Salman Khan ಬಾಲಿವುಡ್ ಬ್ಯೂಟಿಗಳ ಬದಿಗೊತ್ತಿ ದಕ್ಷಿಣದ ಈ ಇಬ್ಬರು ನಟಿಯರಿಗೆ ಮಣೆ ಹಾಕಿದ ಸಲ್ಲೂ ಭಾಯ್!
Salman Khan : ಬಾಲಿವುಡ್ ನಲ್ಲಿ (Bollywood) ಈಗ ದಕ್ಷಿಣದ ಸಿನಿಮಾಗಳ ನಿರ್ದೇಶಕರು, ನಟ, ನಟಿಯರು, ಇತರೆ ಕಲಾವಿದರಿಗೂ ಸಹಾ ಸಾಕಷ್ಟು ಮಾನ್ಯತೆ ದೊರೆಯಲು ಆರಂಭಿಸಿದೆ. ಇದೀಗ ಯಶಸ್ಸಿನ ನಾಗಾಲೋಟ ಮಾಡುತ್ತಿರುವ ನಟ ಶಾರೂಖ್ ಖಾನ್ (Shah Rukh Khan) ಅವರ ಜವಾನ್ (Jawan) ಸಿನಿಮಾದಲ್ಲೂ ದಕ್ಷಿಣದ ಕಲಾವಿದರ ಜಾದೂ ಇದೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಚಾರವಾಗಿದೆ.
ಈಗ ಬಾಲಿವುಡ್ ನ ಸ್ಟಾರ್ ನಟ, ದಿಗ್ಗಜ ನಟ ಸಲ್ಮಾನ್ ಖಾನ್ (Salman Khan) ಸಹಾ ತಮ್ಮ ಹೊಸ ಸಿನಿಮಾ ನಾಯಕಿಯರಿಗಾಗಿ ದಕ್ಷಿಣದ ಸ್ಟಾರ್ ನಟಿಯರ ಕಡೆಗೆ ಗಮನ ಹರಿಸಿದ್ದಾರೆ ಎನ್ನುವ ವಿಚಾರವೊಂದು ವೈರಲ್ ಆಗುವ ಮೂಲಕ ಸಿಕ್ಕಾಪಟ್ಟೆ ಉತ್ಸುಕತೆಯನ್ನು ಉಂಟು ಮಾಡಿದೆ. ಬಾಲಿವುಡ್ ಬೆಡಗಿಯರನ್ನ ಬದಿಗೊತ್ತಿ ದಕ್ಷಿಣದ ನಟಿಯರ ಕಡೆಗೆ ಸಲ್ಮಾನ್ ಕಣ್ಣು ಹೊರಳಿಸಿದ್ದಾರೆ ಎನ್ನಲಾಗಿದೆ.
ಹೌದು, ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ವಿಷ್ಣುವರ್ಧನ್ ನಲ್ಲಿ (Vishnuvardhan) ಇಬ್ಬರು ನಾಯಕಿಯರಿದ್ದು, ಆ ಇಬ್ಬರೂ ನಾಯಕಿಯರ ಪಾತ್ರಕ್ಕೂ ದಕ್ಷಿಣದ ಸ್ಟಾರ್ ನಟಿಯರನ್ನೇ ಗಮನದಲ್ಲಿ ಇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ದಕ್ಷಿಣ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿರುವ ನಟಿ ತ್ರಿಶಾ (Trisha) ಮತ್ತು ನಟಿ ಸಮಂತಾ (Samantha) ಈ ಇಬ್ಬರೂ ಸಹಾ ಸಲ್ಮಾನ್ ಖಾನ್ ಗೆ ನಾಯಕಿಯರಾಗಿ ತೆರೆಯ ಮೇಲೆ ಮಿಂಚಲು ಸಿದ್ಧವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು, ಈ ಸುದ್ದಿ ಕೇಳಿ ನಟಿಯರ ಅಭಿಮಾನಿಗಳು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ ಮತ್ತು ಖುಷಿ ಪಡುತ್ತಿದ್ದಾರೆ. ಇದು ಕೇವಲ ಸುದ್ದಿಯೋ ಅಥವಾ ಅಧಿಕೃತವೋ ಮುಂದಿನ ದಿನಗಳಲ್ಲಿ ತಿಳಿಯಲಿದೆ.