TV ಯಲ್ಲಿ ಬರೋದಿಲ್ವಾ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ನ ಹೊಸ ಸೀಸನ್?? ಏನಿದು ಹೊಸ ಸುದ್ದಿ

Entertainment Featured-Articles News
46 Views

ಕೊರೊನಾ ಬಂದು ಎಲ್ಲಾ ಕಡೆಯಲ್ಲೂ ಲಾಕ್ ಡೌನ್ ಘೋಷಣೆಯಾದಾಗ ಜನರ ಮನರಂಜನೆಯ ಪ್ರಮುಖ ಮೂಲವಾಗಿದ್ದ ಸಿನಿಮಾ ಥಿಯೇಟರ್ ಗಳು ಸಹ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟವು. ಆದರೆ ಇತ್ತೀಚೆಗಷ್ಟೇ ಸಂಪೂರ್ಣ ಸೀಟುಗಳನ್ನು ಭರ್ತಿ ಮಾಡುವ ಅವಕಾಶದೊಂದಿಗೆ ಮತ್ತೊಮ್ಮೆ ಸಿನಿಮಾ ಥಿಯೇಟರ್ ಗಳು ಚಾಲನೆ ಪಡೆದುಕೊಂಡಿವೆ. ಆದರೂ ಸಹ ಒಂದಷ್ಟು ಜನಕ್ಕೆ ಸಿನಿಮಾ ಮಂದಿರಗಳ ಕಡೆಗೆ ಹೋಗಲು ಭಯ ಎನ್ನುವುದು ಮನಸ್ಸಿನಲ್ಲಿ ಇದೆ. ಇನ್ನು ಕೊರೋನಾ ಕಾಲದಲ್ಲಿ ಓಟಿಟಿ ಪ್ಲಾಟ್ ಫಾರ್ಮ್ ಗಳು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಕೂಡಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗುವ ಮೂಲಕ ಅವುಗಳ ಪ್ರಾಮುಖ್ಯತೆ ಇನ್ನೂ ಹೆಚ್ಚಾಗಿದೆ. ಹಿಂದಿಯಲ್ಲಾದರೆ ಬಿಗ್ ಬಾಸ್ ನಂತರ ಭರ್ಜರಿ ಶೋ ಕೂಡಾ ಓಟಿಟಿಯಲ್ಲಿ ತನ್ನ‌ ಮೊದಲನೆಯ ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿಯಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಕನ್ನಡದಲ್ಲಿ ಸಹಾ ಇಂತಹ ಒಂದು ಪ್ರಯತ್ನಕ್ಕೆ ಚಾಲನೆ ದೊರೆತಿದೆಯಾ ಎನ್ನುವ ಒಂದು ಪ್ರಶ್ನೆ ಮೂಡಿದೆ. ಹೌದು, ಇದೀಗ ಕನ್ನಡ ಕಿರುತೆರೆಯ ಲೋಕದ ಬಹಳಷ್ಟು ದೊಡ್ಡ ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆದುಕೊಂಡ ಕಾರ್ಯಕ್ರಮ ಒಂದು ಓಟಿಟಿ ಗೆ ಬರಲಿದೆಯಾ?? ಅನ್ನೋ ಅನುಮಾನ ಉಂಟಾಗಿದೆ.

ಸ್ಯಾಂಡಲ್ ವುಡ್ ನ ಸ್ಟಾರ್ ನಟರ ರಮೇಶ್ ಅರವಿಂದ್ ಅವರು ಕಿರುತೆರೆಯಲ್ಲಿ ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಷ್ಟು ಹೆಸರು ಮಾಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಒಂದು ಜನಪ್ರಿಯ ಕಾರ್ಯಕ್ರಮವು ಓಟಿಟಿ ಬರಲು ಸಜ್ಜಾಗುತ್ತಿದೆ ಎನ್ನುವ ಸುದ್ದಿಯೊಂದು ಮಾದ್ಯಮವೊಂದರ ವರದಿಯಲ್ಲಿ ಕಾಣಿಸಿಕೊಂಡಿದ್ದು, ಇದು ಎಲ್ಲರ ಗಮನವನ್ನು ಸೆಳೆದಿದೆ. ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಟಿವಿ ಬದಲಾಗಿ ಓಟಿಟಿ ಯಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿ ಕುತೂಹಲ ಕೆರಳಿಸಿದೆ. ರಮೇಶ್ ಅರವಿಂದ್ ಅವರೇ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ನಿಜವೇ ಆದಲ್ಲಿ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಹಾಗೂ ಜನಪ್ರಿಯತೆಯನ್ನು ಪಡೆದು ಕೊಂಡ ಕಾರ್ಯಕ್ರಮವೊಂದು ಸಂಪೂರ್ಣವಾಗಿ ಓಟಿಟಿ ಟಿವಿಯಲ್ಲಿ ಪ್ರಸಾರವಾಗಲಿದೆ. ಆದರೆ ಈ ವಿಷಯವಾಗಿ ಈ ಕಾರ್ಯಕ್ರಮ ಪ್ರಸಾರವಾಗುವ ಕಿರುತೆರೆ ವಾಹಿನಿಯ ಬಿಸಿನೆಸ್ ಹೆಡ್ ಅವರ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಯಾವುದೇ ಸುಳಿವನ್ನೂ ನೀಡಿಲ್ಲ. ಅಲ್ಲದೇ ಕಾರ್ಯಕ್ರಮವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *