Urfi Javed: ಉರ್ಫಿ ಜಾವೇದ್ ಹೊಸ ಲುಕ್ ಗೆ ಸಮಂತಾ ಸೇರಿ ಸ್ಟಾರ್ ನಟಿಯರೇ ಆದ್ರು ಫಿದಾ; ಕೊಟ್ರು ಮೆಚ್ಚುಗೆ

Written by Soma Shekar

Published on:

---Join Our Channel---

Urfi Javed: ಉರ್ಫಿ ಜಾವೇದ್ (Urfi Javed) ಅಂತ ಹೇಳಿದ ಕೂಡಲೇ ಎಲ್ಲರಿಗೂ ನೆನಪಾಗೋದು ಉರ್ಫಿ ಧರಿಸೋ ಚಿತ್ರ ವಿಚಿತ್ರವಾದ ಡ್ರೆಸ್ ಗಳು. ಆದರೆ ಈ ಬಾರಿ ಒಂದು ಮ್ಯಾಜಿಕ್ ನಡೆಯುತ್ತೆ ಅಂತ ಉರ್ಫಿ ಹೊಸ ಡ್ರೆಸ್ ತೊಟ್ಟು ಬಂದಿದ್ದನ್ನ ನೋಡಿ ಪಾಪರಾಜಿಗಳು ಅಚ್ಚರಿ ಪಡೋದರ ಜೊತೆಗೆ ಸ್ಟಾರ್ ನಟಿಯರು ಸಹಾ ಉರ್ಫಿ ಸ್ಟೈಲ್ ಗೆ ಮೆಚ್ಚುಗೆ ನೀಡಿದ್ದು, ನೆಟ್ಟಿಗರು ಸಹಾ ಉರ್ಫಿಯ ಹೊಸ ಲುಕ್ ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

ಉರ್ಫಿ ಜಾವೇದ್ ಒಂದು ಹಾಫ್ ಶೋಲ್ಡರ್ ಬ್ಲಾಕ್ ಗೌನ್ (Gown) ಧರಿಸಿದ್ದು, ಅದರ ಮೇಲೆ ಹೂವಿನ ದಳಗಳು ಮತ್ತು ಎಲೆಗಳನ್ನು ಪೋಣಿಸದಂತೆ ಕಂಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಉರ್ಫಿಯ ಈ ಹೊಸ ಡ್ರೆಸ್ ಮತ್ತು ಲುಕ್ ವೈರಲ್ (Viral) ಆಗಿದೆ. ಇದನ್ನು ನೋಡಿ ಬೆರಗುಗೊಂಡಿದ್ದಾರೆ ನೆಟ್ಟಿಗರು. ಈ ಡ್ರೆಸ್ ಎಲ್ಲರ ಗಮನ ಸೆಳೆಯಲು ಕಾರಣವೊಂದಿದೆ ಎಂದೂ ಸಹಾ ಹೇಳಬಹುದಾಗಿದೆ.

ಶ್ವೇತಾ ಗುರ್ಮಿರ್ ಕೌರ್ ಮತ್ತು ಉರ್ಫಿ ಅವರ ಸಹಯೋಗದೊಂದಿಗೆ ‌ಮೆಟಲ್ ಬೆಂಡರ್ ಸ್ಟುಡಿಯೋ ಈ ಹೊಸ ವಿನ್ಯಾಸದ ಡ್ರೆಸ್ ಅನ್ನು ವಿನ್ಯಾಸಗಳಿಸಿದ್ದು, ಫ್ಲೈಯಿಂಗ್ ಬಟರ್ ಫ್ಲೈ ಫ್ಯಾಷನಿಸ್ಟ್ ಗಳಿಗೆ ಒಂದು ಹೊಚ್ಚ ಹೊಸದಾದ ಟ್ರೆಂಡ್ ಅನ್ನು ಈಗ ಪರಿಚಯಿಸಿದೆ. ಉರ್ಫಿಯ ಈ ಹೊಸ ಲುಕ್ ಗೆ ಭರ್ಜರಿಯಾಗಿ ಮೆಚ್ಚುಗೆಗಳು ಹರಿದು ಬರುತ್ತಿವೆ.

ಉರ್ಫಿ ಹೊಸ ವಿನ್ಯಾಸದ ಉಡುಗೆಯಲ್ಲಿ ಸ್ಟೈಲಿಷ್ ಆಗಿ ನಡೆದು ಬಂದು ಚಪ್ಪಾಳೆ ತಟ್ಟಿದ ಕೂಡಲೇ ಡ್ರೆಸ್ ಮೇಲಿರುವ ಹೂವುಗಳು ಅರಳು ವಂತೆ, ಚಿಟ್ಟೆಗಳು ಹಾರುವಂತೆ ವಿನ್ಯಾಸವನ್ನು ಮಾಡಲಾಗಿದ್ದು, ಇದು ಪ್ರತಿಯೊಬ್ಬರ ವಿಶೇಷವಾದ ಗಮನವನ್ನು ಸೆಳೆಯುವ ಮೂಲಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸ್ಟಾರ್ ನಟಿ ಸಮಂತಾ (Samantha Ruth Prabhu) ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಉರ್ಫಿಯ ಈ ಹೊಸ ಲುಕ್ ಅನ್ನು ಶೇರ್ ಮಾಡಿಕೊಂಡಿದ್ದು, ಬ್ಯೂಟಿಫುಲ್ ಉರ್ಫಿ ಎಂದು ಬರೆದಿದ್ದಾರೆ. ಮತ್ತೊಬ್ಬ ನಟಿ ಸೋಫಿ ಚೌದರಿ ಅವರು ಇದು ಅದ್ಭುತವಾಗಿದೆ ಎಂದು ಮೆಚ್ಚುಗೆ ನೀಡಿದ್ದಾರೆ. ಇನ್ನೂ ಕೆಲವು ಸ್ಟಾರ್ ನಟಿಯರು ಸಹಾ ಉರ್ಫಿಯ ಈ ಹೊಸ ಡ್ರೆಸ್ ಗೆ ಮನಸೋತು ಮೆಚ್ಚುಗೆಗಳನ್ನು ನೀಡಿದ್ದಾರೆ.

ಸದಾ ಹೆಚ್ಚು ಟೀಕೆಗಳನ್ನು ಪಡೆಯುತ್ತಿದ್ದ ಉರ್ಫಿಗೆ ಈ ಬಾರಿ ನೆಟ್ಟಿಗರಿಂದಲೂ ಸಹಾ ಮೆಚ್ಚುಗೆಗಳು ಹರಿದು ಬರುತ್ತಿದೆ. ನಟಿಯ ಡ್ರೆಸ್ ನ ಜೊತೆಗೆ ಅವರ ಸೌಂದರ್ಯವನ್ನು ಸಹಾ ಹೊಗಳುತ್ತಿದ್ದಾರೆ ಜನರು. ಉರ್ಫಿ ಇಂತಹ ಸೃಜನಶೀಲ್ ವಿನ್ಯಾಸಗಳನ್ನ ಮಾಡಿದರೆ ಮುಂದಿನ ಮೆಟ್ ಗಾಲಾದಲ್ಲೂ ಭಾಗವಹಿಸಬಹುದೆಂದ ಮೆಚ್ಚುಗೆ ನೀಡಿದ್ದಾರೆ.

Leave a Comment