Viral Photo:ಈ ಫೋಟೋದಲ್ಲಿ ಚಿರತೆಯಿದೆ!ಮೆದುಳಿಗೆ,ಕಣ್ಣಿಗೆ ಟೆಸ್ಟ್! ಚಿರತೆ ಕಂಡ್ರೆ‌ ನೀವೇ ಜೀನಿಯಸ್

0 2

ಫೋಟೋ ಪಜಲ್ಸ್ ಇವುಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಏಕೆಂದರೆ ಸೋಶಿಯಲ್ ಮೀಡಿಯಾಗಳಲ್ಲಿ ಇವುಗಳ ಸದ್ದು ಬಲು ಜೋರಾಗಿಯೇ ಇದೆ. ಈ ಫೋಟೋ ಪಜಲ್ ಗಳು ನಮ್ಮ ಮೆದುಳಿಗೆ ಕೆಲಸವನ್ನು ನೀಡುತ್ತದೆ, ನಮ್ಮ ಕಣ್ಣಿಗೆ ಒಂದು ಪರೀಕ್ಷೆಯನ್ನು ಒಡ್ಡುತ್ತದೆ ಹಾಗೂ ನಮ್ಮ ಬುದ್ಧಿಮತ್ತೆಯನ್ನು ಸಾಣೆ ಹಿಡಿಯುವ ಕೆಲಸವನ್ನು ಮಾಡುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಪಜಲ್ಸ್ ಗೆ ಸಂಬಂಧಪಟ್ಟ ಅನೇಕ ಪೇಜ್ ಗಳು ಈಗಾಗಲೇ ಜನಪ್ರಿಯತೆ ಪಡೆದುಕೊಂಡಿವೆ.

ನಾವು ಕೂಡಾ ಫೋಟೋ ಪಜಲ್ ನೋಡಿದಾಗ ಅದರಲ್ಲಿ ಅಡಗಿರುವ ರಹಸ್ಯವಾದರೂ ಏನು?? ಎನ್ನುವುದನ್ನು ತಿಳಿಯಲು ನಮ್ಮ ಕೆಲಸಗಳನ್ನು ಬದಿಗಿಟ್ಟು, ನಾವೇನೂ ಕಡಿಮೆಯಿಲ್ಲ ಎಂದು ಪಜಲ್ ಸಾಲ್ವ್ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ. ಈಗ ಅಂತಹುದೇ ಒಂದು ಫೋಟೋ ಪಜಲ್ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಗಮನ ಸೆಳೆಯುತ್ತಿದ್ದು, ಆ ಫೋಟೋದಲ್ಲಿ ಏನಿದೆ ಎಂದು ಕಂಡು ಹಿಡಿಯುವುದಕ್ಕೆ ನೆಟ್ಟಿಗರು ನೂರು ವಿಧದಲ್ಲಿ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಹೌದು ವೈರಲ್ ಆಗಿರುವ ಫೋಟೋದಲ್ಲಿ ಒಂದು ಚಿರತೆ ಅಡಗಿದ್ದು ಅದು ಎಲ್ಲಿದೆ ಎಂದು ಗುರುತಿಸುವುದು ಅನೇಕರಿಗೆ ಸವಾಲಾಗಿದೆ. ಕೆಲವರು ಚಿರತೆಯನ್ನು ಗುರುತಿಸುವಲ್ಲಿ ಸಫಲರಾದರೆ, ಇನ್ನೂ ಕೆಲವರು ಅಲ್ಲಿ ಚಿರತೆಯೇ ಇಲ್ಲ ಎಂದು ಕೂಡಾ ವಾದ ಮಾಡುತ್ತಿದ್ದಾರೆ. ಅಲ್ಲದೇ ಚಿರತೆ ಎಲ್ಲಿದೆ ಎಂದು ಬಹಳ ಸೂಕ್ಷ್ಮವಾಗಿ ಹುಡುಕುವವರ ಸಂಖ್ಯೆ ಏನೂ ಕಡಿಮೆಯಿಲ್ಲ ಎಂದೇ ಹೇಳಬಹುದು. ಫೋಟೋದಲ್ಲಿ ಅಡಗಿರುವ ಚಿರತೆ ಎಲ್ಲಿದೆ ನೀವು ಹುಡುಕಿ ನೋಡಿ.

ಫೋಟೋ ನೋಡಿದಾಗ ಒಂದು ಹಕ್ಕಿ ಕಾಣುತ್ತದೆ. ಅದರ ಹಿಂಭಾಗದಲ್ಲೊಂದು ಜಿಂಕೆಯ ಕಳೇಬರವು ಇರುವಂತೆ ಕಾಣುತ್ತದೆ‌. ಹಾಗೆ ಅಲ್ಲೇ ಕಲ್ಲುಗಳ ಹಿಂದೆ ಹಕ್ಕಿಯನ್ನು ಬೇಟೆಯಾಡಲು ಕಾದು ಕುಳಿತ ಚಿರತೆಯೊಂದು ಇದೆ. ಕಲ್ಲಿನ ಬಣ್ಣದಲ್ಲೇ ಚಿರತೆ ಕೂಡಾ ಕಳೆದು ಹೋಗಿರುವುದರಿಂದ ಚಿರತೆ ಯನ್ನು ಗುರುತಿಸುವುದು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಸ್ವಲ್ಪ ಎಚ್ಚರಿಕೆಯಿಂದ ನೋಡಿದರೆ ತಟ್ಟನೆ ಕಾಣುತ್ತದೆ. ಇನ್ನೇಕೆ ತಡ ನೀವು ಪ್ರಯತ್ನಿಸಿ, ಬುದ್ಧಿಗೆ, ಕಣ್ಣಿಗೆ ಕೆಲಸ ನೀಡಿ.

Leave A Reply

Your email address will not be published.