Viral Photo: ಕಣ್ಣಿಗೆ, ಮೆದುಳಿಗೆ ಪರೀಕ್ಷೆ!! ಈ ಫೋಟೋದಲ್ಲಿ ಹಾವಿದೆ, ಗುರ್ತಿಸಿದರೆ ನೀವೇ ಜೀನಿಯಸ್

Written by Soma Shekar

Published on:

---Join Our Channel---

ಪಜಲ್ಸ್ ಗಳೆಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ?? ನಮ್ಮ‌ ಮೆದುಳಿಗೆ ಕೆಲಸ ನೀಡುವ,‌ ಕಣ್ಣುಗಳಿಗೆ ಪರೀಕ್ಷೆಯನ್ನು ಒಡ್ಡುವ ಈ ಪಜಲ್ಸ್ ಗೆ ನಾವೇನು ಕಮ್ಮಿ ಇಲ್ಲ ಎಂದು ಅದರ‌ ಉತ್ತರವನ್ನು ಕಂಡುಕೊಳ್ಳಲು, ಪರಿಹಾರ ಹುಡುಕುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ. ಹಿಂದೆ ವಾರಾಂತ್ಯದ ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಳು ಬಂದಾಗ ಜನರು ಅವುಗಳಲ್ಲಿರುವ ಪದಬಂಧ ಬಿಡಿಸಲು ಮುಂದಾಗುತ್ತಿದ್ದರು. ಅಂದು ಒಂದು ಹಂತವಾದರೆ ಫೋಟೋ ಪಜಲ್ ಗಳದ್ದು ತಮ್ಮದೇ ಆದ ಇನ್ನೊಂದು ವಿಶೇಷತೆ. ಫೋಟೋ ಪಜಲ್ ಗಳು ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸುತ್ತಿತ್ತು.

ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಫೋಟೋ ಪಜಲ್ಸ್ ಗಳದ್ದೇ ದೊಡ್ಡ ಸದ್ದು. ಇವು ನೆಟ್ಟಿಗರ ಗಮನವನ್ನು ಬಹಳ ಬೇಗ ಸೆಳೆಯುತ್ತದೆ. ಈ ಫೋಟೋ ಪಜಲ್ ಗಳು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಗಿರಕಿ ಹೊಡೆಯುತ್ತವೆ, ಇವುಗಳನ್ನು ಪರಿಹರಿಸಲು ನಮ್ಮ‌ ಕಣ್ಣು ಬಹಳ ಚುರಕಾಗಿ ಇರಬೇಕು ಮಾತ್ರವೇ ಅಲ್ಲದೇ ಮೆದುಳು ಕೂಡಾ ಬಹಳ ಚುರುಕಾಗಿರಬೇಕು. ಕೆಲವರು ಥಟ್ ಎಂದು ಫೋಟೋ ಪಜಲ್ ನಲ್ಲಿ ಅಡಗಿರುವುದನ್ನು ಗುರುತಿಸಿದರೆ, ಇನ್ನೂ ಕೆಲವರಿಗೆ ಬಹಳ ಸಮಯ ಹಿಡಿಯುವುದು ಉಂಟು.

ಮತ್ತೆ ಕೆಲವರು ತಾಳ್ಮೆ ಇಲ್ಲದವರು ಇಲ್ಲೇನೂ ಎಲ್ಲ ಎಂದು ಬಿಡುತ್ತಾರೆ. ಈಗ ಅಂತಹ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋದಲ್ಲಿ ಒಂದು ಹಾವು ಇದೆ. ಆದರೆ ಅದು ಕೂಡಲೇ ಕಣ್ಣಿಗೆ ಕಾಣುವುದಿಲ್ಲ. ನೋಡುವುದಕ್ಕೆ ದಟ್ಟವಾಗಿ ಬೆಳೆದಿರುವ ಗಿಡಗಳು ತುಂಬಿರುವ ಒಂದು ತೋಟ ಕಾಣಿಸುತ್ತದೆ. ಪಕ್ಕದಲ್ಲೇ ಒಂದು ಸ್ವಿಮ್ಮಿಂಗ್ ಪೂಲ್ ಕೂಡಾ ಇದ್ದು, ಅಲ್ಲೇ ಒಂದು ವಿಷಪೂರಿತ ಹಾವು ಕೂಡಾ ಅಡಗಿದ್ದು, ಅದು ಯಾರ ಕಣ್ಣಿಗೂ ಒಂದೇ ನೋಟದಲ್ಲಿ ಕಾಣುವುದಿಲ್ಲ.

ವೈರಲ್ ಆದ ಮೇಲೆ ಈ ಫೋಟೋ ನೋಡಿದ ನೆಟ್ಟಿಗರು ಹಾವು ಎಲ್ಲಿದೆ ಎಂದು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ನೂರಕ್ಕೆ 95 ಮಂದಿ ಈ ಫೋಟೋ ಪಜಲ್ ಗೆ ಪರಿಹಾರವನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ನೀವು ಕೂಡಾ ಒಂದು ಸಲ ಟ್ರೈ ಮಾಡಬಹುದು. ಒಂದು ವೇಳೆ ಹಾವು ಕಂಡರೆ ನಿಮ್ಮ ಕಣ್ಣು ಮತ್ತು ಮೆದುಳು ಎರಡು ಚುರುಕಾಗಿದೆ ಎಂದು ಅರ್ಥ ಮಾಡಿಕ್ಕೊಳ್ಳಿ. ಒಂದು ಪ್ರಯತ್ನ ನೀವೂ ಸಹಾ ಮಾಡಿ. ‌

Leave a Comment