Udayanidhi Stalin ಸನಾತನವನ್ನು ತೊಡೆದು ಹಾಕಬೇಕು! ಮತ್ತೆ ಸನಾತನ ಧರ್ಮದ ಬಗ್ಗೆ ನಾಲಗೆ ಹರಿಬಿಟ್ಟ ಉದಯನಿಧಿ ಸ್ಟಾಲಿನ್
Udayanidhi Stalin : ಕೆಲವೇ ದಿನಗಳ ಹಿಂದೆಯಷ್ಟೇ ಸನಾತನ ಧರ್ಮವನ್ನು (Sanantana Dharma) ಮಲೇರಿಯಾ, ಡೆಂಗ್ಯೂ ಗೆ ಹೋಲಿಕೆ ಮಾಡಿ ಅದನ್ನು ನಿರ್ಮೂಲನೆ ಮಾಡಬೇಕೆಂಬ ಹೇಳಿಕೆಯನ್ನು ನೀಡಿ ದೇಶದಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದ್ದ ತಮಿಳು ನಾಡು ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ (Udayanidhi Stalin) ಆ ವಿಷಯ ಮಾಸುವ ಮೊದಲೇ ಈಗ ಮತ್ತೊಮ್ಮೆ ನಾಲಗೆ ಹರಿಬಿಟ್ಟು ಸನಾತನ ಧರ್ಮದ ಬಗ್ಗೆ ಹೊಸ ಹೇಳಿಕೆಯನ್ನು ನೀಡಿದ್ದಾರೆ.
ಹುಟ್ಟಿನಿಂದ ಎಲ್ಲರೂ ಸಮಾನರು, ಈ ನಿಟ್ಟಿನಲ್ಲಿ ನಾವು ಸನಾತನ ಧರ್ಮವನ್ನು ತೊಡೆದು ಹಾಕುವ ಅಗತ್ಯವಿದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ (Tamilnadu) ಇಂದಿಗೂ ಜಾತಿ ಹಾಗೂ ಸಾಮಾಜಿಕ ತಾರತಮ್ಯ ಜನರನ್ನು ಕಾಡುತ್ತಿದೆ ಎಂದು ಉದಯನಿಧಿ ಹೇಳಿದ್ದಾರೆ.
ಈ ರೀತಿಯ ಜಾತಿ (Caste) ಹಾಗೂ ಸಾಮಾಜಿಕ ತಾರತಮ್ಯವನ್ನು (Social discrimination) ತೊಡೆದುಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸವನ್ನು ಮಾಡಬೇಕಾಗಿದೆ ಎಂದು ರಾಜ್ಯಪಾಲ ಆರ್.ಎನ್. ರವಿ ಹೇಳಿಕೆಗೆ ಉದಯನಿಧಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರಾದ ಎನ್. ರವಿ ಹೇಳಿಕೆಗೆ ಉದಯನಿಧಿ ಪ್ರತಿಕ್ರಿಯೆ ನೀಡುತ್ತಾ,ಅವರು ಹೇಳುವುದನ್ನೇ ನಾವು ಹೇಳುತ್ತಿದ್ದೇವೆ.
ನಾವು ಸನಾತನ ಧರ್ಮವನ್ನು ತೊಡೆದು ಹಾಕಬೇಕಾಗಿದೆ. ಎಲ್ಲರೂ ಹುಟ್ಟಿನಿಂದ ಸಮಾನರಾಗಿರುವುದರಿಂದ ನಾವೆಲ್ಲರೂ ಈ ಜಾತಿ ತಾರತಮ್ಯದ ವಿರುದ್ಧ ನಮ್ಮ ಧ್ವನಿಯನ್ನು ಎತ್ತುತ್ತಿದ್ದೇವೆ ಎಂದು ರಾಜ್ಯಪಾಲ ಆರ್.ಎನ್. ರವಿ ಹೇಳಿಕೆಗೆ ಪ್ರತಿಕ್ರಿಯೆಯನ್ನು ನೀಡಿದ್ದು,ತಾನು ಸನಾತನದ ಬಗ್ಗೆ ಈ ಹಿಂದೆ ಹೇಳಿದ ಮಾತಿಗೆ ಬದ್ಧನಾಗಿದ್ದೇನೆ ಎಂದು ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ.