Jailer Movie:ಜೈಲರ್​ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ ವಿನಾಯಕನ್ ಪಡೆದ ಸಂಭಾವನೆ ಎಷ್ಟು ? ಸತ್ಯ ಬಿಚ್ಚಿಟ್ಟ ವರ್ಮನ್

0 465

Jailer Movie:‘ಜೈಲರ್​’ (Jailer Movie) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ವಿನಾಯಕನ್ ಅವರು ವಿಲನ್ ಆಗಿ ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಖಡಕ್ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಪಡೆದ ಸಂಭಾವನೆ ಬಗ್ಗೆ ಈ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಜೈಲರ್​ ಸಿನಿಮಾಗಾಗಿ ವಿನಾಯಕನ್​ ಅವರಿಗೆ 35 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರ ಅಭಿನಯಕ್ಕೆ ಈ ಹಣ ತುಂಬಾ ಕಡಿಮೆಯಾಗಿದೆ. ಸಾಕಷ್ಟು ವರದಿಗಳು ವೈರಲ್​ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿನಾಯಕನ್​, ವರದಿಗಳನ್ನು ಅಲ್ಲಗೆಳೆದಿದ್ದಾರೆ.

35 ಲಕ್ಷ ರೂ. ಪಡೆದಿದ್ದೇನೆ ಎಂಬ ವದಂತಿ ತಪ್ಪು. ಅದಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ನನಗೆ ಮೂರು ಪಟ್ಟು ಹೆಚ್ಚು ಸಂಬಳ ನೀಡಲಾಗಿದೆ. ನಾನು ಕೇಳಿದ್ದಷ್ಟು ಹಣವನ್ನು ನಿರ್ಮಾಪಕರು ನಿಖರವಾಗಿ ಕೊಟ್ಟರು. ಸೆಟ್‌ಗಳಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಅವರು ಬಹಿರಂಗಪಡಿಸಿದರು.

Leave A Reply

Your email address will not be published.