ ಬಿಗ್ ಬಾಸ್ ಆಟಕ್ಕೆ ಎಂಟ್ರಿಯಲ್ಲೇ ಎಕ್ಸಿಟ್ ಆದ್ರು. ಆದ್ರೆ ಈಗ ವೈಲ್ಡ್ ಕಾರ್ಡ್ ಮೂಲಕ ಬಂದವರಿಗೆ ಯಾವುದೇ ರೀತಿಯ ಅಡೆ ತಡೆ ಇಲ್ಲದೇ ನೇರವಾಗಿ ಮನೆಯೊಳಕ್ಕೆ ಎಂಟ್ರಿ ಸಿಕ್ಕಿದೆ ಎನ್ನುವುದು ನಿಜವಾಗಿದೆ‌.

ಮನೆಯಲ್ಲಿ ಐವತ್ತು ದಿನಗಳನ್ನ ಕಳೆದವರು, ಎಲಿಮಿನೇಟ್ ಆಗಿ ಶೋ ನಿಂದ ಹೊರಗೆ ಬಂದವರು ಎಲ್ಲರೂ ಸಹಾ ಓಟು ಪಡೆದು ಮನೆಯೊಳಗೆ ಹೋಗುವ ಅರ್ಹತೆ ಪಡೆದರು, ಕಡಿಮೆ ಓಟು ಪಡೆದವರು ಅಸಮರ್ಥರಾಗಿ ಒಳಗೆ ಹೋದರು. ಆದರೆ ವೈಲ್ಡ್ ಕಾರ್ಡ್ ಗೆ ಮಾತ್ರ ಯಾಕೆ ವಿಶೇಷ ಸವಲತ್ತು ಎನ್ನುವುದು ಈಗ ಅನೇಕರ ಪ್ರಶ್ನೆಯಾಗಿದೆ. ‌

Leave a Comment