Viral Video: ಬಿಸಿಲಿನ ಬೇಗೆ, ಬಳಲಿ ಬಾಯಾರಿದ ಕೋತಿಗೆ ನೀರುಣಿಸಿ ಮಾನವೀಯತೆ ಮೆರೆದ ಪೋಲಿಸ್ ಪೇದೆ

Written by Soma Shekar

Published on:

---Join Our Channel---

ಬೇಸಿಗೆಕಾಲ ಬಂದೊಡನೆ ಉಷ್ಣಾಂಶ ಏರಿಕೆಯೊಂದಿಗೆ, ಎಲ್ಲೆಲ್ಲೂ ತಾಪಮಾನ ಹೆಚ್ಚಾಗುತ್ತದೆ. ಜನರು ಹಾಗೂ ಪ್ರಾಣಿಗಳು ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗುತ್ತಾರೆಮ ಜೊತೆಯಲ್ಲಿ ಅನೇಕ ಸ್ಥಳಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಮನುಷ್ಯರೂ ಸಹಾ ನೀರಿಗಾಗಿ ಸಂಕಷ್ಟ ಎದುರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನೀರಿರುವ ಜಾಗವನ್ನು ಅರಸುತ್ತಾ ಅಲೆದಾಡುತ್ತದೆ. ಅಲ್ಲದೇ ಪ್ರತಿ ಬೇಸಿಗೆಯಲ್ಲೂ ಅನೇಕ ಪ್ರಾಣಿ ಪಕ್ಷಿಗಳು ಕುಡಿಯುವ ನೀರು ಸಿಗದೆ ಪ್ರಾಣ ಬಿಡುತ್ತಿವೆ ಎನ್ನುವುದು ವಾಸ್ತವದ ವಿಷಯವಾಗಿದೆ.

ಅನೇಕ ಸಂದರ್ಭಗಳಲ್ಲಿ ಪ್ರಾಣಿಗಳು ಬಾಯಾರಿಕೆಯಿಂದ ಕಂಗೆಟ್ಟು ನೀರನ್ನು ಕುಡಿಯಲು ಜನ ವಸತಿ ಪ್ರದೇಶಗಳಿಗೆ ಬರುವುದುಂಟು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳು ಮನುಷ್ಯರ ಬಳಿ ಸಹಾಯವನ್ನು ಪಡೆದು ನೀರನ್ನು ಕುಡಿಯುವಂತಹ ಸಾಕಷ್ಟು ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ನೀರನ್ನು ಅರಸಿ ಬಂದ ಮೂಕ ಜೀವಿಗಳ ಮೇಲೆ ಮಾನವೀಯತೆಯನ್ನು ತೋರುತ್ತಾ ಕೆಲವರು ನೀರನ್ನು ಕೊಡುವುದುಂಟು. ಇಂತಹ ಜನರ ಬಗ್ಗೆ ಮೆಚ್ಚುಗೆಗಳು ಸಹಾ ಹರಿದುಬರುತ್ತದೆ.

ಈಗ ಅಂತಹದೇ ಒಂದು ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಪ್ರಾಣಿ ಪಕ್ಷಿಗಳ ಕುರಿತಾದ ವಿಶೇಷವಾದ ವಿಡಿಯೋಗಳನ್ನು ಹಂಚಿಕೊಳ್ಳುವ ಐಎಪ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಇಂತಹದೊಂದು ಹೊಸ, ಮನ ಮಿಡಿಯುವಂತಹ ವಿಡಿಯೋವನ್ನು ಹಂಚಿಕೊಂಡು, ಅದರ ಶೀರ್ಷಿಕೆಯಲ್ಲಿ ಅವರು, ಮಾನವೀಯತೆಯನ್ನು ಮೆರೆಯುವುದಕ್ಕೆ ಸದಾ ಸಿದ್ಧವಾಗಿರಿ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಖಂಡಿತ ಒಂದು ವಿಶೇಷ ವಿಡಿಯೋ ಆಗಿದೆ.

ವಿಡಿಯೋದಲ್ಲಿನ ದೃಶ್ಯದ ಬಗ್ಗೆ ಹೇಳುವುದಾದರೆ ಬಿಸಿಲಿನ ಬೇಗೆಯಿಂದ ಬಾಯಾರಿದ ಕೋತಿಯೊಂದಕ್ಕೆ ಪೊಲೀಸ್ ಪೇದೆ ಸಂಜಯ್ ಗಡೆ ಎನ್ನುವವರು ಬಾಟಲಿಯ ಮೂಲಕ ನೀರನ್ನು ಕುಡಿಸುತ್ತಿರುವುದು ಕಾಣುತ್ತದೆ. ಕೋತಿ ಸಹಾ ಅವರು ನೀರು ಕುಡಿಸುತ್ತಿದ್ದರೆ, ಬಹಳ ತಾಳ್ಮೆಯಿಂದ ನೀರು ಕುಡಿಯುತ್ತಿರುವುದು ಕಾಣುತ್ತದೆ. ಅಸಹಾಯಕತೆ ಎನ್ನುವುದು ಪ್ರಾಣಿಗಳ ಮೂಲ ಗುಣವನ್ನೇ ಮರೆಮಾಚಿ, ಸಹಾಯ ಪಡೆಯುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಅಲ್ಲದೇ ಸಂಜಯ್ ಕಡೆಯವರು ಮಾನವೀಯತೆ ಮೆರೆದು ಕೋತಿಗೆ ನೀರನ್ನು ಕುಡಿಸುತ್ತಿರುವುದು ಕಂಡು ನೆಟ್ಟಿಗರು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 52 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ನೂರಾರು ಮಂದಿ ಕಾಮೆಂಟುಗಳನ್ನು ಮಾಡುತ್ತಾ, ಪೊಲೀಸ್ ಪೇದೆಯ ಮಾನವೀಯತೆಗೆ ಮೆಚ್ಚುಗೆ ನೀಡಿದ್ದಾರೆ. ಅಲ್ಲದೇ ಅನೇಕರು ಬಾಯಾರಿದ ಪ್ರಾಣಿ-ಪಕ್ಷಿಗಳಿಗೆ ಸಾಧ್ಯವಾದರೆ ನೀರು ಸಿಗುವಂತೆ ಮಾಡಿ ಎಂದು ಹೇಳಿದ್ದಾರೆ.

Leave a Comment