Dhruva Sarja Son:ತಂದೆಯಾದ ಧ್ರುವ ಸರ್ಜಾ ಹೇಳಿದ್ದೇನು ? ಮೊದಲು ಚಿರುಗೆ ಕಾಲ್ ಮಾಡಿದ್ದರಂತೆ !
Dhruva Sarja Son:ಧ್ರುವ ಸರ್ಜಾ ಅವರು ಮತ್ತೊಮ್ಮೆ ತಂದೆಯಾಗಿದ್ದು, ಈ ಬಾರಿ ಗಂಡು ಮಗು ಜನಿಸಿದೆ. ಮಾಧ್ಯಮದ ಜೊತೆ ಅವರು ಈ ಖುಷಿಯನ್ನು ಹಂಚಿಕೊಳ್ಳುವುದರ ಜೊತೆಗೆ, ಸಹೋದರ ಚಿರಂಜೀವಿ ಸರ್ಜಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ.
Dhruva Sarja ಹಬ್ಬದ ದಿನವೇ ಹೊಸ ಅತಿಥಿಯ ಆಗಮನ, ಎರಡನೇ ಮಗುವಿನ…
‘ನಾನು ಪ್ರತಿ ಕ್ಷಣ ಅಣ್ಣನನ್ನು ಮಿಸ್ ಮಾಡಿಕೊಳ್ತೀನಿ’ ಎನ್ನುವ ಚಿರಂಜೀವಿ ಅವರು ಮಗ ಹುಟ್ಟಿದ ಬಳಿಕ ಮೊದಲು ಫೋನ್‌ನಲ್ಲಿ ಚಿರು ಅಂತ ಡಯಲ್ ಮಾಡಿದ್ದರಂತೆ. “ನನಗೆ ಈಗ ಮೂವರು ಮಕ್ಕಳು. ರಾಯನ್ ಯಾವತ್ತಿದ್ರೂ ನನ್ನ ಮಗನೇ. ಮಗಳಿದ್ದಾಳೆ, ಮಗ ಹುಟ್ಟಿದ್ದಾನೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ನಾರ್ಮಲ್ ಡೆಲಿವರಿ ಆಗಿರೋದರಿಂದ ಕಿರುಚಾಟ ಎಲ್ಲ ಇರೋದಿಕ್ಕೆ ಸ್ವಲ್ಪ ಭಯ ಆಗಿತ್ತು ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.
Dhruva Sarja Son “ನಾನು ಮಗುಗಿಂತ ಮೊದಲು ಮಗುವಿನ ತಾಯಿಯನ್ನು ನೋಡುತ್ತಿದ್ದೆ. ತಾಯಿ ಆರೋಗ್ಯವಾಗಿದ್ದಾಳಾ ಅಂತ ನೋಡುತ್ತಿದ್ದೆ. ಡಾಕ್ಟರ್ ನನಗೆ ಮಗು ನೋಡಿ ಅಂತ ಬೈದಮೇಲೆ ಮಗು ನೋಡಿದೆ. ಮಗ ನನಗಿಂತ ಬೆಳ್ಳಗಿದ್ದಾನಲ್ಲಾ ಅಂತ ಅನಿಸ್ತು. ಮೊದಲು ಅರ್ಜುನ್ ಸರ್ಜಾಗೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸಿದೆ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.