Viral Photo:ಈ ಫೋಟೋದಲ್ಲಿ ಹಾವಿದೆ!ಕಣ್ಣಿಗೆ, ಬುದ್ಧಿಗೆ ಟೆಸ್ಟ್, ಹಾವು ಕಂಡರೆ ನೀವು ಜೀನಿಯಸ್!!

Entertainment Featured-Articles News
39 Views

ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ನ ಬಳಕೆ ಬಹಳ ಹೆಚ್ಚಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು ಟನ್ನುಗಳಷ್ಟು ಮನರಂಜನೆಯು ಸಿಕ್ಕಿದಂತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವೈರಲ್ ವೀಡಿಯೋಗಳು, ಫನ್ನಿ ಫೋಟೋಗಳು, ಪಜಲ್ಸ್ ಹೀಗೆ ತಮಗೆ ಬೇಕಾದಂತಹ ಮನರಂಜನೆಯ ವಿಷಯಗಳು ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಇನ್ನು ಕಂಟೆಂಟ್ ಕ್ರಿಯೇಟಿರ್ಸ್ ಕೂಡಾ ತಮ್ಮ ಬುದ್ಧಿವಂತಿಕೆ ಬಳಸಿ ನೆಟ್ಟಿಗರನ್ನು ನಗಿಸುವ, ಅವರಿಗೆ ಅಚ್ಚರಿ ಮೂಡಿಸುವ ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.

ಇಂತಹ ಮನರಂಜನೆಯ ಸಾಲಿಗೆ ಸೇರಿದ್ದು ಫೋಟೋ ಪಜಲ್ಸ್ . ವಾರಾಂತ್ಯದಲ್ಲಿ ಬರುವ ಸಮಾಚಾರ ಪತ್ರಿಕೆಗಳ ವಿಶೇಷ ಪ್ರತಿಗಳಲ್ಲಿ, ಕೆಲವು ಮ್ಯಾಗಜೀನ್ ಗಳಲ್ಲೂ ಕೂಡಾ ಇಂತಹ ವೈವಿದ್ಯಮಯ ಪಜಲ್ ಗಳನ್ನು ನೀಡಲಾಗಿರುತ್ತದೆ. ಇದನ್ನು ನೋಡಿ ಅನೇಕರು ಅವುಗಳ ಉತ್ತರವನ್ನು ಹುಡುಕಲು ಪ್ರಯತ್ನ ಮಾಡುತ್ತಾರೆ. ಇನ್ನು ಪೋಟೋ ಪಜಲ್ ಗಳಾದರೆ ಅವುಗಳದ್ದು ಇನ್ನೊಂದು ಲೆವೆಲ್. ಫೋಟೋಗಳಲ್ಲಿ ಅಡಗಿರುವ ವಿಷಯ ಕಂಡುಹಿಡಿಯುವ ವಿಷಯ ಬಂದಾಗ ಜನರು ಕೂಡಾ ನಾವೇನು ಕಡಿಮೆಯಿಲ್ಲ ಎನ್ನುವ ಹಾಗೆ ಉತ್ತರಕ್ಕಾಗಿ ಹುಡುಕಾಟ ನಡೆಸುವರು.

ಈಗ ಅಂತದ್ದೇ ಒಂದು ಫೋಟೋ ಭರ್ಜರಿ ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಮರದ ತೊಗಟೆಯನ್ನು ನೋಡಬಹುದು, ಅದರ ಮೇಲೆ ಸಂಪೂರ್ಣವಾಗಿ ಅಣಬೆಗಳು ಬೆಳದಿರುವಂತೆ ಹಾಗೂ ಎಲೆಗಳು ಬಿದ್ದಿರುವ ಹಾಗೆ ಕಾಣುತ್ತದೆ. ಆದರೆ ಅದರ ಮೇಲೆ ಒಂದು ಹಾವು ಕೂಡಾ ಇದೆ. ಆದರೆ ಆ ಹಾವು ಎಲ್ಲಿದೆ ಎನ್ನುವುದನ್ನು ಫೋಟೋ ನೋಡಿದ ಕೂಡಲೇ ಖಂಡಿತ ಗುರ್ತಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಏಕೆಂದರೆ ಆ ಫೋಟೋ ಅಷ್ಟು ಪ್ರಶ್ನಾರ್ಥಕವಾಗಿ ಮೂಡಿ ಬಂದಿದೆ.

ಫೋಟೋದಲ್ಲಿರುವ ಹಾವನ್ನು ಕಂಡು ಹಿಡಿಯುವ ಈ ಪ್ರಯತ್ನವು ನಿಮ್ಮ ಮೆದುಳಿಗೆ ಒಂದು ಕೆಲಸ ನೀಡಿದರೆ, ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಎನ್ನುವುದು ಕೂಡಾ ನಿಮಗೆ ತಿಳಿಯುತ್ತದೆ. ಈಗಾಗಲೇ ನೂರಾರು ಮಂದಿ ಹಾವನ್ನು ಹುಡುಕುವ ಪ್ರಯತ್ನವನ್ನು ಮಾಡಿ ಸೋತಿದ್ದಾರೆ. ಇನ್ನೂ ಕೆಲವರು ಅದನ್ನು ಗುರುತಿಸಿ ಉತ್ತರವನ್ನು ಗುರುತಿಸಿ ತಮ್ಮ ಖುಷಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *