Viral video: ತರಗತಿಯಲ್ಲೇ ಶಿಕ್ಷಕನ ಮೇಲೆ ಹಲ್ಲೆ ಮಾಡಲು ಮುಂದಾದ ವಿದ್ಯಾರ್ಥಿಗಳು

Entertainment Featured-Articles News Viral Video

ಶಿಕ್ಷಕರಿಗೆ ನಮ್ಮ ಸಮಾಜದಲ್ಲಿ ಉತ್ತಮವಾದ ಹಾಗೂ ಗೌರವಯುತವಾದ ಸ್ಥಾನ ಮಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸಹಾ ಗುರುಗಳನ್ನು ಬಹಳ ಗೌರವದಿಂದ ಕಾಣುತ್ತಾ ಬಂದಿದ್ದಾರೆ. ಆದರೆ ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ವಿದ್ಯೆ ಕಲಿಸುವ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ತಮ್ಮ ದರ್ಪ ತೋರುವ ಘಟನೆಗಳು ನಡೆಯುವುದು ಸಹಾ ನಡೆಯುತ್ತವೆ. ಪ್ರಸ್ತುತ ಅಂತಹುದೇ ಘಟನೆಯೊಂದು ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದ್ದು, ಇಲ್ಲಿ ತರಗತಿಯಲ್ಲಿ ವಿದ್ಯಾರ್ಥಿಗಳು ಅ ಸ ಭ್ಯವಾಗಿ ವರ್ತಿಸಿ, ಶಿಕ್ಷಕರ ಮೇಲೆ ಹ ಲ್ಲೆ ಗೆ ಯತ್ನಿಸಿದ್ದಾರೆ.

ಈ ಘಟನೆಗೆ ಸಂಬಂಧ ಪಟ್ಟ ಒಂದು ವೀಡಿಯೋ ಇದೀಗ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಇಂತಹುದೊಂದು ವರ್ತನೆಗೆ ವ್ಯಾಪಕವಾದ ಅಸಮಾಧಾನ ಹಾಗೂ ಆ ಕ್ರೋ ಶ ವ್ಯಕ್ತವಾಗಿದೆ. ಮಾದನೂರ್ ಎಂಬ ಗ್ರಾಮದ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ತರಗತಿ ನಡೆಯುವ ವೇಳೆ ಹನ್ನೆರಡನೇ ತರಗತಿಯಲ್ಲಿ ಸಂಜಯ್ ಗಾಂಧಿ ಎನ್ನುವ ಹೆಸರಿನ ಶಿಕ್ಷಕರೊಬ್ಬರು ಬೋಧನೆಯನ್ನು ಮಾಡುವಾಗ ತರಗತಿಯಲ್ಲಿ ವಿದ್ಯಾರ್ಥಿ ನಿದ್ದೆ ಮಾಡುತ್ತಿದ್ದುದ್ದನ್ನು ಗಮನಿಸಿದ್ದಾರೆ.

ಮಾರಿ ಎನ್ನುವ ಹುಡುಗನೊಬ್ಬ ತರಗತಿಯಲ್ಲೇ ನಿದ್ದೆ ಮಾಡುತ್ತಿದ್ದನು ಎನ್ನಲಾಗಿದ್ದು, ಅದನ್ನು ಗಮನಿಸಿದ ಶಿಕ್ಷಕರು ವಿದ್ಯಾರ್ಥಿಯನ್ನು ಪ್ರಶ್ನೆ ಮಾಡಿದ್ದು, ಈ ವೇಳೆ ವಿದ್ಯಾರ್ಥಿ ಮಾರಿ ಹಾಗೂ ಆತನ ಗೆಳೆಯರು ಬಟ್ಟೆಯನ್ನು ಬಿಚ್ಚುತ್ತಾ, ತರಗತಿಯಲ್ಲಿ ಇದ್ದ ಶಿಕ್ಷಕರಿಗೆ ಆವಾಜ್ ಹಾಕಿದ್ದಾರೆ. ಒಬ್ಬ ವಿದ್ಯಾರ್ಥಿ ಶಿಕ್ಷಕರ ಮೇಲೆ ಹಲ್ಲೆ ಮಾಡುವ ಹಾಗೆ ಮುಂದೆ ಹೋಗಿರುವುದು ಸಹಾ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ವೀಡಿಯೋ ವೈರಲ್ ಆದ ಮೇಲೆ ಪೋಲಿಸರು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಹೌದು, ವಿದ್ಯಾರ್ಥಿಗಳ ಇಂತಹುದೊಂದು ವರ್ತನೆಯ ವೀಡಿಯೋ ವೈರಲ್ ಆದ ಮೇಲೆ ಅಂಬೂರು ವಲಯದ ಪೋಲಿಸ್ ಸಿಬ್ಬಂದಿ ಶಾಲೆಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳನ್ನು ಅಮಾನತ್ತು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಆಡಳಿತ ಮಂಡಳಿಯು ಮಾರಿ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *