ವೀಕೆಂಡ್ ವಿತ್ ರಮೇಶ್ ಗೆ ಬರಲು ಪ್ರಭುದೇವ ಪಡೆದ ಸಂಭಾವನೆ ಇಷ್ಟೊಂದಾ? ಶಾಕಿಂಗ್ ಮೊತ್ತ ಪಡೆದ ನಟ!

Entertainment Featured-Articles Movies News
36 Views

Weekend with Ramesh: ವೀಕೆಂಡ್ ವಿತ್ ರಮೇಶ್, ಕನ್ನಡದ ಜನಪ್ರಿಯ ಕಿರುತೆರೆಯ ಕಾರ್ಯಕ್ರಮವಾಗಿದೆ. ಸ್ಯಾಂಡಲ್ವುಡ್ ನ ಹಿರಿಯ, ಜನಪ್ರಿಯ ಹಾಗೂ ಪ್ರತಿಭಾವಂತ ನಟ ರಮೇಶ್ ಅರವಿಂದ್ (Ramesh Arvind) ಅವರು ನಿರೂಪಣೆ ಮಾಡುವ ಈ ಕಾರ್ಯಕ್ರಮಕ್ಕೆ ಅದರದ್ದೇ ಆದ ಗತ್ತು, ಜನಪ್ರಿಯತೆ ಇದ್ದು, ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರ ಬಳಗವನ್ನು ಹೊಂದಿದೆ. ಆದ್ದರಿಂದಲೇ ಹೊಸ ಸೀಸನ್ ಬರುತ್ತಿದೆ ಎಂದಾಗಲೇ ಪ್ರೇಕ್ಷಕರು ಮೊದಲ‌‌ ಸಂಚಿಕೆಗಾಗಿ ಕಾಯುತ್ತಿದ್ದರು. ಕಳೆದ ಶನಿ, ಭಾನುವಾರಗಳಂದು ಸೀಸನ್ ಐದರ ಮೊದಲ ಎರಡು ಸಂಚಿಕೆಗಳು ಪ್ರಸಾರ ಕಂಡು ಸದ್ದು ಮಾಡುವುದರ ಜೊತೆಗೆ ಭರ್ಜರಿ ಟ್ರೋಲ್ ಕೂಡಾ ಆಗಿದ್ದು ಈಗ ಎಲ್ಲರಿಗೂ ತಿಳಿದೇ ಇದೆ.

ಮೊದಲ ಸಾಧಕಿಯಾಗಿ ನಟಿ ರಮ್ಯಾ (Ramya) ಆಗಮಿಸಿದ ಬೆನ್ನಲ್ಲೇ ಇದೀಗ ಎರಡನೇ ವಾರದಲ್ಲಿ ಸಾಧಕರ ಕುರ್ಚಿಯಲ್ಲಿ ಕೂರಲು ಬರುತ್ತಿದ್ದಾರೆ‌ ಭಾರತೀಯ ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದಿರುವ ನಟ, ನಿರ್ದೇಶಕ ಮತ್ತು ನೃತ್ಯ ನಿರ್ದೇಶಕ ಸಹಾ ಆಗಿರುವ ಪ್ರಭುದೇವ ಅವರು. ನಟ ಪ್ರಭುದೇವ (Prabhudeva) ಅವರ ಮೂಲವನ್ನು ತಿಳಿಯುವುದಾದರೆ ಇವರು ಕರ್ನಾಟಕದದವರೇ ಎನ್ನುವುದು ಅಚ್ಚರಿಯ ವಿಷಯವಾಗಿದೆ. ಮತ್ತೊಂದು ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ಅವರು ಕನ್ನಡ ಟಾಕ್ ಶೋ ಒಂದರ ಭಾಗವಾಗಲು ಹೊರಟಿದ್ದಾರೆ.

ಏಪ್ರಿಲ್ ಒಂದು, ಎರಡರ ಸಂಚಿಕೆಗಳಲ್ಲಿ ನಟ ಪ್ರಭುದೇವ ಅವರು ತಮ್ಮ ಜೀವನ ಮತ್ತು ಸಾಧನೆಗಳ ಕುರಿತಾಗಿ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದು, ಅಭಿಮಾನಿಗಳು ವಾರಾಂತ್ಯಕ್ಕಾಗಿ ಕಾಯುತ್ತಿರುವಾಗಲೇ ಈಗ ಹೊಸ ಸುದ್ದಿಯೊಂದು ಮಾದ್ಯಮಗಳಲ್ಲಿ ಸದ್ದು ಮಾಡಿದೆ. ಹೌದು, ವೀಕೆಂಡ್ ವಿತ್ ರಮೇಶ್ ನಲ್ಲಿ ಸಾಧಕರ ಕುರ್ಚಿಯಲ್ಲಿ ಕೂರಲು ಅತಿಥಿಯಾಗಿ ಆಗಮಿಸುತ್ತಿರುವ ಪ್ರಭುದೇವ ಅವರು ಅದಕ್ಕಾಗಿ ಪಡೆಯುತ್ತಿರುವ ಭಾರೀ ಮೊತ್ತದ ಸಂಭಾವನೆಯ ವಿಚಾರ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಹಾಗಾದರೆ ನಟ ಪ್ರಭುದೇವ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಡೆಯುತ್ತಿರುವ ಸಂಭಾವನೆ (Prabhudeva remuneration) ಎಷ್ಟು ಎನ್ನುವ ಪ್ರಶ್ನೆ ಈಗ ನಿಮ್ಮಲ್ಲೂ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ವರದಿಗಳು ಹಾಗೂ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ನಟ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ ನಲ್ಲಿ ಭಾಗಿಯಾಗುವುದಕ್ಕೆ ಬರೋಬ್ಬರಿ 25 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ಖಂಡಿತವಾಗಿಯೂ ದೊಡ್ಡ ಮೊತ್ತದ ಸಂಭಾವನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *