Viral Video: ಯಾವ ಇಂಜಿನಿಯರ್ ಗೂ ಕಮ್ಮಿಯಿಲ್ಲ ಈ ವ್ಯಕ್ತಿಯ ಕ್ರಿಯೇಟಿವಿಟಿ: ಅಚ್ಚರಿ ಪಡ್ತಿದ್ದಾರೆ ನೆಟ್ಟಿಗರು

Entertainment Featured-Articles News Viral Video

ಇಂಟರ್ನೆಟ್ ಬಳಕೆ ಹೆಚ್ಚಿದಂತೆ ಇದೊಂದು ಕ್ರಾಂ ತಿ ರೂಪದಲ್ಲಿ ವಿಶ್ವವನ್ನೆಲ್ಲಾ ವ್ಯಾಪಿಸಿದೆ. ಇದರ ಫಲವಾಗಿಯೇ ಇಂದು ಅನೇಕ ವ್ಯಕ್ತಿಗಳ ಪ್ರತಿಭೆಯು ಜಗತ್ತಿನ ಮುಂದೆ ಬರಲು ಸಾಧ್ಯವಾಗಿದೆ. ಸುಪ್ತ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳು ಪ್ರತಿಭೆಯ ಅನಾವರಣಕ್ಕೊಂದು ಬೃಹತ್ ವೇದಿಕೆಗಳಾಗಿ ಬದಲಾಗಿವೆ. ಅಂತಹ ಪ್ರತಿಭಾವಂತರಲ್ಲಿ ಕೆಲವರು ತಮ್ಮ ಕೈಗೆ ಎಟುಕುವ ಸಣ್ಣ ಸಣ್ಣ ವಸ್ತುಗಳಿಂದಲೇ ಇಂಜಿನಿಯರ್ ಗಳು ಸಹಾ ಅಚ್ಚರಿ ಪಡುವಂತಹ ವಿನೂತನ ವಾಹನಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಈಗ ನೆಟ್ಟಿಗರೊಬ್ಬರು ಸಿದ್ಧಪಡಿಸಿರುವ ಒಂದು ವಾಹನವು ನೆಟ್ಟಿಗರ ಗಮನ ಸೆಳೆದಿದ್ದು, ಈ ವಾಹನದ ವಿನ್ಯಾಸವನ್ನು ನೋಡಿದ ನೆಟ್ಟಿಗರು ಸಹಾ ಅಚ್ಚರಿ ಪಡುತ್ತಾ, ಅದಕ್ಕೆ ಫಿದಾ ಆಗಿದ್ದಾರೆ. ಈ ವ್ಯಕ್ತಿ ತನ್ನ ವಾಹನಕ್ಕೆ ಇಂತಹುದೊಂದು ವಿನ್ಯಾಸ ಹೇಗೆ ನೀಡಿದರು ಎನ್ನುವುದು ತಿಳಿದಿಲ್ಲವಾದರೂ ಆತನ ಬುದ್ಧಿವಂತಿಕೆಗೆ ಮಾತ್ರ ನೆಟ್ಟಿಗರು ಮೆಚ್ಚುಗೆಗಳನ್ನು ಹರಿಸುತ್ತಾ, ಆತನ ಬುದ್ಧಿವಂತಿಕೆಯನ್ನು ಹಾಡಿ ಹೊಗಳಿದ್ದು, ವೀಡಿಯೋ ಸಹಾ ವೈರಲ್ ಆಗಿದೆ.

ವೈರಲ್ ವೀಡಿಯೋ ಪ್ರಕಾರ, ಎಫ್ 1 ರೇಸ್ ನಲ್ಲಿ ಬಳಸುವಂತಹ ಕಾರಿನಂತಹ ವಾಹನದಲ್ಲಿ ವ್ಯಕ್ತಿಯೊಬ್ಬರು ಕಪ್ಪು ಜಾಕೆಟ್ ಧರಿಸಿ, ಹೆಲ್ಮೆಟ್ ಹಾಕಿಕೊಂಡು ಹಾಲಿನ ಪೂರೈಕೆ ಮಾಡುತ್ತಿರುವುದನ್ನು ನೋಡಬಹುದು. ಆತನು ತಾನು ಎಫ್ 1 ಕಾರಿನ ರೇಸರ್ ಆಗಬೇಕೆಂದುಕೊಂಡಿದ್ದನೋ ಅಥವಾ ತನ್ನಲ್ಲಿನ ಪ್ರತಿಭೆಯನ್ನು ಹೊರಗಡೆ ತೆಗೆಯಲು ಬಯಸಿದನೋ ಗೊತ್ತಿಲ್ಲವಾದರೂ ಇಂಜಿನಿಯರ್ ಗಳು ಕೂಡಾ ಅಚ್ಚರಿ ಪಡುವ ಹಾಗೆ ವಿಶೇಷ ವಿನ್ಯಾಸದ ವಾಹನವನ್ನು ಸಿದ್ಧಪಡಿಸಿಕೊಂಡಿದ್ದಾನೆ.

ತನಗೆ ಕೈಗೆ ಎಟುಕವ ವಸ್ತುಗಳಿಂದಲೇ ತನ್ನ ಬುದ್ಧಿಶಕ್ತಿಯನ್ನು ಬಳಸಿಕೊಂಡು, ಈ ವ್ಯಕ್ತಿ ಇಂತಹುದೊಂದು ಹೊಸ ವಿನ್ಯಾಸ‌ದ ವಾಹನವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಪ್ರಸ್ತುತ ಈ ವಾಹನಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು RoadsOfMumbai ಎನ್ನುವ ಹೆಸರಿನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಅಲ್ಲದೇ ಅದಕ್ಕೊಂದು ಆಸಕ್ತಿಕರ ವಾದ ಶೀರ್ಷಿಕೆಯನ್ನು ಸಹಾ ಬರೆಯಲಾಗಿದೆ.

ವೀಡಿಯೋದ‌ ಶೀರ್ಷಿಕೆಯಲ್ಲಿ, “ನೀವು ಫಾರ್ಮುಲಾ ಒನ್ ರೇಸರ್ ಆಗಲು ಬಯಸಿ, ಕುಟುಂಬದ ಒತ್ತಡದಿಂದ ಹಾಲಿನ ವ್ಯಾಪಾರವು ಮಾಡಬೇಕಾಗಿ ಬಂದಾಗ” ಎಂದು ಬರೆಯಲಾಗಿದೆ. ಈಗಾಗಲೇ ಈ ವೀಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ನೆಟ್ಟಿಗರು ವೀಕ್ಷಣೆಯನ್ನು ಮಾಡಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದಾರೆ. ಹಾಗಾದರೆ ಇನ್ನೇಕೆ ತಡ, ನೀವು ಒಂದು ಸಲ ಈ ವೀಡಿಯೋ ವೈರಲ್ ನೋಡಿ, ನಿಮ್ಮ ಅನಿಸಿಕೆ ಶೇರ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *