Big Boss: ಸೂಪರ್ ಸಂಡೇನಲ್ಲಿ ತನೀಷಾ, ವರ್ತರ್ ಹಾಗೂ ಡ್ರೋನ್ ಬಗ್ಗೆ ಭವಿಷ್ಯ ನುಡಿದ ತುಕಾಲಿ ಸಂತು

Written by Soma Shekar

Published on:

---Join Our Channel---

Big Boss Kannada 10: ಬಿಗ್ ಬಾಸ್ ಮನೆಯಲ್ಲಿ (Big Boss Kannada 10) ಸೂಪರ್ ಸಂಡೇ ಬಂತು ಅಂದ್ರೆ ಒಂದಷ್ಟು ಜನರಿಗೆ ಎಲಿಮಿನೇಟ್ ಆಗೋದು ಯಾರು ಅನ್ನೋ ಟೆನ್ಷನ್ ಇರುತ್ತೆ. ಆದರೆ ಇದ್ರ ನಡುವೆ ಮನೆಯವರ ಒತ್ತಡವನ್ನು ಕಡಿಮೇ ಮಾಡೋ ಹಾಗೆ ಕಿಚ್ಚ ಸುದೀಪ್ (Kichcha Sudeep) ಅವರು ಮನೆ ಮಂದಿಯಲ್ಲಿ ಕೆಲವರ ಕಾಲೆಳೆದು ಒಂದಷ್ಟು ತಮಾಷೆ ಮಾಡಿ ಮನೆಯ ವಾತಾವರಣದಲ್ಲಿ ನಗೆ ಹೊನಲು ಹರಿಯುವ ಹಾಗೆ ಮಾಡ್ತಾರೆ.

ಈ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಲ್ಲಿ ತುಕಾಲಿ (Tukali Santosh) ಬ್ರಹ್ಮಾಂಡ ಗುರೂಜಿ ಅವರ ಸ್ಟೈಲ್ ನಲ್ಲಿ ಮಾತನಾಡಿ ಅವರನ್ನ ಇಮಿಟೇಟ್ ಮಾಡಿ ಎಲ್ಲರಿಗೂ ಖುಷಿ ನೀಡಿದ್ದಾರೆ.‌ ತುಕಾಲಿ ಮನೇಲಿ ಆಗಾಗ ಬ್ರಹ್ಮಾಂಡ ಗುರೂಜಿ ಅವರ ಮಿಮಿಕ್ರಿ ಮಾಡ್ತಿದ್ರು. ಅದನ್ನೇ ಈಗ ಕಿಚ್ಚ ವೀಕೆಂಡ್ ನಲ್ಲಿ ತುಕಾಲಿ ಅವ್ರಿಂದ ಮಾಡ್ಸಿದ್ದಾರೆ.

ಇದನ್ನೂ ಓದಿ : Silk Smitha: ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್; ಹೀರೋಯಿನ್ ಯಾರು ಗೊತ್ತಾ?

ತುಕಾಲಿ ಬ್ರಹ್ಮಾಂಡ ಗುರೂಜಿ ತರ ಮಾತಾಡ್ತಾ ಪ್ರತಾಪ್ ಗೆ (Drone Prathap) ಮಗು ತರ ಇರಬೇಡ್ವೋ ಎಲ್ಲರೂ ಬಂದು ಹಾಲು ಕುಡಿಸಿ ಹೋಗ್ತಾರೆ ಅಂತ ಕಾಮಿಡಿ ಮಾಡಿದ್ದಾರೆ. ಬೆಂಕಿ ತನೀಷಾ ಮತ್ತು ವರ್ತೂರು ಸಂತೋಷ್ ವಿಚಾರ ಅಂತೂ ಸಿಕ್ಕಾಪಟ್ಟೆ ತಮಾಷೆಗೆ ಗುರಿಯಾಗಿದೆ‌. ಕಿಚ್ಚ ಸುದೀಪ್ ಅವರು ಸಹಾ ಈ ವಿಚಾರವನ್ನ ಮಾತನಾಡಿದ್ದಾರೆ.

ಕಿಚ್ಚ ಬೆಂಕಿ ಮನೆಯಲ್ಲಿ ಇಲ್ದೇ ಪಾಪ ವರ್ತೂರಿಗೆ ಬೆಂಕಿಯಲ್ಲಿ ಬೆಂದ ಹಾಗಿತ್ತು ಅಂತೆಲ್ಲಾ ಹೇಳಿದ್ದಾರೆ.‌ ವರ್ತರೂ ಅದಕ್ಕೆ ನನ್ನಿಂದ ಅವರು ಬಿದ್ದರು ಅದಕ್ಕೆ ಏನಾಯ್ತೋ ಅನ್ನೋ ಆತಂಕ ಇತ್ತು, ಅದೆಲ್ಲಾ ಫ್ರೆಂಡ್ ಶಿಪ್ ಅಷ್ಟೇ ಅನ್ನೋ ಮಾತನ್ನ ಹೇಳಿದ್ದಾರೆ. ಒಟ್ನಲ್ಲಿ ಇವತ್ತಿನ ಎಪಿಸೋಡ್ ಮನರಂಜನೆ ವಿಚಾರದಲ್ಲಿ ಭರ್ಜರಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನ ಇಲ್ಲ.‌

Leave a Comment