Viral Video: ಊಟದ ತಟ್ಟೆಗಾಗಿ ಶಿಕ್ಷಕರು, ಪ್ರಾಂಶುಪಾಲರ ಕಿತ್ತಾಟ, ಶಿಸ್ತಿನ ಪಾಠ ಹೇಳುವವರೆ ಶಿಸ್ತು ಮರೆತರಾ??

Written by Soma Shekar

Published on:

---Join Our Channel---

ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಲು, ಗುರಿಯನ್ನು ತಲುಪಲು ಮುಖ್ಯವಾಗಿ ಶಿಸ್ತನ್ನು ಹೊಂದಿರಬೇಕು ಎನ್ನಲಾಗಿದೆ. ಅಲ್ಲದೇ ಶಿಸ್ತು ಅಳವಡಿಸಿಕೊಂಡರೆ ಜೀವನದಲ್ಲಿ ಎಂತಹ ಸಮಸ್ಯೆ ಎದುರಾದರೂ ಸಹಾ ಅದನ್ನು ನಿಭಾಯಿಸುವ ಸಾಮರ್ಥ್ಯ ಮನುಷ್ಯನಲ್ಲಿ ಮೂಡುತ್ತದೆ ಎನ್ನಬಹುದಾಗಿದೆ. ಇಂತಹ ಶಿಸ್ತನ್ನು ಪಾಠ ಮಾಡುವವರು ಶಿಕ್ಷಕರು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸದಾ ಶಿಸ್ತಿನಿಂದ ನಡೆದುಕೊಳ್ಳಬೇಕು ಎನ್ನುವ ವಿಷಯವನ್ನು ಆಗಾಗ ಹೇಳುತ್ತಲೇ ಇರುತ್ತಾರೆ.

ಹೀಗೆ ಶಿಸ್ತಿನ ಪಾಠವನ್ನು ಮಾಡುವ ಶಿಕ್ಷಕರೇ ಶಿಸ್ತಿನ ಪಾಠವನ್ನು ಮರೆತರೇ? ಎನ್ನುವ ಮಾತು ಬಂದಾಗ ಅಚ್ಚರಿ ಆಗುತ್ತದೆ. ಆದರೆ ಇಂತಹುದೊಂದು ಘಟನೆಯು ಪಂಜಾಬ್ ನಲ್ಲಿ ನಡೆದಿದ್ದು, ಈ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆಮ್ ಆದ್ಮಿ ಪಾರ್ಟಿಯ ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರೊಂದಿಗೆ ಒಂದು ಸಭೆಯನ್ನು ನಡೆಸಲಾಗಿತ್ತು. ಆದರೆ ಈ ವೇಳೆ ನಡೆದ ಘಟನೆಯ ದೃಶ್ಯ ವೈರಲ್ ಆಗಿದೆ.

ಈ ಸಭೆಯನ್ನು ಲುಧಿಯಾನಾದ ಒಂದು ಐಶಾರಾಮೀ ರೆಸಾರ್ಟ್ ಒಂದರಲ್ಲಿ ಆಯೋಜನೆ ಮಾಡಲಾಗಿತ್ತು. ಇನ್ನು ಸಭೆ ಮುಗಿದ ನಂತರ ಎಲ್ಲಾ ಶಿಕ್ಷಕರಿಗೆ ಸಹಾ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆಯಲ್ಲಿ ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಶಿಸ್ತಿನಿಂದ ಊಟವನ್ನು ಸ್ವೀಕರಿಸುವ ಬದಲಾಗಿ, ಊಟಕ್ಕಾಗಿ ಕಿತ್ತಾಡಿದ ಘಟನೆ ನಡೆದಿದೆ. ಶಿಕ್ಷಣದ ಗುಣಮಟ್ಟವನ್ನು ಕುರಿತಾಗಿ ಚರ್ಚೆಯನ್ನು ನಡೆಸಲು ಶಿಕ್ಷಣ ಇಲಾಖೆ ಇಂತಹುದೊಂದು ಸಭೆಯನ್ನು ನಡೆಸಿತ್ತು.

ಈ ಸಭೆಗೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 2,600 ಕ್ಕೂ ಹೆಚ್ಚು ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳು ಆಹ್ವಾನಿತರಾಗಿದ್ದರು ಎನ್ನಲಾಗಿದೆ. ಸಭೆಯಲ್ಲಿ ಶೈಕ್ಷಣಿಕ ಸುಧಾರಣೆ ಗಳ ಕುರಿತಾಗಿ ಸಲಹೆಗಳನ್ನು ಚರ್ಚಿಸಲಾಯಿತು. ನಂತರ ಮಧ್ಯಾಹ್ನದ ಊಟಕ್ಕಾಗಿ ಹೋದಂತಹ ಸಂದರ್ಭದಲ್ಲಿ ಊಟದ ಪ್ಲೇಟ್ ಗಾಗಿ ಶಿಕ್ಷಕರ ನಡುವೆ ಗಲಾಟೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment