Viral Video: ನಾಗ್ಪುರದಲ್ಲಿ ‘ಕರಿ ಇಡ್ಲಿ’: ಏನಿದು ಇಡ್ಲಿ ಮೇಲೆ ದೌ ರ್ಜ ನ್ಯ ಎಂದು ನೆಟ್ಟಿಗರ ಅಸಮಾಧಾನ.
ಭಾರತವೊಂದು ವೈವಿದ್ಯಮಯ ಸಂಸ್ಕೃತಿಗಳ ನಾಡಾಗಿದೆ. ನಮ್ಮ ದೇಶದಲ್ಲಿ ಆಹಾರ ಪದ್ಧತಿ ಎನ್ನುವುದು ವೈವಿದ್ಯಮಯವಾಗಿದೆ. ಪ್ರತಿಯೊಂದು ಭಾಗದಲ್ಲಿಯೂ ಸಹಾ ಅಲ್ಲಿನ ಪ್ರಾದೇಶಿಕತೆಗೆ ತಕ್ಕ ಹಾಗೆ ಆಹಾರ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಭಿನ್ನ ವಿಭಿನ್ನವಾದ ಖಾದ್ಯಗಳನ್ನು ತಯಾರು ಮಾಡಲಾಗುತ್ತದೆ. ಇನ್ನು ದಕ್ಷಿಣ ಭಾರತದ ಜನತೆಯ ವಿಷಯಕ್ಕೆ ಬಂದಾಗ, ಇಲ್ಲಿನ ಜನರ ವಿಶೇಷವಾದ ಆಹಾರಗಳಲ್ಲಿ ಇಡ್ಲಿಗೆ ಮಹತ್ವದ ಸ್ಥಾನವನ್ನೇ ನೀಡಲಾಗಿದೆ. ಬೆಳಗಿನ ತಿನಿಸುಗಳಲ್ಲಿ ಇಡ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ.
ಇಡ್ಲಿ ಹೆಸರನ್ನು ಕೇಳಿದ ಕೂಡಲೇ ನಮ್ಮ ಮನಸ್ಸಿನಲ್ಲಿ ಬಿಳಿಯ ಬಣ್ಣದ, ಮಲ್ಲಿಗೆಯಂತೆ ಮೃದುವಾದ ರುಚಿಯಾದ ಇಡ್ಲಿಗಳು ಮೂಡುತ್ತದೆ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಳಿಯ ಬಣ್ಣದ ಇಡ್ಲಿಯ ಬದಲಾಗಿ ಕಪ್ಪುಬಣ್ಣದ ಇಡ್ಲಿ ವಿಡಿಯೋ ಒಂದು ಬಹಳ ವೈರಲ್ ಆಗುತ್ತಿದೆ. ನಾಗ್ಪುರ ಮೂಲದ ಫುಡ್ ಬ್ಲಾಗರ್ ಗಳಾಗಿರುವ ವಿವೇಕ್ ಮತ್ತು ಆಯೇಶಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಶೇಷವಾದ ಕರಿ ಇಡ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ವೀಡಿಯೋ ವೈರಲ್ ಆಗಿದೆ.
ಇನ್ನು ನಾವು ವಿಡಿಯೋ ನೋಡಿದಾಗ ಕಪ್ಪು ಬಣ್ಣದ ಇಡ್ಲಿ ಹಿಟ್ಟಿನಿಂದ ಇಡ್ಲಿ ತಯಾರಿಸಿ ಅದರ ಮೇಲೆ ಖಾರದ ಪುಡಿ ಮತ್ತು ತುಪ್ಪ ಹಾಕಿ, ಕಾಯಿ ಚಟ್ನಿ ಜೊತೆ ಸೇರಿಸಿ ಗ್ರಾಹಕರಿಗೆ ನೀಡುವುದನ್ನು ನೋಡಬಹುದು. ನಾಗ್ಪುರದ ವಾಲ್ಕರ್ಸ್ ರ್ಸ್ಟ್ರೀಟ್ ನಲ್ಲಿ ಈ ಕಪ್ಪು ಇಡ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಫುಡ್ ಬ್ಲಾಗರ್ ಗಳು. ಕಪ್ಪು ಇಡ್ಲಿ ನೋಡಲು ವಿಶೇಷವಾಗಿ ಕಂಡಿದೆ ಹಾಗೂ ನೆಟ್ಟಿಗರ ಗಮನವನ್ನು ತನ್ನ ಕಡೆಗೆ ಸೆಳೆದಿದೆ.
ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆದರೆ ಕಪ್ಪು ಇಡ್ಲಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಕೆಲವರು ಈ ಕಪ್ಪು ಇಡ್ಲಿ ಯನ್ನು ನೋಡಿ ಒಂದು ಕ್ಷಣ ದಂಗಾಗಿದ್ದಾರೆ. ಅಲ್ಲದೇ ಕೆಲವರು ವಿಡಿಯೋ ನೋಡಿದ ಮೇಲೆ ಪ್ರತಿಕ್ರಿಯೆ ನೀಡುತ್ತಾ, ದಯವಿಟ್ಟು ಇಡ್ಲಿಯ ಮೇಲಿನ ದೌರ್ಜನ್ಯ ನಿಲ್ಲಿಸಿ. ಅದು ಬಿಳಿಯ ಬಣ್ಣದಲ್ಲಿ ಇದ್ದರೇನೇ ನೋಡಲು ಚೆಂದ ಎಂದು ಕಾಮೆಂಟ್ ಮಾಡಿ ತಿಳಿಸಿದ್ದಾರೆ. ಇನ್ನೂ ಕೆಲವರು ಇದೇನು ಕರ್ಮ ಎಂದಿದ್ದಾರೆ.