Darshan: ನಟ ದರ್ಶನ್ ವಿಮಾನದಲ್ಲಿ ಹೊರಟಿದ್ದೇಲ್ಲಿಗೆ ?!

Written by Mahima Bhat

Published on:

---Join Our Channel---

Darshan: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರೆಕೊಟ್ಟಿದ್ದ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಸಾಥ್ ಕೊಟ್ಟಿತ್ತು. ಚಿತ್ರರಂಗದ ಕಲಾವಿದರು ನಡೆಸಿದ ಕಾವೇರಿ ಪ್ರತಿಭಟನೆಯಲ್ಲಿ ನಟ ದರ್ಶನ್ ಸಹ ಭಾಗಿ ಆಗಿದ್ದರು. ಬೆಳಗ್ಗೆ ಕಾವೇರಿ ಹೋರಾಟದ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದ ದರ್ಶನ್, ಸಂಜೆ ವಿಮಾನ ಏರಿದ್ದಾರೆ. 

ವಿಮಾನದಲ್ಲಿ ‘ಕಾಟೇರ’ ಚಿತ್ರದ ನಾಯಕಿ ಆರಾಧನಾ ಹಾಗೂ ತಾಯಿ ಹಿರಿಯ ನಟಿ ಮಾಲಾಶ್ರೀ ಜೊತೆ ದರ್ಶನ್ ಕ್ಲಿಕ್ಕಿಸಿಕೊಂಡ ಫೋಟೊ ವೈರಲ್ ಆಗ್ತಿದೆ. ‘ಕಾಟೇರ’ ಸಿನಿಮಾ ಸಾಂಗ್‌ ಶೂಟಿಂಗ್‌ಗಾಗಿ ಚಿತ್ರತಂಡ ಪ್ರಯಾಣ ಮಾಡಿದ್ದಾರೆ.  ಹಾಡುಗಳು ಹೊರತು ಪಡಿಸಿ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣಕ್ಕಾಗಿ ಹೋಗಿದ್ದಾರೆ ಎನ್ನಲಾಗಿದೆ.

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ಪೀರಿಯಡ್ ಆಕ್ಷನ್ ಎಂಟರ್‌ಟೈನರ್ ‘ಕಾಟೇರ’ ಅಭಿಮಾನಿಗಳು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿವೀಲ್ ಆಗಿ ಗಮನ ಸೆಳೆದಿದೆ.

Leave a Comment