Viral Video: ನಗೋದು ಗ್ಯಾರಂಟಿ, ಚಳಿಯಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಏನ್ಮಾಡಿದ್ದಾನೆ ನೋಡಿ!!

Entertainment Featured-Articles News Viral Video
31 Views

ಎಲ್ಲೆಡೆ ಕೊರೆಯುವ ಚಳಿಗೆ ಜನರು ನಡುಗುವಂತಾಗಿದೆ. ಇಂತಹ ಸಮಯದಲ್ಲಿ ತಣ್ಣೀರಿಗೆ ಕೈ ಹಾಕುವುದು ಎಂದರೆ ಅಬ್ಬಾ!! ಎನಿಸುತ್ತದೆ. ಅಲ್ಲದೇ ಹಾಗೇನಾದರೂ ಕೈ ಇಟ್ಟರೆ ನಾವು ನಡುಗಿ ಹೋಗುತ್ತೇವೆ. ಅದಕ್ಕೆ ಚಳಿಗಾಲದಲ್ಲಿ ಅನೇಕರು ತಣ್ಣೀರಿನ ಸ್ನಾನ ಎಂದರೆ ಅದರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ನೀಡುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ತಣ್ಣೀರಿನ ಸ್ನಾನ ಅನಿವಾರ್ಯವಾದಾಗ ಆಗೋದಿಲ್ಲ ಎನ್ನಲಾಗದೇ ನಡುಗುತ್ತಾ ತಣ್ಣೀರಿನ ಒಳಗೆ ಹೆಜ್ಜೆ ಇಟ್ಟು, ಸ್ನಾನ ಮಾಡಿ ನಡುಗಿ ಹೋಗುತ್ತಾರೆ.

ಇಂತಹುದರಲ್ಲಿ ಕೆಲವರು ತಣ್ಣೀರಿನಿಂದ ಸ್ನಾನ ಮಾಡುವಾಗಲು ಚಳಿಯಿಂದ ಪರಿಹಾರವನ್ನು ಕಂಡುಕೊಳ್ಳಲು ತಮ್ಮದೇ ಬುದ್ಧಿವಂತಿಕೆಯನ್ನು ಉಪಯೋಗಿಸಿ ದೇಸೀ ಐಡಿಯಾಗಳನ್ನು ಬಳಸಿಕೊಳ್ಳುತ್ತಾರೆ. ನಾವಿಂದು ನಮಗೆ ಅಂತಹುದೇ ಒಂದು ಪ್ರಯತ್ನ ಮಾಡಿದ ವ್ಯಕ್ತಿಯೊಬ್ಬರ ವೀಡಿಯೋ ಬಗ್ಗೆ ಹೇಳಲು ಹೊರಟಿದ್ದೇವೆ. ವೈರಲ್ ಆದ ಈ ವೀಡಿಯೋ ನೋಡಿದ ಮೇಲೆ ಜನರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಈ ವೀಡಿಯೋ ನೋಡಿದ್ರೆ ನೀವು ಕೂಡಾ ನಗುವುದು ಖಂಡಿತ.

ವೈರಲ್ ವೀಡಿಯೋದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದಾರೆ. ಅವರ ಮುಂದೆ ಒಂದು ಬಾಣಲೆಯಂತ ವಸ್ತುವಿನಲ್ಲಿ ಒಣಗಿದ ಕಡ್ಡಿಗಳನ್ನು ಹಾಕಿ ಬೆಂಕಿ ಹಾಕಲಾಗಿದ್ದು ಅದು ಉರಿಯುತ್ತಿದೆ. ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಮೇಲೇಳುತ್ತಾ, ಮೇಲೆದ್ದ ಕೂಡಲೇ ಬೆಂಕಿಯ ಕಡೆ ಕೈ ಚಾಚಿ ಬಿಸಿ ಕಾಯಿಸಿಕೊಂಡು ಸ್ನಾನ ಮಾಡುವುದನ್ನು ನೋಡಬಹುದಾಗಿದೆ. ಇನ್ನು ಈ ವೀಡಿಯೋವನ್ನು ಜನರು ನೋಡುತ್ತಾ ಸಾಗಿದ್ದು ಬೇಗ ಬೇಗ ವೈರಲ್ ಆಗುತ್ತಿದೆ.

ಈ ಹಾಸ್ಯಮಯ ವೀಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಶೇರ್ ಮಾಡಿದ ಅವರು ಅದರ ಶೀರ್ಷಿಕೆಯಲ್ಲಿ, “ನಮ್ಮ ಭಾರತ ಮಹಾನ್, ಚುರುಕಾದ ಭಾರತ” ಎಂದು ಬರೆದುಕೊಂಡಿದ್ದಾರೆ. ಇನ್ನು ವೀಡಿಯೋದಲ್ಲಿ ಸಹಾ ಒಂದು ಸಾಲನ್ನು ಬರೆಯಲಾಗಿದ್ದು, ಇಷ್ಟೊಂದು ಬುದ್ಧಿವಂತರು ಭಾರತದಲ್ಲಿ ಮಾತ್ರವೇ ಇರಲು ಸಾಧ್ಯ ಎಂದು ಬರೆಯಲಾಗಿದೆ. ಹದಿನೈದು ಸೆಕೆಂಡ್ ಗಳ ಈ ವೀಡಿಯೋ ಅಸಂಖ್ಯಾತ ಜನರ ಮನಸ್ಸನ್ನು ಗೆದ್ದಿದೆ.

Leave a Reply

Your email address will not be published. Required fields are marked *