Big Boss: ವೈಲ್ಡ್ ಕಾರ್ಡ್ ಅವಿನಾಶ್ ನ ಕಾಮಿಡಿ ಪಂಚ್ ಗಳು ಹಾಕಿ ರುಬ್ಬಿದ ವಿನಯ್ ಮತ್ತು ತುಕಾಲಿ

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ (Wildcard Entry) ಆದಾಗ ಅದ್ದೂರಿ, ಅಬ್ಬರದ ಎಂಟ್ರಿ ನೋಡಿ ಇಬ್ಬರು ಸ್ಪರ್ಧಿಗಳು ಮನೆಯಲ್ಲಿ ಬಿರುಗಾಳಿ ಎಬ್ಬಿಸಿ ಬಿಡ್ತಾರಾ ಅನ್ನೋ ನಿರೀಕ್ಷೆಯಲ್ಲಿದ್ದರು ವೀಕ್ಷಕರು. ಆದರೆ ಇಬ್ಬರೂ ಕೂಡಾ ಮನೆಗೆ ಎಂಟ್ರಿ ಕೊಟ್ಟ ನಂತರ ಗುಂಪಿನಲ್ಲಿ ಎಲ್ಲೋ ಕಳೆದು ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ಸಹಾ ವೀಕೆಂಡ್ ಎಪಿಸೋಡ್ ನಲ್ಲಿ ಇಬ್ಬರ ಬಗ್ಗೆ ಭರ್ಜರಿ ಕಾಮಿಡಿ ಮಾಡಿದ್ದು ಸಹಾ ವಾಸ್ತವ.

ಇನ್ನು ಈಗ ಮನೆಯಲ್ಕಿ ವೈಲ್ಡ್ ಕಾರ್ಡ್ ಆಗಿರೋ ಅವಿನಾಶ್ ನ (Avinash Shetty) ಮನೆ ಮಂದಿ ಆಟ ಆಡಿಸಿದ್ದಾರೆ. ಆಡಿಕೊಂಡು ಎಂಜಾಯ್ ಮಾಡಿದ್ದಾರೆ. ಹೌದು, ಬೆಡ್ ರೂಮಿನಲ್ಲಿ ಮನೆ ಮಂದಿ ಒಂದಷ್ಟು ಜನ ಕುಳಿತಿರುವಾಗ ತುಕಾಲಿ, ವಿನಯ್ ಇಬ್ಬರೂ ಸಹಾ ಅವಿನಾಶ್ ಬಗ್ಗೆ ಕಾಮಿಡಿ ಪಂಚ್ ಗಳನ್ನು ಹಾಕಿದ್ದಾರೆ.‌

ಇದನ್ನೂ ಓದಿ: Big Boss: ಮತ್ತೆ ದುಶ್ಮನ್ ಗಳಾದ ಸಂಗೀತಾ ವಿನಯ್; ಕಿಚ್ಚನ ಮುಂದೆಯೇ ನಡೀತು ಮಾತಿನ ಕಾಳಗ

ತುಕಾಲಿ (Tukali Santosh) ಮಾತಾಡ್ಕೊಂಡು, ಆನೆ ಬಗ್ಗೆ ಏನು ಅನ್ಸುತ್ತೆ ಅಂತ ಕೇಳಿದ್ದು, ಅವಿನಾಶ್ ವೀಕೆಂಡ್ ನಲ್ಲಿ ಹೇಳ್ತೀನಿ ಅಂದಾಗ ಹಾಗಾದ್ರೆ ನೀವು ಆನೆನ ಪಳಗಿಸೋದು ನಾವು ಶನಿವಾರ ನೋಡಬೇಕಾ ಅಂತ ಪಂಚ್ ಹೊಡೆದಿದ್ದಾರೆ. ಈ ವೇಳೆ ವಿನಯ್ (Vinay Gowda) ಆನೆ ಅಲ್ಲ, ಭಾನುವಾರ ನೈಟ್ ಡೈರಕ್ಟ್ ನಾಮಿನೇಷನ್ಸ್ ಇರುತ್ತಲ್ವ, ಅದನ್ನ ಮುಖಕ್ಕೆ ಹೊಡೆದಾಗ ಹೇಳ್ತಾರೆ.

ಆಗ ಒಬ್ರ ಎಕ್ಸ್ ಪ್ರೆಶನ್ ಹೇಗೆ ಇರುತ್ತೆ ಅಂದ್ರೆ ಬ್ಯಾಗ್ ಎತ್ಕೊಂಡು ಅವಿನಾಶ್ ಮನೆಯಿಂದ ಹೊರಗೆ ಹೋಗೋಕೆ ಮೈನ್ ಡೋರ್ ಹತ್ರ ಹೋಗಿ, ಮಂಗಳೂರು ಬಸ್ ಗೆ ಟೈಮ್ ಆಗ್ತಿದೆ ಕಳಿಸಿ ಅಂತ ಬಿಗ್ ಬಾಸ್ ನ ರಿಕ್ವೆಸ್ಟ್ ಮಾಡ್ಕೊಳ್ತಾರೆ ಅಂತ ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಅವಿನಾಶ್ ನಾನು ಅಲ್ಲಿಂದಾನೇ ಬಂದಿದ್ದು ಅಂತ ಗೊತ್ತಿಲ್ವಾ ಅಂತಾರೆ.‌

ಆಗ ತುಕಾಲಿ ಓ, ನಿಮ್ಮನ್ನ ಯಾರೂ ನಾಮಿನೇಷನ್ ಮಾಡಲ್ಲ ಅನ್ಕೊಂಡಿದ್ದೀರಾ, ನೀನೊಂತರ ಗ್ರೇಸ್ ಬಾಲ್ ಇದ್ದಂಗೆ ಎಲ್ರೂ ಒಂದೊಂದು ಶಾಟ್ ಹಾಕಿ ಹೋಗ್ತಾರೆ ಎಂದಿದ್ದು ತುಕಾಲಿ ಮಾತಿಗೆ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ಟಾರೆ ಅವಿನಾಶ್ ಮಾತ್ರ ಮನೆ ಮಂದಿಗೆ ಕಾಮಿಡಿ ಪೀಸ್ ತರ ಆಗೋಗಿದ್ದಾರೆ.‌

Leave a Comment