ನೋವಿನ ಆ ಭಾವನಾತ್ಮಕ ಕ್ಷಣದಲ್ಲಿ ಜೊತೆಯಾಗಿದ್ದು ಪ್ರಭುದೇವ: ಪ್ರಕಾಶ್ ರಾಜ್ ಹೇಳಿದ ಮನ ಮಿಡಿಯುವ ಮಾತು

Written by Soma Shekar

Published on:

---Join Our Channel---

Weekend With Ramesh season 5 : ವೀಕೆಂಡ್ ವಿತ್ ರಮೇಶ್ ಶೋ ನ ಎರಡನೇ ವಾರದ ಮೊದಲ ಸಂಚಿಕೆ ಖಂಡಿತ ಜನರ ಮೆಚ್ಚುಗೆಯನ್ನು ಪಡೆದಿದೆ. ಕಳೆದ ವಾರ ರಮ್ಯಾ (Ramya) ಅವರ ಇಂಗ್ಲೀಷ್ ಭಾಷಾ ಜ್ಞಾನವನ್ನು ನೋಡಿ ಟ್ರೋಲ್ ಮಾಡಿದ್ದ ನೆಟ್ಟಿಗರು ಈಗ ನಿನ್ನೆಯ ಎಪಿಸೋಡ್ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಈ ವಾರ ವೀಕೆಂಡ್ ಟೆಂಟ್ ನಲ್ಲಿ ಅತಿಥಿಯಾಗಿ ಆಗಮಿಸಿರುವ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಮತ್ತು ಅವರ ಕುಟುಂಬದವರು ಕನ್ನಡದಲ್ಲೇ ಮಾತನಾಡುತ್ತಿರುವುದು ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸಿನ ಮೇಲೆ ಮೋಡಿಯನ್ನು ಮಾಡಿದೆ.

ವೀಕೆಂಡ್ ವಿತ್ ರಮೇಶ್ ನಲ್ಲಿ ಪ್ರಭುದೇವ ಅವರ ನಿರೂಪಕ ರಮೇಶ್ ಅರವಿಂದ್ (Ramesh Arvind) ಅವರ ಜೊತೆಗೆ ತಮ್ಮ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೈಸೂರು ಮೂಲದವರಾದ ಪ್ರಭುದೇವ ಅವರು ಇಂದು ಬಾಲಿವುಡ್ ನಿಂದ ಹಿಡಿದು, ದಕ್ಷಿಣ ಸಿನಿಮಾ ರಂಗದವರೆಗೂ ನಟನಾಗಿ, ನಿರ್ದೇಶಕನಾಗಿ, ಕೊರಿಯೊಗ್ರಾಫರ್ ಆಗಿ ದೊಡ್ಡ ಹೆಸರನ್ನು ಮಾಡಿರುವ ಪ್ರಭುದೇವ ಅವರು, ಸಾಕಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದ್ಮಶ್ರೀ ಪಡೆದಿರುವ ಇವರು ಎರಡು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹದಿನೈದು ಸಿನಿಮಾ ನಿರ್ದೇಶಿಸಿ, 61 ಸಿನಿಮಾಗಳಲ್ಲಿ ನಟಿಸಿ, ಮೂರು ಸಿನಿಮಾ ನಿರ್ಮಾಣ ಮಾಡಿರುವ ಇವರು ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿ, ಎತ್ತರದ ಸ್ಥಾನವನ್ನು ಪಡೆದಿರುವ ನಟ ಪ್ರಭುದೇವ ಅವರದ್ದು ಸ್ನೇಹಿತರ ಕಷ್ಟ ಕಂಡಾಗ ಮಿಡಿಯುವ ಮನಸ್ಸಿನ ವ್ಯಕ್ತಿ ಎನ್ನುವುದನ್ನು ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಅನುಭವದ ಮಾತಿನಿಂದ ಎಲ್ಲ ರೊಡನೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: IPL ಉದ್ಘಾಟನೆಯಲ್ಲಿ ಎಲ್ಲರ ಮನಸ್ಸಿಗೆ ಲಗ್ಗೆ ಇಟ್ಟ ರಶ್ಮಿಕಾ, ತನ್ನ ಡ್ಯಾನ್ಸ್ ಗಾಗಿ ಪಡೆದ ಸಂಭಾವನೆ ಎಷ್ಟು?

ಇದೇ ವೇಳೆ ದಕ್ಷಿಣ ಸಿನಿಮಾ ರಂಗದ ಹಿರಿಯ ನಟ, ಬಹುಭಾಷಾ ನಟನಾಗಿ ಹೆಸರನ್ನು ಪಡೆದಿರುವ ಪ್ರಕಾಶ್ ರಾಜ್ (Prakash Raj) ಅವರು ಪ್ರಭುದೇವ ಕುರಿತಾಗಿ ಮಾತನಾಡಿದ್ದಾರೆ. ಪ್ರಕಾಶ್ ರಾಜ್ ಅವರು ವೀಡಿಯೋ ಸಂದೇಶವೊಂದನ್ನು ನೀಡುತ್ತಾ, ಪ್ರಭುದೇವ (Prabhudeva) ಅವರ ಜನ್ಮದಿನಕ್ಕೆ ಹಾಗೂ ಅವರ ಸಿನಿಮಾ ಪಯಣಕ್ಕೆ ಶುಭವನ್ನು ಹಾರೈಸಿದ್ದಾರೆ.. ಅದೇ ವೇಳೆ ಪ್ರಭುದೇವ ಹೇಗೆ ತಾನು ಭಾವನಾತ್ಮಕವಾಗಿ ನೋವಿನಲ್ಲಿರುವಾಗ ಸಂತೈಸಿದ್ದರು ಎನ್ನುವ ವಿಚಾರ ತಿಳಿಸಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ಸಿದ್ಧು ಹೆಸರಿನ ಒಬ್ಬ ಮುದ್ದಾದ ಮಗನಿದ್ದ. ಆದರೆ ಆರೋಗ್ಯ ಸಮಸ್ಯೆಯ ಕಾರಣದಿಂದ 2004 ರಲ್ಲಿ ಪ್ರಕಾಶ್ ರಾಜ್ ಅವರ ಐದು ವರ್ಷ ವಯಸ್ಸಿನ ಮಗ ಇಹಲೋಕವನ್ನು ತ್ಯಜಿಸಿದ.ಆಗ ಮಗನ ಅಗಲಿಕೆಯ ನೋವಿನಲ್ಲಿ ಇದ್ದ ಪ್ರಕಾಶ್ ರಾಜ್ (Prakash Raj) ಅವರಿಗೆ ಪ್ರಭುದೇವ ಅವರು ಧೈರ್ಯ ಹೇಳಿ, ಸಾಂತ್ವನ ನೀಡಿದ್ದ ವಿಚಾರವನ್ನು ಪ್ರಕಾಶ್ ರಾಜ್ ಅವರು ಸ್ಮರಿಸಿಕೊಂಡಿದ್ದಾರೆ. ಪ್ರಭುದೇವ ಅವರ ಗುಣ ಎಂತದ್ದು ಎನ್ನುವುದನ್ನು ಎಲ್ಲರಿಗೂ ತಿಳಿಸಿದ್ದಾರೆ.‌

Leave a Comment