viral photo:ಈ ಫೋಟೋದಲ್ಲಿ ಚಿರತೆ ಇದೆ, ಹುಡುಕಿ ನೋಡೋಣ: ನಿಮಗೆ ಕಂಡರೆ ನೀವು ಖಂಡಿತ ಗ್ರೇಟ್

Entertainment Featured-Articles News
77 Views

ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಕಂಟೆಂಟ್ ಗಳಿಗೆ ಖಂಡಿತ ಕೊರತೆಯಿಲ್ಲ. ಫನ್ ಗಾಗಿ ನಿಮಗೆ ಬೇಕಾದಷ್ಟು ಹೂರಣವು ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ದೊರೆಯುತ್ತದೆ. ವೈರಲ್ ಫೋಟೋಗಳು, ಫನ್ನಿ ವೀಡಿಯೋಗಳು, ಅದೇ ರೀತಿಯಲ್ಲಿ ಚಾಲೆಂಜ್ ಗಳನ್ನು ಸ್ವೀಕರಿಸುವವರಿಗಾಗಿ ಒಗಟುಗಳು, ಫೋಟೋ ಪಜಲ್ ಗಳು ಹೀಗೆ ನಾನಾ ವಿಧವಾದ ಸ್ಟಫ್ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಇಂತಹ ಒಗಟುಗಳನ್ನು ಬಿಡಿಸುವುದು ನಿಜಕ್ಕೂ ಕೂಡಾ ಒಂದು ಬಹಳ ಆಕರ್ಷಕವಾದ ವಿಚಾರವಾಗಿದೆ ಹಾಗೂ ಉತ್ತಮವಾದ ಟೈಮ್ ಪಾಸ್ ಆಗಿರುತ್ತದೆ.

ನ್ಯೂಸ್ ಪೇಪರ್ ಗಳಲ್ಲಿ ವಾರಾಂತ್ಯದಲ್ಲಿ ಬರುವ ವಿಶೇಷ ರಸಪ್ರಶ್ನೆಗಳು, ಸುಡೊಕು ಆಟಗಳಂತಹವು ಒಂದು ಕಡೆಯಾದರೆ, ಫೋಟೋ ಒಗಟುಗಳು ಅಥವಾ ಫೋಟೋ ನೋಡಿ ಉತ್ತರಿಸುವ, ಅದರಲ್ಲಿ ಅಡಗಿರುವ ರಹಸ್ಯವನ್ನು ಕಂಡುಹಿಡಿಯುವ ಸವಾಲುಗಳನ್ನು ಇನ್ನೊಂದು ಕಡೆ ಇದ್ದು, ಇವು ಬಹುತೇಕ ಎಲ್ಲರಿಗೂ ಕೂಡಾ ಮೆಚ್ಚುಗೆಯಾಗುವಂತಹ ಒಂದು ಆಟವಾಗಿರುತ್ತದೆ. ತಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸಿಕೊಳ್ಳಲು ಇದು ಒಂದು ಅವಕಾಶವನ್ನು ನೀಡುತ್ತದೆ.

ಫೋಟೋ ಪಜಲ್ಸ್ ನಮ್ಮ‌ ಮೆದುಳಿಗೆ ಕೆಲಸವನ್ನು ನೀಡುವುದು ಮಾತ್ರವೇ ಅಲ್ಲದೇ ನಮ್ಮ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವಾಗಿದೆ ಎಂಬುದಕ್ಕೂ ಸಹಾ ಒಂದು ಸವಾಲಾಗಿದೆ. ಪ್ರಸ್ತುತ ಅಂತಹುದ್ದೇ ಒಂದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ಫೋಟೋದಲ್ಲಿ ಒಂದು ಚಿರತೆ ಅಡಗಿದೆ. ಅದು ಫೋಟೋದಲ್ಲಿ ಎಲ್ಲಿದೆ ಎಂದು ಹುಡುಕುವುದು ಸದ್ಯದ ಟಾಸ್ಕ್ ಎನ್ನುವಂತಾಗಿದೆ. ನೆಟ್ಟಿಗರು ಚಿರತೆಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕೆಲವರು ಈ ಫೋಟೋ ಪಜಲ್ ಅನ್ನು ಬಗೆಹರಿಸಿ ಚಿರತೆ ಎಲ್ಲಿದೆ ಎಂಬುದನ್ನು ತೋರಿಸಿದ್ದಾರೆ. ಇನ್ನೂ ಕೆಲವರು ಚಿರತೆ ಎಲ್ಲಿದೆ ಎಂದು ಹುಡುಕುವುದರಲ್ಲಿ ವಿಫಲರಾಗಿದ್ದಾರೆ. ಈ ಫೋಟೋದಲ್ಲಿ ಯಾವುದೇ ರೀತಿಯ ಫೋಟೋ ಶಾಪ್ ತಂತ್ರವನ್ನು ಬಳಸಿಲ್ಲ ಎನ್ನುವುದು ವಾಸ್ತವ. ಕ್ಯಾಮೆರಾ ಮ್ಯಾನ್ ನ ಕೈ ಚಳಕ ಹಾಗೂ ಆತನ ಪ್ರತಿಭೆಗೆ ಈ ಫೋಟೋ ಸಾಕ್ಷಿಯಾಗಿದೆ. ಇನ್ನೇಕೆ ತಡ ನೀವೂ ಕೂಡಾ ಈ ಫೋಟೋದಲ್ಲಿ ಚಿರತೆ ಎಲ್ಲಿದೆ?? ಎನ್ನುವುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿ ನೋಡಿ.

Leave a Reply

Your email address will not be published. Required fields are marked *