UAE: ದುಬೈ ಸರ್ಕಾರದ ಸಂಚಲನ ನಿರ್ಣಯ: ಇನ್ಮೇಲೆ ವಾರವೆಲ್ಲಾ ಕೆಲಸ ಮಾಡಬೇಕಾಗಿಲ್ಲ, ಕೆಲಸದ ದಿನಗಳೆಷ್ಟು ಗೊತ್ತಾ??

Written by Soma Shekar

Updated on:

---Join Our Channel---

ದಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ವಾರದಲ್ಲಿ ಕೇವಲ ನಾಲ್ಕೂವರೆ ದಿನಗಳು ಮಾತ್ರವೇ ಉದ್ಯೋಗದ ದಿನಗಳೆಂದು ಪ್ರಕಟಣೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಉದ್ದೇಶದಿಂದ ಶನಿವಾರ ಮತ್ತು ಭಾನುವಾರ ಗಳನ್ನು ವಾರಾಂತ್ಯವನ್ನಾಗಿ ಮಾರ್ಪಾಟುಗಳನ್ನು ಮಾಡುತ್ತಿರುವುದಾಗಿ ಮಂಗಳವಾರ ಘೋಷಣೆಯನ್ನು ಮಾಡಲಾಗಿದೆ. ಈ ವಿಷಯವನ್ನು ದೇಶದ ಅಧಿಕೃತ ಮಾಧ್ಯಮವಾದ WAM ಬಹಿರಂಗಪಡಿಸಿದೆ.

ಇನ್ನು ಮುಂದೆ ಇಲ್ಲಿ ವಾರದಲ್ಲಿ ಕೇವಲ ನಾಲ್ಕೂವರೆ ದಿನಗಳು ಮಾತ್ರ ಕೆಲಸದ ದಿನಗಳಾಗಿದ್ದು, ಮುಂದಿನ ವರ್ಷದಿಂದಲೇ ಅಂದರೆ ಬರುವ ಜನವರಿಯಿಂದಲೇ ಈ ಹೊಸ ನಿಯಮವು ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ ಪ್ರಸ್ತುತ ಯುಎಇ ಶುಕ್ರವಾರ ಮತ್ತು ಶನಿವಾರ ರಜಾ ದಿನಗಳಾಗಿವೆ. ಆದರೆ ಇನ್ನು ಮುಂದೆ ಭಾನುವಾರವನ್ನು ಕೂಡ ರಜಾದಿನವೆಂದು ಘೋಷಣೆ ಮಾಡಲಾಗಿದೆ. ವಿಶ್ವದಾದ್ಯಂತ ಭಾನುವಾರ ರಜಾ ದಿನವಾಗಿದ್ದ, ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೊಸ ನಿರ್ಣಯದ ಪ್ರಕಾರ ಜನವರಿ 1, 2022 ರಿಂದ ವಾರಾಂತ್ಯದ ರಜಾ ದಿನಗಳು ಶುಕ್ರವಾರ ಮಧ್ಯಾಹ್ನದಿಂದಲೇ ಆರಂಭವಾಗುತ್ತದೆ. ಅಂದರೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುವ ರಜೆಯು ಭಾನುವಾರ ಅಂತ್ಯದ ವರೆಗೂ ಮುಂದುವರೆಯುತ್ತದೆ. ಸೌದಿಯೊಂದಿಗೆ ಸ್ಪರ್ಧಿಸಲು ಆರ್ಥಿಕತೆಯನ್ನು ಆಕರ್ಷಿವಾಗಿರಿಸಿ, ವಿದೇಶಿ ಹೂಡಿಕೆ ಮತ್ತು ಪ್ರತಿಭೆಗಳನ್ನು ಆಕರ್ಷಿಸಲು ಯುಎಇ ಈಗಾಗಲೇ ಹಲವು ನಿರ್ಧಾರಗಳನ್ನು ಮಾಡಿದೆ ಎಂದು ತಿಳಿದುಬಂದಿದೆ.

ಹೊಸ ನಿರ್ಣಯದ ಬಗ್ಗೆ ಯುಎಇ ಸರ್ಕಾರವು ಪ್ರತಿಕ್ರಿಯೆ ನೀಡುತ್ತಾ, ಶನಿವಾರ ಮತ್ತು ಭಾನುವಾರ ರಜಾ ದಿನಗಳನ್ನು ಹೊಂದಿರುವ ದೇಶಗಳ ಜೊತೆಗೆ ಆರ್ಥಿಕ ಲೇವಾದೇವಿ ಗಳು ಸುಗಮವಾಗಿ ನಡೆಯುತ್ತದೆ ಎಂದು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಈ ನಿರ್ಣಯದಿಂದ ದೇಶದಲ್ಲಿ ಸಕ್ರಿಯವಾಗಿರುವ ಅನೇಕ ವಿದೇಶಿ ಕಂಪನಿಗಳ ವ್ಯಾಪಾರ ವಹಿವಾಟುಗಳು ಇನ್ನೂ ಸರಳವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಕೂಡಾ ಸರ್ಕಾರ ಹೇಳಿದೆ.

ಶುಕ್ರವಾರ ಶನಿವಾರ ವಾರಾಂತ್ಯ ಹೊಂದಿರದ ಏಕೈಕ ಗಲ್ಫ್ ರಾಷ್ಟ್ರವಾಗಿ ಹೊರಹೊಮ್ಮಿದ ನಂತರ ಸಂಪನ್ಮೂಲ,, ಸಮೃದ್ಧ ಮಹತ್ವಾಕಾಂಕ್ಷೆಯ ಯುಎಇ ಆರಬ್ ಅಲ್ಲದ ಜಗತ್ತಿನೊಂದಿಗೆ ಹೊಂದಿಕೊಂಡಿದ್ದು, ಇದೊಂದು ಮಹತ್ವದ ಬೆಳವಣಿಗೆಯಾಗಿದೆ.

Leave a Comment